ಇಂದಿನಿಂದ 10,999ಕ್ಕೆ 64 ಜಿಬಿ 'ರಿಯಲ್‌ಮಿ ಯು1' ಮೊದಲ ಮಾರಾಟ!

|

ಇತ್ತೀಚಿಗಷ್ಟೇ ದೇಶದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದ 3ಜಿಬಿ RAM ಮತ್ತು 64 ಜಿಬಿ ಶೇಖರಣಾ ಮಾದರಿ 'ರಿಯಲ್‌ಮಿ ಯು1' ಫೋನ್ ಇಂದಿನಿಂದ ಮಾರಾಟಕ್ಕೆ ಬರುತ್ತಿದೆ. ಕಳೆದ ವಾರವಷ್ಟೇ ಭಾರತದಲ್ಲಿ ಬಿಡುಗಡೆಯಾದ ಈ ಹೊಸ ಮಾದರಿ ಫೋನನ್ನು ಇಂದಿನಿಂದ ಅಮೆಜಾನ್‌ನಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಖರಿದಿದಾರರಗಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ.

ಹೌದು, ಅಮೆಜಾನ್ ಇಂಡಿಯಾ ಮತ್ತು ರಿಯಲ್‌ಮಿ.ಕಾಮ್‌ಗಳ ಮೂಲಕ 3ಜಿಬಿ RAM ಮತ್ತು 64 ಜಿಬಿ ಶೇಖರಣಾ ಮಾದರಿ 'ರಿಯಲ್‌ಮಿ ಯು1' ಫೋನಿನ ಮೊದಲ ಮಾರಾಟ ಇಂದಿನಿಂದ ನಡೆಯಲಿದೆ. ಈ ಮಾರಾಟ ಮೇಳದಲ್ಲಿ ಮೊದಲ 500 ಸ್ಮಾರ್ಟ್‌ಫೋನ್ ಖರೀದಿದಾರರಿಗೆ ರಿಯಲ್‌ಮಿ ಬಡ್ಸ್ಗಳನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ರಿಯಲ್‌ಮಿ ಕಂಪೆನಿ ಘೋಷಿಸಿದೆ.

ಇಂದಿನಿಂದ 10,999ಕ್ಕೆ 64 ಜಿಬಿ 'ರಿಯಲ್‌ಮಿ ಯು1' ಮೊದಲ ಮಾರಾಟ!

ಮೊದಲ ಬಾರಿಗೆ 'ಮೀಡಿಯಟೆಕ್ ಹೀಲಿಯೊ ಪಿ70' ಚಿಪ್‌ಸೆಟ್ ಹೊತ್ತು ಬಂದಿರುವ ಹೆಗ್ಗಳಿಕೆ ಪಡೆದ 'ರಿಯಲ್ ಮಿ ಯು1' ಪೋನನ್ನು ಅಪ್‌ಡೇಟ್ ಮಾಡಿ ಕಂಪೆನಿ ಗಮನಸೆಳೆದಿದೆ. ಜೊತೆಗೆ 64 ಜಿಬಿ ಮಾದರಿಯ ಫೋನನ್ನು ಕೇವಲ 10,999 ರೂ.ಗೆ ಪರಿಚಯಿಸಿದೆ. ಹಾಗಾದರೆ, ರಿಯಲ್ ಮಿ ಯು1 ಹೇಗಿದೆ? ಫೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರಿಯಲ್ ಮಿ ಯು1' ಲುಕ್ ಹೇಗಿದೆ?

'ರಿಯಲ್ ಮಿ ಯು1' ಲುಕ್ ಹೇಗಿದೆ?

ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುವ ಲುಕ್‌ನಲ್ಲಿ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ನೀವು ರಿಯಲ್‌ಮಿ 2 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಳಸಿದ್ದರೆ 'ರಿಯಲ್ ಮಿ ಯು1' ಲುಕ್ ಬಗ್ಗೆ ನಾವೇನು ಹೆಚ್ಚು ಹೇಳಬೇಕಿಲ್ಲ. ಆದರೆ, ಮುಂಬಾಗದಲ್ಲಿ ನೋಚ್, ಹಿಂಬಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬಾಡಿ ಅರೆಪಾರದರ್ಶಕ ಪಾಲಿಕಾರ್ಬೊನೇಟ್ ಗಾಜಿನಿಂದ ಆವೃತವಾಗಿದೆ.

ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

90.8% ಸ್ಕ್ರೀನ್ ಟು ಬಾಡಿ ರೆಷ್ಯೂನೊಂದಿಗೆ ಲುಕ್‌ನಲ್ಲಿ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸಮನಾದ ಕೆಲವು ಡಿಸ್‌ಪ್ಲೇ ಫೀಚರ್ಸ್ ಹೊಂದಿದೆ. 19.5:9 ಆಕಾರ ಅನುಪಾತದಲ್ಲಿ 2340 x 1080p ಸಾಮರ್ಥ್ಯದ 6.3 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. 2.5D ಕರ್ವಡ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿರುವ ಈ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯನ್ನು ನೆನಪಿಸುತ್ತದೆ.

