Realme; ಮುಂಬರುವ ಸ್ಮಾರ್ಟ್‌ಫೋನ್‌ಗಳಿಗೆ 300W ವೇಗದ ಚಾರ್ಜಿಂಗ್ ಸೌಲಭ್ಯ ಅಳವಡಿಸಲು ಮುಂದಾದ ರಿಯಲ್‌ಮಿ !
ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರ ಬಳಗವನ್ನು ಹೊಂದಿರುವ ರಿಯಲ್‌ಮಿ (Realme) ಸಂಸ್ಥೆ ಆಗಾಗ ನೂತನ ಸ್ಮಾರ್ಟ್‌ಫೋನ್‌ಗಳನ್ನು ಜಾರಿಗೆ ತರುವ ಮೂಲಕ ಗ್ರಾಹಕರನ್ನು ಸೆಳೆದಿದೆ. ಇದರ ವಿಭಿನ್ನ ಫೀಚರ್ಸ್‌ಗಳು ಗ್ರಾಹಕರನ್ನು ಆಕರ್ಷಿಸಿವೆ, ಜೊತೆಗೆ ಆಗಾಗ ಹೊಸ ಹೊಸ ಅಪ್ಡೇಟ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಹೊಸ ಅನುಭವ ನೀಡುವಲ್ಲಿಯೂ ರಿಯಲ್‌ಮಿ ಯಾಶಸ್ವಿಯಾಗಿದೆ. ಇದೀಗ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಳಿಗೆ 300W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಿಲಿದೆ ಎಂಬ ಅಂಶವನ್ನು ಕಂಪನಿಯ ಹಿರಿಯ ಕಾರ್ಯನಿರ್ವಾಹರು ಖಚಿತಪಡಿಸಿದ್ದಾರೆ. ಹಾಗಿದ್ರೆ ಬನ್ನಿ ಈ ಫಾಸ್ಟ್ ಚಾರ್ಜಿಂಗ್ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಅಂಶವನ್ನು ಈ ಲೇಖನದಲ್ಲಿ ತಿಳಿಯೋಣ.
ಹೌದು, ಕಳೆದ ವರ್ಷ ಬಿಡುಗಡೆಯಾದ Realme GT Neo 5 ಸ್ಮಾರ್ಟ್‌ಫೋನ್‌ಗೆ 240W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ರಾರಂಭಿಸಿದೆ. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 100 ಪ್ರತಿಶತದಷ್ಟು ಬ್ಯಾಟರಿಯನ್ನು ಫುಲ್ ಮಾಡುತ್ತದೆ ಎಂದು ಹೇಳಲಾಗಿದೆ. ಇದೀಗ ಚೀನೀ ಟೆಕ್ ಬ್ರ್ಯಾಂಡ್ ಮುಂಬರುವ ಹ್ಯಾಂಡ್‌ಸೆಟ್‌ಗಳಿಗೆ ಹೊಸ ಚಾರ್ಜಿಂಗ್ ತಂತ್ರಜ್ಞಾನದ ಜೊತೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಮುಂಬರುವ ಸ್ಮಾರ್ಟ್‌ಫೋನ್ ಗಳಿಗೆ 300W ಚಾರ್ಜಿಂಗ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹಿರಿಯ ರಿಯಲ್‌ಮಿ ಕಾರ್ಯನಿರ್ವಾಹಕರು ಖಚಿತಪಡಿಸಿದ್ದಾರೆ.

ಅವರು ಯೂಟ್ಯೂಬ್ ಚಾನೆಲ್ ಆಗಿರುವ ದಿ ಟೆಕ್ ಚಾಪ್‌ಗೆ ನೀಡಿದ ಸಂದರ್ಶನದಲ್ಲಿ, ರಿಯಲ್‌ಮಿ ಯುರೋಪ್‌ನ ಸಿಇಒ ಮತ್ತು ಗ್ಲೋಬಲ್ ಮಾರ್ಕೆಟಿಂಗ್ ನಿರ್ದೇಶಕ ಫ್ರಾನ್ಸಿಸ್ ವಾಂಗ್, ರಿಯಲ್‌ಮಿ 300W ಚಾರ್ಜಿಂಗ್ ಅನ್ನು ಪರೀಕ್ಷಿಸುತ್ತಿದೆ ಎಂದು ದೃಢಪಡಿಸಿದ್ದಾರೆ. ಈ ತಂತ್ರಜ್ಞಾನದಿಂದ ಇತ್ತೀಚಿನ ಶಿಯೋಮಿ ಮೊಬೈಲ್‌ಗಳ ಜೊತೆಗೆ ಸ್ಪರ್ಧಿಸಲು ಬ್ರ್ಯಾಂಡ್‌ಗೆ ಸಹಾಯ ಮಾಡುತ್ತದೆ ಎನ್ನಲಾಗುತ್ತಿದೆ. ಇದು ಕೂಡ ಇದೇ ರೀತಿ ವೇಗದ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.
