ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ರಿಯಲ್‌ಮಿ ವಾಚ್ 3 ಪ್ರೊ! ವಿಶೇಷತೆ ಏನು?
ಭಾರತದ ಟೆಕ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ತನ್ನ ಭಿನ್ನ ಶ್ರೇಣಿಯ ಗ್ಯಾಜೆಟ್ಸ್‌ಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹಲವು ವೈವಿಧ್ಯಮಯ ಡಿವೈಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದನ್ನು ರಿಯಲ್‌ಮಿ ವಾಚ್ 3 ಪ್ರೊ ಎಂದು ಹೆಸರಿಸಲಾಗಿದ್ದು, ಇದೇ ಸೆಪ್ಟೆಂಬರ್ 6 ರಂದು ಲಾಂಚ್ ಆಗುವುದು ಪಕ್ಕಾ ಆಗಿದೆ.

ಹೌದು, ಭಾರತದಲ್ಲಿ ರಿಯಲ್‌ಮಿ ವಾಚ್ 3 ಪ್ರೊ ಲಾಂಚ್ ಡೇಟ್ ಫಿಕ್ಸ್ ಆಗಿದೆ. ಈ ಸ್ಮಾರ್ಟ್‌ವಾಚ್ ಬಿಡುಗಡೆಯ ದಿನಾಂಕದ ವಿವರವನ್ನು ಕಂಪನಿಯ ಅಧಿಕೃತ ಪೋಸ್ಟರ್ ಮೂಲಕ ತಿಳಿಸಲಾಗಿದೆ. ಆದರೆ ಇದರ ಸೇಲ್ ಡೇಟ್ ಅನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಸ್ಮಾರ್ಟ್‌ವಾಚ್ ರಿಯಲ್ ವಾಚ್ 3 ಮಾದರಿಯಲ್ಲಿಯೇ ಬರಲಿದೆ ಎನ್ನಲಾಗಿದೆ. ಆದರೆ ಈ ಸ್ಮಾರ್ಟ್‌ವಾಚ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ವಾಚ್ 3 ಪ್ರೊ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಈ ವಾಚ್ ರಿಯಲ್‌ಮಿ ವಾಚ್ 3 ಮಾದರಿಯನ್ನೇ ಹೊಂದಿರಲಿದೆ ಎನ್ನಲಾಗಿದೆ. ಆದರಂತೆ ರಿಯಲ್‌ಮಿ ವಾಚ್ ವಿವರಗಳನ್ನು ಗಮನಿಸುವುದಾದರೆ ಈ ಸ್ಮಾರ್ಟ್‌ವಾಚ್ 1.8 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ವಾಚ್ 340mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಏಳು ದಿನಗಳ ಬ್ಯಾಟರಿಯನ್ನು ತಲುಪಿಸುತ್ತದೆ ಎಂದು ಹೇಳಲಾಗಿದೆ.

ಇನ್ನು ಈ ಸ್ಮಾರ್ಟ್‌ವಾಚ್ ಬಜೆಟ್ ಬೆಲೆಯಲ್ಲಿ ಬರುವ ವಾಚ್ ಆಗಿರುವುದರಿಂದ, ಇದು ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಇದು ತನ್ನ ಹೆಲ್ತ್ ಫಿಟ್ನೆಸ್ ಫೀಚರ್ಸ್‌ಗಳಲ್ಲಿ ಎಸ್‌ಪಿಒ 2 ಟ್ರ್ಯಾಕಿಂಗ್, ಒತ್ತಡ ಮೇಲ್ವಿಚಾರಣೆ, ಸ್ಲೀಪ್ ಟ್ರ್ಯಾಕರ್ ಮತ್ತು ಹಾರ್ಟ್ ಬೀಟ್ ಸೆನ್ಸಾರ್ ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲ್ ಫೀಚರ್ಸ್ ಅನ್ನು ಹೊಂದಿದ್ದು, ಇದಕ್ಕಾಗಿ ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್ ಅನ್ನು ಮೀಸಲಿರಿಸಲಾಗಿದೆ. ಇದು ಬಳಕೆದಾರರಿಗೆ ವಾಚ್ ಮೂಲಕ ನೇರವಾಗಿ ಕಾಲ್ ಮಾಡಲು ಅನುಕೂಲವಾಗಲಿದೆ.

ರಿಯಲ್‌ಮಿ ವಾಚ್ 3 ಪ್ರೊ ಭಾರತದಲ್ಲಿ 5000ರೂ. ಒಳಗೆ ಬರುವ ಸಾಧ್ಯತೆ ಇದೆ. ಇದು ಬೂದು ಮತ್ತು ಕಪ್ಪು ಬಣ್ಣದ ರೂಪಾಂತರವನ್ನು ಪಡೆಯುತ್ತದೆ ಎಂದು ಪೋಸ್ಟರ್‌ನಲ್ಲಿ ಬಹಿರಂಗವಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಬರುವ ಸ್ಮಾರ್ಟ್‌ವಾಚ್‌ಗಳ ಜೊತೆಗೆ ಪೈಪೋಟಿ ನಡೆಸಲಿದೆ. ಇನ್ನು ರಿಯಲ್‌ಮಿಗೆ ಸೆಡ್ಡು ಹೊಡೆಯುವ ಶಿಯೋಮಿ ಕಂಪೆನಿ ಇತ್ತೀಚಿಗೆ ಯಾವುದೇ ಸ್ಮಾರ್ಟ್‌ವಾಚ್ ಪರಿಚಯಿಸದಿರುವುದು ರಿಯಲ್‌ಮಿಗೆ ವರವಾಗಿದೆ.

ಇದಲ್ಲದೆ ರಿಯಲ್ ಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ರಿಯಲ್‌ಮಿ 9i 5G ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ 5G ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇದು ಡೈನಾಮಿಕ್ RAM ವಿಸ್ತರಣೆ ಟೆಕ್ನಾಲಜಿಯನ್ನು ಒಳಗೊಂಡಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ ಲೆನ್ಸ್, ಪೋರ್ಟ್ರೇಟ್ ಶೂಟರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಕ್ವಿಕ್ ಚಾರ್ಜ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ರಿಪ್ಲೆಕ್ಟಿವ್ ವಿನ್ಯಾಸದೊಂದಿಗೆ ವಿಂಟೇಜ್ ಸಿಡಿ ವಿನ್ಯಾಸವನ್ನು ಸಹ ಪಡೆಯುತ್ತದೆ.


Click it and Unblock the Notifications








