ಬರಲಿವೆ 'ರಿಯಲ್‌ಮಿ'ಯಿಂದ ಸ್ಮಾರ್ಟ್ ಉತ್ಪನ್ನಗಳು!

|

ಟೆಕ್‌ ಲೋಕದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಯಾಗಿರೋ ರಿಯಲ್‌ಮಿ ಕೆಲ ದಿನಗಳ ಹಿಂದೆಯಷ್ಟೇ ಇಯರ್‌ಬಡ್‌ ಗಳನ್ನ ಸಹ ಬಿಡುಗಡೆ ಮಾಡಿತ್ತು. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನ ಕಂಪೆನಿಯಿಂದ ಹೊರ ತರೋದಾಗಿ ಹೇಳಿಕೊಂಡಿತ್ತು. ಇದೀಗ ರಿಯಲ್‌ ಮಿ ಕಂಪೆನಿ 2020ರಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆ ಜೊತೆಗೆ ಐಒಟಿ(IOT) ಉತ್ಪನ್ನಗಳನ್ನ ಮಾರುಕಟ್ಟೆಗೆ ಬಿಡಲಿದ್ದೇವೆ ಅಂತಾ ಹೇಳಿದೆ.

ಹೌದು

ಹೌದು, ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ 2020ರಲ್ಲಿ ಐಒಟಿ(IOT) ಆಧಾರಿತ ಪ್ರಾಡಕ್ಟ್‌ಗಳನ್ನ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದೆ. ಈಗಾಗಲೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರೋ ರಿಯಲ್‌ಮಿ ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಯೋಜನೆ ರೂಪಿಸಿದೆ. ಈಗಾಗಲೇ ಕೆಲವೇ ಕೆಲ ಸ್ಮಾರ್ಟಫೋನ್‌ ಕಂಪೆನಿಗಳು ಮಾತ್ರ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಐಒಟಿ(IOT) ಪ್ರಾಡಕ್ಟ್‌ಗಳನ್ನ ಉತ್ಪಾದನೆ ಮಾಡ್ತಿವೆ. ಆ ಸಾಲಿಗೆ ಇದೀಗ ರಿಯಲ್‌ಮಿ ಕಂಪೆನಿ ಕೂಡ ಸೇರಿಕೊಳ್ಳಲಿದೆ.

ಐಒಟಿ

ಇನ್ನು ಐಒಟಿ ಉತ್ಪನ್ನಗಳು ಅಂದರೆ ಇಂಟರ್ನೆಟ್‌ ಮೂಲಕ ಕಾರ್ಯನಿರ್ವಹಿಸ ಬಲ್ಲವು. ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್‌ ಬ್ಯಾಂಡ್‌ಗಳು, ಇತರೆ ಸ್ಮಾರ್ಟ್‌ ಪ್ರಾಡಕ್ಟಗಳಾಗಿದ್ದು ಇವುಗಳೆಲ್ಲವೂ ಇಂಟರ್ನೆಟ್‌ ಆಧಾರಿತವಾಗಿ ಕಾರ್ಯನಿರ್ವಹಿಸುತ್ತವೆ. ಇನ್ನು ರಿಯಲ್‌ ಮಿ ಕಂಪೆನಿಯ ಸಿಇಒ ಮಾಧವ್ ಶೆಠ್‌ ಪ್ರಕಾರ ಕಂಪೆನಿ ಕೇವಲ ಸ್ಮಾರ್ಟ್‌ಫೋನ್‌ ತಯಾರಿಕೆ ಗೆ ಮಾತ್ರ ಸೀಮಿತವಾಗಿರುವುದಿಲ್ಲ ಮುಂದಿನ ದಿನಗಳಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಬಿಡಿಭಾಗಗಳು, ಸಾಫ್ಟ್‌ವೇರ್, ಐಒಟಿ(iot) ಉತ್ಪನ್ನಗಳು ಮತ್ತು ಸ್ಮಾರ್ಟ್‌ಫೋನ್‌ಗಳತ್ತ ಗಮನ ಹರಿಸಲಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ.

