ಭಾರತದಲ್ಲಿ ರಿಯಲ್‌ಮಿ ಟೆಕ್‌ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
ಟೆಕ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ತನ್ನ ಭಿನ್ನ ಮಾದರಿಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇಯರ್‌ಬಡ್ಸ್ ವಲಯದಲ್ಲಿಯೂ ಕೂಡ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ರಿಯಲ್‌ಮಿ ಟೆಕ್‌ಲೈಫ್ ಬಡ್ಸ್ T100 ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಇಯರ್‌ಬಡ್ಸ್ ಇದೇ ಆಗಸ್ಟ್ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಯಲ್‌ಮಿ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಮಾಡಿದೆ.

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ಹೊಸ ರಿಯಲ್‌ಮಿ ಟೆಕ್‌ಲೈಫ್ ಬಡ್ಸ್ T100 ಬಿಡುಗಡೆಗೆ ವೇದಿಕೆ ಸಿದ್ದಪಡಿಸಿದೆ. ಈ ಬಡ್ಸ್ 10 ಎಂಎಂ ಆಡಿಯೋ ಡೈನಾಮಿಕ್ ಡ್ರೈವರ್ ಹೊಂದಿದೆ ಎನ್ನಲಾಗಿದೆ. ಇದಲ್ಲದೆ ಈ ಬಡ್ಸ್ ಸಿಂಗಲ್ ಚಾರ್ಜ್‌ನಲ್ಲಿ 28 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ ಎಂದು ಹೇಳಲಾಗ್ತಿದೆ. ಇದು ಎರಡು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದರೆ ರಿಯಲ್‌ಮಿ ಟೆಕ್‌ಲೈಫ್ ಬಡ್ಸ್ T100 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ ಟೆಕ್‌ಲೈಫ್ ಬಡ್ಸ್ T100 ಇಯರ್‌ಬಡ್ಸ್ 10mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ. ಈ ಬಡ್ಸ್ ದಕ್ಷತಾಶಾಸ್ತ್ರದ ವಿನ್ಯಾಸದೊಂದಿಗೆ ಬರಲಿದ್ದು, ಎರಡು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ, ರಿಯಲ್‌ಮಿ ಟೆಕ್‌ಲೈಫ್ ಬಡ್ಸ್ T100 ನ ಬ್ಯಾಟರಿಯು ಕೇಸ್ ಜೊತೆಗೆ ಸಿಂಗಲ್ ಚಾರ್ಜ್‌ನಲ್ಲಿ 28 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಈ ಇಯರ್‌ಬಡ್ಸ್ ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನು ಅಧಿಕೃತವಾಗಿಲ್ಲ.

ಇನ್ನು ರಿಯಲ್‌ಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ರಿಯಲ್‌ಮಿ ಬಡ್ಸ್ ಏರ್ 3 ನಿಯೋ ಮತ್ತು ರಿಯಲ್‌ಮಿ ಬಡ್ಸ್ ವೈರ್‌ಲೆಸ್ 2S ಇಯರ್ ಫೋನ್ ಅನ್ನು ಪರಿಚಯಿಸಿದೆ. ಇದರಲ್ಲಿ ರಿಯಲ್‌ಮಿ ಬಡ್ಸ್ ಏರ್ 3 ನಿಯೋ ಇಯರ್‌ಬಡ್ಸ್ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸಲಿದೆ. ಇದನ್ನು ನೀವು ಆಪಲ್ ಮ್ಯೂಸಿಕ್‌ನಂತಹ ಅಪ್ಲಿಕೇಶನ್‌ಗಳೊಂದಿಗೆ ಬಳಸಬಹುದು. ಇನ್ನು ಈ ಇಯರ್‌ಬಡ್ಸ್ ಆಕ್ಟಿವ್ ನಾಯ್ಸ್ ಅನ್ನು ಬೆಂಬಲಿಸುವುದಿಲ್ಲ ಎನ್ನಲಾಗಿದೆ.

ಇನ್ನು ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2S ನೆಕ್‌ಬ್ಯಾಂಡ್ ಇಯರ್ ಫೋನ್ ಆಗಿದೆ. ಇದು ಬಡ್ಸ್ ವೈರ್‌ಲೆಸ್ 2 ನ ಟೋನ್-ಡೌನ್ ಆವೃತ್ತಿಯಾಗಿದೆ. ಈ ನೆಕ್‌ಬ್ಯಾಂಡ್ ENC ನೊಂದಿಗೆ ಬರುತ್ತದೆ. ಇನ್ನು ಈ ನೆಕ್‌ಬ್ಯಾಂಡ್ ತ್ವರಿತ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 24 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ ಎಂದು ಹೇಳಲಾಗಿದೆ. ಈ ನೆಕ್‌ಬ್ಯಾಂಡ್ ಭಾರತದಲ್ಲಿ 1,499ರೂ.ಬೆಲೆಯನ್ನು ಹೊಂದಿದೆ. ಆದರೆ ಪರಿಚಯಾತ್ಮಕ ಕೊಡುಗೆಯಾಗಿ 1,299ರತೂ.ಬೆಲೆಗೆ ದೊರೆಯಲಿದೆ.

ಇದರೊಂದಿಗೆ ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ ವಾಚ್ 3 ಅನ್ನು ಕೂಡ ಪರಿಚಯಿಸಿತ್ತು. ಇದು ನಿಮ್ಮ ಮಣಿಕಟ್ಟಿನಲ್ಲಿರುವಾಗ ಸ್ಮಾರ್ಟ್‌ಫೋನ್‌ಗಾಗಿ ಹ್ಯಾಂಡ್ಸ್-ಫ್ರೀ ಸ್ಪೀಕರ್ ಡಿವೈಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್ 1.8 ಇಂಚಿನ TFT-LCD ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಅನ್ನು ರೇಟ್ ಮಾಡಿದೆ. ಅಲ್ಲದೆ ಹೃದಯ ಬಡಿತ ಮತ್ತು SpO2 ಮಾನಿಟರಿಂಗ್ ಮತ್ತು ಸ್ಲೀಪ್ ಟ್ರ್ಯಾಕಿಂಗ್ ಸೆನ್ಸಾರ್‌ಗಳನ್ನು ಕೂಡ ಒಳಗೊಂಡಿದೆ.

ಇದಲ್ಲದೆ ಈ ಸ್ಮಾರ್ಟ್‌ವಾಚ್ ವರ್ಕೌಟ್ ಟ್ರ್ಯಾಕಿಂಗ್‌ಗಾಗಿ 110 ಕ್ಕೂ ಹೆಚ್ಚು ಫಿಟ್‌ನೆಸ್ ಮೋಡ್‌ಗಳನ್ನು ಹೊಂದಿದೆ. ಇದು 340mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ ಏಳು ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ರಿಯಲ್‌ಮಿ ವಾಚ್ 3 ಭಾರತದಲ್ಲಿ 3,499ರೂ, ಬೆಲೆಯನ್ನು ಹೊಂದಿದೆ. ಆದರೆ ಇದರ ಲಾಂಚ್ ಆಫರ್ ಪ್ರಯುಕ್ತ ಇದನ್ನು ನೀವು ಕೇವಲ 2,999 ರೂ.ಗಳಿಗೆ ಖರೀದಿಸಬಹುದು.


Click it and Unblock the Notifications