Redmi ಈಗಾಗಲೇ ಕಳೆದ ವರ್ಷ ಫೆಬ್ರವರಿಯಲ್ಲಿ 4,100mAh ಬ್ಯಾಟರಿಯೊಂದಿಗೆ ಮಾರ್ಪಡಿಸಿದ Redmi Note 12 ಡಿಸ್ಕವರಿ ಆವೃತ್ತಿಯ ಸ್ಮಾರ್ಟ್‌ಫೋನ್‌ನಲ್ಲಿ 300W ಚಾರ್ಜಿಂಗ್ ಅನ್ನು ಬಳಸಿದೆ. ಈ ಚಾರ್ಜಿಂಗ್ ತಂತ್ರಜ್ಞಾನವು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಬ್ಯಾಟರಿಯನ್ನು ಫಿಲ್ ಮಾಡಲು ಸಹಾಯ ಮಾಡಲಿದೆ. Realme ಈಗಾಗಲೇ ತನ್ನ ರಿಯಲ್‌ಮಿ GT Neo 5 ನಲ್ಲಿ 240W ಚಾರ್ಜಿಂಗ್ ಅನ್ನು ನೀಡುತ್ತದೆ, ಇದು 4,600mAh ಬ್ಯಾಟರಿಯನ್ನು 80 ಸೆಕೆಂಡುಗಳಲ್ಲಿ ಶೂನ್ಯದಿಂದ 20 ಪ್ರತಿಶತದವರೆಗೆ, ನಾಲ್ಕು ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಮತ್ತು 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. 30 ಸೆಕೆಂಡ್ ಚಾರ್ಜಿಂಗ್ ಮಾಡಿದರೆ ಎರಡು ಗಂಟೆಗಳವರೆಗೆ ಟಾಕ್ ಟೈಮ್ ಮಾಡಬಹುದು ಎಂದು ಹೇಳಲಾಗುತ್ತಿದೆ.
Realme GT Neo 5 ಇದು ಸುಮಾರು ರೂ. 39,000 ಆರಂಭಿಕ ಬೆಲೆ ಜೊತೆಗೆ ಅನಾವರಣಗೊಳಿಸಲಾಗಿದೆ. ಇದು 6.74 ಇಂಚಿನ 1.5K AMOLED ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್ ಹೊಂದಿದೆ ಮತ್ತು Snapdragon 8+ Gen 1 SoC ನಿಂದ ಬೆಂಬಲಿತವಾಗಿದೆ. 50MP ಪ್ರಾಥಮಿಕ ಸೆನ್ಸಾರ್, 16MP ಸೆಲ್ಫಿ ಶೂಟರ್ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಜೊತೆಗೆ 1TB ಸ್ಟೋರೇಜ್ ಸೇರಿ ಇತರೆ ಫೀಚರ್ಸ್ ಜೊತೆಗೆ ಸ್ಮಾರ್ಟ್‌ಫೋನ್ ಸಿಗಲಿದೆ.
iQoo 11S (200W), Infinix Zero Ultra 5G (180W), ಮತ್ತು Realme GT Neo 3 (150W) ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ವೇಗವಾಗಿ ಚಾರ್ಜಿಂಗ್ ಫೋನ್‌ಗಳಾಗಿವೆ, ಆದರೆ ಮುಂಬರುವ Realme ಮತ್ತು Redmi (ಅಥವಾ Xiaomi) ಫೋನ್‌ಗಳು ಶೀಘ್ರದಲ್ಲೇ ಇವುಗಳನ್ನು ಮೀರಿಸಬಹುದು ಎನ್ನಲಾಗುತ್ತಿದೆ.


Click it and Unblock the Notifications