ರಿಯಲ್‌ ಮಿ

ಇನ್ನು ರಿಯಲ್‌ ಮಿ ಕಂಪೆನಿ ಹೊರ ತರಲಿರುವ ಐಒಟಿ ಉತ್ತನ್ನಗಳಾದ ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಬ್ಯಾಂಡ್‌ ಹಾಗೂ ಹೊಸ ಸಾಫ್ಟ್‌ವೇರ್‌ ಸಿಸ್ಟಮ್‌ 2020 ರ ಆರಂಭದ ವೇಳೆಗೆ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆ ಇದೆ. ಹಾಗಂತ ರಿಯಲ್‌ ಮಿ ಕಂಪೆನ ಹೊರ ತರಲಿರುವ ಐಒಟಿ ಉತ್ತನ್ನಗಳು ಕೇವಲ ರಿಯಲ್‌ಮಿ ಮೊಬೈಲ್ ಫೋನ್ ಬ್ರಾಂಡ್ಗೆ ಮಾತ್ರ ಸೀಮಿತ ಆಗುವುದಿಲ್ಲ. ಬದಲಾಗಿ, ಇದು ತಂತ್ರಜ್ಞಾನದ ಹೊಸ ಜೀವನಶೈಲಿಯ ಬ್ರಾಂಡ್ ಆಗಿ ಪರಿಣಮಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ತುಂಬಾ

ನಮ್ಮ ಯೋಜನೆಗಳು ತುಂಬಾ ಸರಳವಾಗಿದ್ದು, ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಗ್ರಾಹಕರನ್ನ ಬಳಕೆದಾರರನ್ನ ಸೆಳೆಯಲಿದ್ದೇವೆ, ಇದಕ್ಕಾಗಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಪ್ರಾರಂಭಿಸುತ್ತೇವೆ ಅಲ್ಲದೆ ರಿಯಲ್‌ಮಿ ಬಳಕೆದಾರರಿಗೆ ಸಹಾಯ ಮಾಡುವ ಮತ್ತು ಪ್ರಯೋಜನ ನೀಡಬಲ್ಲ ಸ್ಮಾರ್ಟ್‌ ಉತ್ಪನ್ನಗಳನ್ನು ಉತ್ಪಾದಿದಸಲು ಸಹ ಕಂಪೆನಿ ಪ್ಲ್ಯಾನ್‌ ರೂಪಿಸಿದೆ ಎಂದು ಹೇಳಲಾಗಿದೆ.

ಕಂಪೆನಿ

ಇನ್ನು ರಿಯಲ್‌ ಮಿ ಕಂಪೆನಿ ಬಿಡುಗಡೆ ಮಾರಡಿರುವ ಪೋಸ್ಟರ್ ಪ್ರಕಾರ ಸ್ಮಾರ್ಟ್ ಬ್ಯಾಂಡ್ ಮತ್ತು ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷೆ ಸೃಷ್ಟಿಸಿದೆ. ಆದರೆ ಕಂಪೆನಿ ಎಲ್ಲಿಯೂ ಸಹ ಇಂತಹದ್ದೆ ಗ್ಯಾಜೆಟ್‌ ಗಳನ್ನ ಹೊರತರಲಿದ್ದೇವೆ ಅಂತಾ ಹೇಳಿಕೊಂಡಿಲ್ಲ. ಇದೆಲ್ಲವೂ ಗೊತ್ತಾಗಬೇಕಾದರೆ 2020ರ ತನಕ ಕಾಯಲೇಬೇಕಿದೆ.

Best Mobiles in India

Read more about:
English summary
Since the beginning of last year, the Internet of Things (IoT) has been a core aspect of development by many manufacturers. A couple of Chinese manufacturers already has diverse IoT gadgets and they are now trying to create an ecosystem. A few days ago, Realme India officially stated that Realme will focus on accessories, software, IoT products, and smartphones in 2020. According to Realme’s India CEO, Madhav Sheth, its IoT products will arrive next year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X