Realme C3 India Launch: ಭಾರತದಲ್ಲಿ ರಿಯಲ್‌ಮಿ c3 ಫೋನ್‌ ಬಿಡುಗಡೆಗೆ ತಯಾರಿ!

|

ಆಕರ್ಷಕ ಫೀಚರ್ಸ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿರುವ ರಿಯಲ್‌ ಮಿ ಸ್ಮಾರ್ಟ್‌ಫೋನ್‌ ಕಂಪೆನಿ. ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಸದ್ಯ ಕಳೆದ ವರ್ಷವಷ್ಟೆ ರಿಯಲ್‌ ಮಿ c2 ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದ ರಿಯಲ್‌ ಮಿ ಕಂಪೆನಿ ಇದೀಗ ರಿಯಲ್‌ಮಿ c 3 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಪರಿಚಯಿಸಲಿದೆ ಎಂದು ಹೇಳಲಾಗ್ತಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಕಂಪೆನಿಗಳಲ್ಲಿ ರಿಯಲ್‌ಮಿ ಕೂಡ ಒಂದಾಗಿದ್ದು, ಭಾರತದಲ್ಲಿ ರಿಯಲ್ಮೆ ಸಿ 3 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ. ಸದ್ಯ ರಿಯಲ್‌ ಮಿ ಕಂಪೆನಿಯ ಭಾರತದ ಸಿಇಒ ಆಗಿರುವ ಮಾಧವ್ ಶೆಠ್‌ ರಿಯಲ್‌ಮಿ c ಆವೃತ್ತಿಯ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ 10.2 ಮಿಲಿಯನ್ ಬಳಕೆದಾರರನ್ನ ಹೊಂದಿದೆ ಎಂದು ಟ್ವೀಟ್‌ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ರಿಯಲ್‌ಮಿ c3 ಲಾಂಚ್‌ ಆಗುವುದರ ಬಗ್ಗೆ ಸೂಚನೆ ನಿಡಿದ್ದಾರೆ.

ರಿಯಲ್‌

ಸದ್ಯ ರಿಯಲ್‌ ಮಿ c3 ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲವವಾದರೂ ಮೂಲಗಳ ಪ್ರಕಾರ ರಿಯಲ್‌ಮಿ c3, ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಆಪ್‌ ಹೊಂದಿರಲಿದ್ದು, ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ, ಸದ್ಯ ಕ್ಯಾಮೆರಾ ಎಷ್ಟು ಮೆಗಾ ಪಿಕ್ಸೆಲ್‌ ಇರಲಿದೆ ಎಂಬುದರ ಮಾಹಿತಿ ಬಹಿರಂಗವಾಗಿಲ್ಲ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು

ಇನ್ನು ಈ ಸ್ಮಾರ್ಟ್‌ಫೋನ್‌ 3 GB RAM ಮತ್ತು 32 GB ಶೇಖರಣಾ ಸಾಮರ್ಥ್ಯವನ್ನ ಹೊಂದಿರಲಿದ್ದು, ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಬಹುದಾದದ ಶೇಖರಣಾ ಸಾಮರ್ಥ್ಯದ ಬಗ್ಗೆ ಮಾಹಿತಿ ನಾಳೆ ಬಹಿರಂಗವಾಗಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿರಲಿದ್ದು, ಕಳೆದ ಬಾರಿ ಬಿಡುಗಡೆಯಾಗಿದ್ದ ರಿಯಲ್‌ಮಿ C2 ಸ್ಮಾರ್ಟ್‌ಫೋನ್‌ ಹೊಂದಿದ್ದ 4,000mAh ಬ್ಯಾಟರಿ ಗಿಂತ ಶೇಖಡಾ 20 ರಷ್ಟು ದೊಡ್ಡ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದೆ ಎಂದು ಹೇಳಲಾಗ್ತಿದೆ.

ಕಂಪೆನಿ

ರಿಯಲ್‌ ಮಿ ಕಂಪೆನಿ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್ ಅನ್ನು ಹೊಂದಿರಲಿದೆ ಎನ್ನಲಾಗ್ತಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 4G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿದ್ದು, ವೈ-ಫೈ 2.4GHz ಅನ್ನು ಸಹ ಬೆಂಬಲಿಸುತ್ತದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಕುರಿತ ಇನ್ನು ಹೆಚ್ಚಿನ ಮಾಹಿತಿಯನ್ನ ರಿಯಲ್‌ ಮಿ ಕಂಪೆನಿ ನಾಳೆ ಹಂಚಿಕೊಳ್ಳುವ ಸಾದ್ಯತೆ ಇದೆ.

Best Mobiles in India

English summary
Realme India CEO Madhav Sheth says that the company currently has over 10.2 million Realme C-series phone users globally.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X