ರಿಯಲ್‌ಮಿ ಸಂಸ್ಥೆಯಿಂದ ವಿಶ್ವದ ಮೊದಲ SLED 4K TV ಬಿಡುಗಡೆ!

|

ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ರಿಯಲ್‌ಮಿ ಕಂಪೆನಿ ಟೆಕ್‌ವಲಯದಲ್ಲಿ ಇತರೆ ಪ್ರಾಡಕ್ಟ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಪ್ರಾಡಕ್ಟ್‌ಗಳನ್ನು ಪರಿಚಯಿಸಿರುವ ರಿಯಲ್‌ಮಿ ಇದೀಗ ತನ್ನ ಸ್ಮಾರ್ಟ್ SLED TVಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ವಿಶ್ವದ ಮೊದಲ SLED4K TV ಎಂದು ಹೇಳಲಾಗ್ತಿದೆ. ಅಲ್ಲದೆ ಇದರಲ್ಲಿ ಉತ್ತಮ ಸಿನಿಮೀಯ ಅನುಭವವನ್ನು ತರಲು ವಿನ್ಯಾಸಗೊಳಿಸಲಾಗಿದೆ ಎನ್ನಲಾಗ್ತಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆ ತನ್ನ ಹೊಸ ಸ್ಮಾರ್ಟ್ SLED 55 TVಯನ್ನು ಪರಿಚಯಿಸಿದೆ. ಇದು 9.5mm ತೆಳುವಾದ ಅಂಚನ್ನು ಹೊಂದಿದೆ. ಇದು SLED ಪ್ಯಾನೆಲ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸಿನೆಮ್ಯಾಟಿಕ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 4K ಅಲ್ಟ್ರಾ ಹೆಚ್‌ಡಿ ರೆಸಲ್ಯೂಶನ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ

ರಿಯಲ್‌ಮಿ ಸ್ಮಾರ್ಟ್ SLED TV 55 ಇಂಚಿನ ಸಿನೆಮ್ಯಾಟಿಕ್ ಡಿಸ್ಪ್ಲೇಯನ್ನು ಹೊಂದಿದೆ. ಇದು 4K ಅಲ್ಟ್ರಾ HD ರೆಸಲ್ಯೂಶನ್ ಜೊತೆಗೆ 1.7 ಬಿಲಿಯನ್ ಕಲರ್‌ಗಳನ್ನು ಹೊಂದಿದೆ. ಇದು 94.6% ಸ್ಕ್ರಿನ್‌ ಟು ಬಾಡಿ ಅನುಪಾತವನ್ನು ಹೊಂದಿದೆ. ಜೊತೆಗೆ NTSC ಬಣ್ಣದ ಹರವು 108% ವರೆಗೆ ತಲುಪಿಸುತ್ತದೆ ಎಂದು ಹೇಳಲಾಗಿದೆ. RGB ಫಿಲ್ಟರ್‌ಗಳಿಗೆ ಹೋಗುವ ಒಂದೇ ಬಿಳಿ ಬ್ಯಾಕ್‌ಲೈಟ್ ಬಳಸುವ ಸಾಂಪ್ರದಾಯಿಕ ಎಲ್‌ಇಡಿ ಪ್ಯಾನೆಲ್‌ಗಿಂತ ಭಿನ್ನವಾಗಿ, ಎಸ್‌ಎಲ್‌ಇಡಿ ಪ್ಯಾನಲ್ ಎಸ್‌ಪಿಡಿ ಬ್ಯಾಕ್‌ಲೈಟ್ ಅನ್ನು ಆರ್‌ಜಿಬಿ ಎಲ್ಇಡಿ ಲೈಟ್‌ಗಳೊಂದಿಗೆ ಹಿಂಭಾಗದಲ್ಲಿ ಬಳಸುತ್ತದೆ. ಇದು ಹೆಚ್ಚಿನ ಬಣ್ಣದ ಹರವು ಉತ್ಪಾದಿಸಲು ಪ್ರದರ್ಶನವನ್ನು ಶಕ್ತಗೊಳಿಸಲಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಕ್ವಾಡ್-ಕೋರ್ ಮೀಡಿಯಾ ಟೆಕ್ SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 1.2GHz ಕಾರ್ಟೆಕ್ಸ್-A55CPU ಹೊಂದಿದೆ. ಇದು ಮಾಲಿ -470 MP3 GPU ಮತ್ತು 16GB ಸ್ಟೋರೇಜ್‌ ಸಾಮಥ್‌ಯವನ್ನು ಹೊಂದಿದೆ. ಅಲ್ಲದೆ ಈ ಟಿವಿಯಲ್ಲಿ ಡಾಲ್ಬಿ ಆಡಿಯೊ ಟೆಕ್ನಾಲಜಿ ಜೊತೆಗೆ 24W ಕ್ವಾಡ್ ಸ್ಟೀರಿಯೋ ಸ್ಪೀಕರ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಇನ್ನು ಇದರಲ್ಲಿ ವಿಭಿನ್ನ ಮಾದರಿಯ ಡಿಸ್‌ಪ್ಲೇ ಪ್ಯಾನಲ್‌ ಹೊರತಾಗಿ, ಬಣ್ಣ ಉತ್ಪಾದನೆಯನ್ನು ಅತ್ಯುತ್ತಮವಾಗಿಸಲು ಇಂಟರ್‌ಬಿಲ್ಟ್ ಕ್ರೋಮಾ ಬೂಸ್ಟ್ ಪಿಕ್ಚರ್ ಎಂಜಿನ್ ಅನ್ನು ಒಳಗೊಂಡಿದೆ.

ಟಿವಿ

ಸ್ಟ್ಯಾಂಡರ್ಡ್, ಸ್ಪೋರ್ಟ್, ಗೇಮ್, ವಿವಿದ್, ಎನರ್ಜಿ ಸೇವಿಂಗ್, ಯೂಸರ್, ಮತ್ತು ಮೂವಿ ಎಂಬ ಏಳು Performance ವಿಧಾನಗಳಿವೆ. ಕಡಿಮೆ ನೀಲಿ ಬೆಳಕಿನ ಹೊರಸೂಸುವಿಕೆಗಾಗಿ ಟಿವಿಯು ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಒಂದು ಎತರ್ನೆಟ್ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಈ ಟಿವಿಯು ಬ್ಲೂಟೂತ್ ವಿ 5.0 ಮತ್ತು ಇನ್ಫ್ರಾರೆಡ್ ಜೊತೆಗೆ ವೈರ್ಲೆಸ್ ಕನೆಕ್ಟಿವಿಟಿಯ ಭಾಗವಾಗಿ ಡ್ಯುಯಲ್-ಬ್ಯಾಂಡ್ ವೈ-ಫೈ ಬೆಂಬಲವನ್ನು ಸಹ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಬೆಲೆ ರೂ. 42,999,ಆಗಿದೆ. ಅಲ್ಲದೆ ಈ ಟಿವಿ ಪರಿಚಯಾತ್ಮಕ ಬೆಲೆಗೆ ರೂ. ಮೊದಲ ಮಾರಾಟದ ಅವಧಿಯಲ್ಲಿ 39,999 ರೂ. ಗಳಿಗೆ ಲಭ್ಯವಾಗಲಿದೆ.

Best Mobiles in India

English summary
Realme Smart SLED TV 55-inch price in India is Rs. 42,999, though the TV will start at an introductory price of Rs. 39,999 for now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X