ರಿಯಲ್‌ಮಿ ಸ್ಮಾರ್ಟ್‌ಟಿವಿ 4K ಫೀಚರ್ಸ್‌ ಬಹಿರಂಗ!

|

ಜನಪ್ರಿಯ ರಿಯಲ್‌ಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಟಿವಿ ಪರಿಚಯಿಸುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ತನ್ನ ಹೊಸ ರಿಯಲ್‌ಮಿ ಸ್ಮಾರ್ಟ್‌ಟಿವಿ 4Kಯನ್ನು ಭಾರತದಲ್ಲಿ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಟಿವಿ ಇದೇ ಮೇ 31 ಕ್ಕೆ ಬಿಡುಗಡೆ ಆಗಲಿದ್ದು, ಇದರ ಬೆಲೆ ಎಷ್ಟಿರಲಿದೆ ಅನ್ನೊದು ಬಹಿರಂಗವಾಗಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆ ಹೊಸ ರಿಯಲ್‌ಮಿ ಸ್ಮಾರ್ಟ್ ಟಿವಿ 4K ಬಿಡುಗಡೆಗೆ ದಿನಾಂಕ ಫಿಕ್ಸ್‌ ಮಾಡಿದೆ. ಇದೀಗ ಇದರ ಬೆಲೆ ವಿವರ ಕೂಡ ಬಹಿರಂಗವಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 43 ಇಂಚು ಮತ್ತು 50 ಇಂಚಿನ ಎರಡು ಮಾದರಿಗಳನ್ನು ಪ್ರಾರಂಭಿಸಲಿದೆ. ಈ ಎರಡೂ ಸ್ಮಾರ್ಟ್‌ಟಿವಿಗಳು ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲವನ್ನು ಒಳಗೊಂಡಿರುತ್ತವೆ. ರಿಯಲ್‌ಮಿ ಸ್ಮಾರ್ಟ್ ಟಿವಿ 4K ಮಾದರಿಗಳು ಕ್ವಾಡ್-ಕೋರ್ ಮೀಡಿಯಾ ಟೆಕ್ SoC ಪ್ರೊಸೆಸರ್‌ ಹೊಂದಿರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ಸ್ಮಾರ್ಟ್ ಟಿವಿ

ರಿಯಲ್‌ಮಿ ಸ್ಮಾರ್ಟ್ ಟಿವಿ 4K 43-ಇಂಚಿನ ಮತ್ತು 50-ಇಂಚಿನ ಮಾದರಿಯಲ್ಲಿ ಬರಲಿದೆ. ಈ ಮಾದರಿಗಳು ಕ್ವಾಡ್-ಕೋರ್ ಮೀಡಿಯಾ ಟೆಕ್ SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ ಟಿವಿ 10 ನಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ನಿಖರವಾದ ಕಲರ್ ರಿಪ್ರೊಡಕ್ಷನ್‌ ಗಾಗಿ ಇದು ಇಂಟರ್‌ಬಿಲ್ಟ್‌ ಕ್ರೋಮಾ ಬೂಸ್ಟ್ ಪಿಕ್ಚರ್ ಎಂಜಿನ್‌ನೊಂದಿಗೆ ಬರುವ ಸಾಧ್ಯತೆ ಇದೆ. ಈ ಎರಡೂ ಮಾದರಿಗಳು 178 ಡಿಗ್ರಿ ಕೋನಗಳು ಮತ್ತು 1.07 ಬಿಲಿಯನ್ ಬಣ್ಣಗಳೊಂದಿಗೆ 4ಕೆ ರೆಸಲ್ಯೂಶನ್ ಹೊಂದಿರುತ್ತವೆ ಎನ್ನಲಾಗಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ತಂತ್ರಜ್ಞಾನವನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆಡಿಯೊವನ್ನು 24W ಕ್ವಾಡ್ ಸ್ಟೀರಿಯೋ ಸ್ಪೀಕರ್ ಸಿಸ್ಟಮ್ ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ಎಚ್ಡಿ ಬೆಂಬಲದೊಂದಿಗೆ ನಿರ್ವಹಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಎವಿ ಔಟ್ ಪೋರ್ಟ್, ಎತರ್ನೆಟ್ ಪೋರ್ಟ್ ಮತ್ತು ಟ್ಯೂನರ್ ಪೋರ್ಟ್‌ ಅನ್ನು ಬೆಂಬಲಿಸಬಹುದು ಎಂದು ನಿರೀಕ್ಷಿಸಲಾಗಿದೆ. ಗೆ ಬರಬಹುದು. ಇದು ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ವಿ 5 ಅನ್ನು ಸಹ ಹೊಂದಿರುತ್ತದೆ. 43 ಇಂಚಿನ ಮಾದರಿಯನ್ನು 100W ವಿದ್ಯುತ್ ಬಳಕೆಗಾಗಿ ರೇಟ್ ಮಾಡಲಾಗಿದ್ದು, 50 ಇಂಚಿನ ಮಾದರಿಯನ್ನು 200W ಗೆ ರೇಟ್ ಮಾಡಲಾಗಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ ಬೆಂಬಲ, ಧ್ವನಿ ನೆರವು ಮತ್ತು ಗಾತ್ರಗಳನ್ನು ಹೊರತುಪಡಿಸಿ, ಟಿವಿ ಮಾದರಿಗಳ ಬೆಲೆ ಅಥವಾ ವಿಶೇಷಣಗಳ ಬಗ್ಗೆ ರಿಯಲ್‌ಮಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ರಿಯಲ್‌ಮೆ ಸ್ಮಾರ್ಟ್ ಟಿವಿ 4 ಕೆ ಅನ್ನು ಮೇ 31 ರಂದು ಮಧ್ಯಾಹ್ನ 12: 30 ಕ್ಕೆ ಅನಾವರಣವಾಗಲಿದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಟಿವಿ 43 ಇಂಚಿನ ಮಾದರಿಗೆ 28,000ರೂ. ಮತ್ತು 30,000ರೂ. 50 ಇಂಚಿನ ಮಾದರಿಯ ಬೆಲೆ 33,000ರೂ. ಮತ್ತು 35,000.ರೂ. ಬೆಲೆಹೊಂದಿರುವ ಸಾಧ್ಯತೆ ಇದೆ.

Most Read Articles
Best Mobiles in India

English summary
Realme Smart TV 4K models are expected to come with an inbuilt Chroma Boost Picture Engine for accurate colours.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X