ಮೀಡಿಯಟೆಕ್ ಹೀಲಿಯೊ ಪಿ70' ಪ್ರೊಸೆಸರ್

ಮೀಡಿಯಟೆಕ್ ಹೀಲಿಯೊ ಪಿ70' ಪ್ರೊಸೆಸರ್

ಮೊದಲೇ ಹೇಳಿದಂತೆ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನಿನಲ್ಲಿ 'ಮೀಡಿಯಟೆಕ್ ಹೀಲಿಯೊ ಪಿ70' ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಆಕ್ಟಕೋರ್ ಬೇಸ್ 12nm ಫ್ಯಾಬ್ರಿಕೇಶನ್ ಪ್ರೊಸೆಸರ್ ಇದಾಗಿದ್ದು, ಈ ಪ್ರೊಸೆಸರ್ ಅನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಪೋನ್ ಇದಾಗಿದೆ. ಅಂಟುಂಟು ಬೆಂಚ್‌ಮಾರ್ಕ್ ಸ್ಕೋರ್‌ನಲ್ಲಿ 144761 ಪಾಯಿಂಟ್‌ಗಳನ್ನು ಪಡೆದುಕೊಂಡಿರುವ ಈ ಸ್ಮಾರ್ಟ್‌ಫೋನ್, 114335 ಪಾಯಿಂಟ್ ಪಡೆದುಕೊಂಡ ರಿಯಲ್‌ಮಿ 2 ಪ್ರೊ ಗಿಂತಲೂ 30% ಹೆಚ್ಚು ಸ್ಕೋರ್ ಪಡೆದುಕೊಂಡಿದೆ.

ಕ್ಯಾಮೆರಾ ಸೆಟಪ್!

ಕ್ಯಾಮೆರಾ ಸೆಟಪ್!

ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ 25MP ಸೆಲ್ಫಿ ಕ್ಯಾಮೆರಾವನ್ನು ಹೊಂದುವ ಮೂಲಕ ಸೆಲ್ಫಿ ಪ್ರಿಯರಿಗೆ ಭರ್ಜರಿ ಆಯ್ಕೆಯೊಂದನ್ನು ನೀಡಿದೆ. ಬಜೆಟ್ ಸ್ಮಾರ್ಟ್‌ಪೋನ್‌ಗಳ ಬೆಲೆಯಲ್ಲೇ 25MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಇದಾಗಿದೆ. ಇನ್ನು ಹಿಂಬಾಗದಲ್ಲಿ 13MP ಪ್ರೈಮರಿ ಹಾಗೂ 2MP ಡೆಪ್ತ್ ಸೆನ್ಸಾರ್ ಎರಡು ರಿಯರ್ ಕ್ಯಾಮೆರಾಗಳನ್ನು ಸ್ಮಾರ್ಟ್‌ಪೋನಿನಲ್ಲಿ ನೋಡಬಹುದು. ಪೊಟ್ರೆಟ್ ಮೂಡ್ ಬೆಂಬಲಿಸುವ ಪ್ರೈಮರಿ ಕ್ಯಾಮೆರಾದಲ್ಲಿ 30fps @ ವೇಗದಲ್ಲಿ 1080p ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಬಹುದಾಗಿದೆ.

ಬ್ಯಾಟರಿ ಶಕ್ತಿ ಹೇಗಿದೆ?

ಬ್ಯಾಟರಿ ಶಕ್ತಿ ಹೇಗಿದೆ?

10W ಸ್ಟ್ಯಾಂಡರ್ಡ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 3500 mAh ಲಿ-ಐಯಾನ್ ಬ್ಯಾಟರಿಯೊಂದಿಗೆ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. 0 ರಿಂದ 100% ವರೆಗೆ ಚಾರ್ಜ್ ಮಾಡಲು ಸಾಧನವು 2 ರಿಂದ 2.5 ಗಂಟೆಗಳ ಸಮಯವನ್ನು ಮಾತ್ರ ತೆಗೆದುಕೊಳ್ಳುತ್ತದೆ ಹಾಗೂ ಒಂದೇ ಚಾರ್ಜ್‌ನಲ್ಲಿ 1.5 ರಿಂದ 2 ದಿನಗಳ ವರೆಗೆ ಬ್ಯಾಟರಿ ಬಾಳಿಕೆ ಇರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. 10W ಸ್ಟ್ಯಾಂಡರ್ಡ್ ಚಾರ್ಜಿಂಗ್ ಸಾಮರ್ಥ್ಯದ ಯುಎಸ್‌ಬಿ ಪೋರ್ಟ್ ಡೇಟಾ ಸಿಂಕ್ ಮಾಡಲು ಸಹಕರಿಸಲಿದೆ ಎಂದು ತಿಳಿದುಬಂದಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿರುವ ಸ್ಮಾರ್ಟ್‌ಫೋನ್ ಎರಡರಲ್ಲೂ 4G LTE ಮತ್ತು VoLTE ಅನ್ನು ಬೆಂಬಲಿಸುತ್ತದೆ. ಬ್ಲೂಟೂತ್ 4.2 ನೊಂದಿಗೆ ಫೋನ್ ಡ್ಯೂಯಲ್-ಬ್ಯಾಂಡ್ Wi-Fi (2.4 GHz ಮತ್ತು 5.0GHz) ಅನ್ನು ಬೆಂಬಲಿಸುವ ಈ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಫೀಚರ್ ಅನ್ನು ಸಹ ಹೊಂದಿರುವುದು ವಿಶೇಷ ಎನ್ನಬಹುದು, ಆದರೆ, ಇದು ಫಿಂಗರ್ಪ್ರಿಂಟ್ ಸೆನ್ಸಾರ್ನಂತೆ ಸುರಕ್ಷಿತವಾಗಿಲ್ಲ ಎಂದು ಹೇಳಬಹುದು. ಇನ್ನುಳಿದಂತೆ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Realme U1 3GB RAM, 64GB Storage Variant to Go on Sale in India for First Time Today. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X