ಭಾರತದ ಮಾರುಕಟ್ಟೆಯಲ್ಲಿ ರಿಯಲ್‌ಮಿ ಸ್ಮಾರ್ಟ್‌ಟಿವಿ 4K ಬಿಡುಗಡೆ!

|

ಜನಪ್ರಿಯ ರಿಯಲ್‌ಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ರಿಯಲ್‌ಮಿ ಸ್ಮಾರ್ಟ್‌ಟಿವಿ 4K ಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 43 ಮತ್ತು 50 ಇಂಚಿನ ಎರಡು ಮಾದರಿಯಲ್ಲಿ ಬರಲಿದೆ.ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೋಸ್‌ನಂತಹ ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ಟಿವಿ

ಹೌದು, ರಿಯಲ್‌ಮಿ ಸಂಸ್ಥೆ ಹೊಸ ರಿಯಲ್‌ಮಿ ಸ್ಮಾರ್ಟ್‌ಟಿವಿ 4K ಯನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್ ಟಿವಿಯು ಎಚ್‌ಡಿಎಂಐ ಮತ್ತು ಯುಎಸ್‌ಬಿ ಪೋರ್ಟ್‌ಗಳು ಮತ್ತು ವೈ-ಫೈ ಮತ್ತು ಬ್ಲೂಟೂತ್ ಅನ್ನು ಒಳಗೊಂಡಿರುವ ಸಂಪರ್ಕ ಆಯ್ಕೆಗಳ ಪಟ್ಟಿಯನ್ನು ಹೊಂದಿದೆ. ಇದು ಕ್ವಾಡ್‌ ಕೋರ್‌ ಮೀಡಿಯಾ ಟೆಕ್‌ SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ TV 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ರೆಸಲ್ಯೂಶನ್‌

ರಿಯಲ್‌ಮಿ ಸ್ಮಾರ್ಟ್ ಟಿವಿ 4K 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 43- ಮತ್ತು 50-ಇಂಚಿನ ಡಿಸ್‌ಪ್ಲೇ ಗಾತ್ರಗಳಲ್ಲಿ ಬರುತ್ತದೆ. ಈ ಎರಡೂ ಮಾದರಿಗಳು 16:9 ರಚನೆಯ ಅನುಪಾತ ಮತ್ತು 178 ಡಿಗ್ರಿ ಸ್ಕ್ರೀನ್ ವ್ಯೂವ್‌ ಆಂಗಲ್‌ ಅನ್ನು ಹೊಂದಿರುತ್ತದೆ. ಇನ್ನು ಈ ಸ್ಮಾರ್ಟ್ ಟಿವಿ ಕ್ವಾಡ್-ಕೋರ್ ಮೀಡಿಯಾ ಟೆಕ್ SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಟಿವಿ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಸಹ ಹೊಂದಿದೆ.

ರಿಯಲ್‌ಮಿ

ಇನ್ನು ರಿಯಲ್‌ಮಿ ಸ್ಮಾರ್ಟ್ ಟಿವಿ 4K ನಾಲ್ಕು ಸ್ಪೀಕರ್ ಯೂನಿಟ್‌ಗಳನ್ನು ಹೊಂದಿದ್ದು ಅದು ಒಟ್ಟು 24W ಔಟ್‌ಪುಟ್ ಅನ್ನು ಜಂಟಿಯಾಗಿ ನೀಡುತ್ತದೆ. ಇದು ಡಾಲ್ಬಿ ಅಟ್ಮೋಸ್, ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ ಹೆಚ್‌ಡಿ ಬೆಂಬಲವನ್ನು ಸಹ ಒಳಗೊಂಡಿದೆ. ಪಡೆಯುತ್ತೀರಿ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಕ್ವಾಡ್ ಮೈಕ್ರೊಫೋನ್‌ಗಳಿವೆ, ಇವು ಗೂಗಲ್ ಅಸಿಸ್ಟೆಂಟ್ ಬೆಂಬಲದೊಂದಿಗೆ ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ಗಳನ್ನು ಸಕ್ರಿಯಗೊಳಿಸುತ್ತದೆ.

ರಿಯಲ್‌ಮಿ

ಇದಲ್ಲದೆ ರಿಯಲ್‌ಮಿ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ನಂತಹ ಅಪ್ಲಿಕೇಶನ್‌ಗಳನ್ನು ಪ್ರೀ ಲೋಡ್ ಮಾಡಿದೆ. ಈ ಸ್ಮಾರ್ಟ್ ಟಿವಿ ಗೂಗಲ್ ಪ್ಲೇ ಸ್ಟೋರ್ ಅನ್ನು ಸಹ ಒಳಗೊಂಡಿದೆ ಮತ್ತು ಇಂಟರ್‌ಬಿಲ್ಟ್‌ ಕ್ರೋಮ್ಕಾಸ್ಟ್ ಬೆಂಬಲವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ ವಿ 5.0, ಇನ್ಫ್ರಾರೆಡ್ (ಐಆರ್), ಎರಡು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಎಚ್‌ಡಿಎಂಐ ಎಆರ್‌ಸಿ ಪೋರ್ಟ್ ಮತ್ತು ಲ್ಯಾನ್ (ಎತರ್ನೆಟ್) ಪೋರ್ಟ್ ಅನ್ನು ಒಳಗೊಂಡಿದೆ.

ರಿಯಲ್‌ಮಿ

ಭಾರತದಲ್ಲಿ ರಿಯಲ್‌ಮಿ ಸ್ಮಾರ್ಟ್ ಟಿವಿ 4K ಬೆಲೆ 43 ಇಂಚಿನ ರೂಪಾಂತರಕ್ಕೆ 27,999ರೂ, 50 ಇಂಚಿನ ಆಯ್ಕೆಗೆ 39,999 ರೂ. ಆಗಿದೆ. ಇನ್ನು ಈ ಸ್ಮಾರ್ಟ್ ಟಿವಿ ಫ್ಲಿಪ್ಕಾರ್ಟ್, ರಿಯಲ್‌ಮಿ.ಕಾಮ್ ಮತ್ತು ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಇದು ಇದೇ ಜೂನ್ 4 ರಿಂದ ಮಧ್ಯಾಹ್ನ 12ಕ್ಕೆ (ಮಧ್ಯಾಹ್ನ) ಸೇಲ್‌ ಆಗಲಿದೆ.

Best Mobiles in India

English summary
Realme Smart TV 4K runs on Android TV 10 and comes in 43- and 50-inch screen sizes.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X