15 ದಿನಗಳ ಬ್ಯಾಟರಿ ಬಾಳಿಕೆ ಸಾಮರ್ಥ್ಯದ ರಿಯಲ್‌ಮಿ ವಾಚ್ S ಬಿಡುಗಡೆ!

|

ರಿಯಲ್‌ಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ವಾಚ್‌ ವಲಯದಲ್ಲೂ ತನ್ನ ಪ್ರಾಬಲ್ಯ ವಿಸ್ತರಿಸಿದೆ. ಈಗಾಗಲೇ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿರುವ ರಿಯಲ್‌ಮಿ ಇದೀಗ ತನ್ನ ಹೊಸ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ S ರಿಯಲ್‌ಮಿ ವಾಚ್‌ನ ವಿಕಸಿತ ಆವೃತ್ತಿಯಾಗಿದೆ. ಅಲ್ಲದೆ ಇದು ಕಂಪ್ಲೀಟ್‌ ನ್ಯೂ ಡಿಸೈನ್‌ ಜೊತೆಗೆ ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ಇದು ರಕ್ತದ ಆಮ್ಲಜನಕದ ಮೇಲ್ವಿಚಾರಣೆ ಮತ್ತು ಮೂಲ ಸ್ಮಾರ್ಟ್ ವಾಚ್ ಕಾರ್ಯಗಳನ್ನು ಮಾಡಲಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆ ತನ್ನ ಹೊಸ ರಿಯಲ್‌ಮಿ ವಾಚ್ S ಅನ್ನು ಬಿಡುಗಡೆ ಮಾಡಿದೆ. ಇದು ಶಿಯೋಮಿ ಕಂಪೆನಿಯ ಮಿ ವಾಚ್ ರಿವಾಲ್ವ್‌ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ವಾಚ್‌ 1.3 ಇಂಚಿನ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದ್ದು, 360x360 ಪಿಕ್ಸೆಲ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ವಾಚ್

ರಿಯಲ್‌ಮಿ ವಾಚ್ S 1.3 ಇಂಚಿನ ವೃತ್ತಾಕಾರದ ಡಿಸ್‌ಪ್ಲೇ ಹೊಂದಿದ್ದು, ಇದು 600 ನಿಟ್ಸ್‌ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ವಾಚ್‌ ಆಟ್ರೋಮ್ಯಾಟಿಕ್‌ ಬ್ರೈಟ್‌ನೆಶ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 3 ಅನ್ನು ಸಹ ಅಳವಡಿಸಲಾಗಿದೆ. ಇದಲ್ಲದೆ ಈ ವಾಚ್ ಎಸ್ ರಿಯಲ್‌ಮಿ ಸ್ವಾಮ್ಯದ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಅಲ್ಲದೆ ರಿಯಲ್‌ಮಿ ವಾಚ್ ಎಸ್ ಹೃದಯ ಬಡಿತವನ್ನು ಅಳೆಯಲು ಪಿಪಿಜಿ ಸೆನ್ಸಾರ್‌ ಅನ್ನು ಹೊಂದಿದ್ದು, ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಫೀಚರ್ಸ್‌ ಅನ್ನು ಒಳಗೊಂಡಿದೆ.

ರಿಯಲ್‌ಮಿ ವಾಚ್

ಇನ್ನು ಈ ವಾಚ್ ರಕ್ತದ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮೀಸಲಾದ ಸೆನ್ಸಾರ್‌ ಅನ್ನು ಸಹ ಹೊಂದಿದೆ. ಜೊತೆಗೆ ರಿಯಲ್‌ಮಿ ವಾಚ್ ಎಸ್‌ನಲ್ಲಿ 16 ಕ್ರೀಡಾ ವಿಧಾನಗಳನ್ನು ಸೇರಿಸಲಾಗಿದ್ದು, ಇದರಲ್ಲಿ ಸ್ಟೇಷನರಿ ಬೈಕ್, ಕ್ರಿಕೆಟ್, ಒಳಾಂಗಣ ರನ್, ಹೊರಾಂಗಣ ಸೈಕಲ್, ಸಾಮರ್ಥ್ಯ ತರಬೇತಿ, ಫುಟ್‌ಬಾಲ್, ಯೋಗ, ಎಲಿಪ್ಟಿಕಲ್ ವರ್ಕ್‌ಔಟ್‌‌ಗಳು ಮತ್ತು ಹೆಚ್ಚಿನವು ಸೇರಿವೆ. ಇದು ನಿದ್ರೆಯ ಮಾದರಿಗಳನ್ನು ಸಹ ಟ್ರ್ಯಾಕ್ ಮಾಡಲಿದೆ. ಅಲ್ಲದೆ ಐಡಲ್ ಜ್ಞಾಪನೆಗಳನ್ನು ಸಹ ಮಾಡುತ್ತದೆ.

ರಿಯಲ್‌ಮಿ ವಾಚ್ S

ರಿಯಲ್‌ಮಿ ವಾಚ್ S ಸ್ಮಾರ್ಟ್‌ಫೋನ್‌ಗಳಿಂದ ಸಹ ಅಧಿಸೂಚನೆಗಳನ್ನು ತೋರಿಸಬಹುದು ಎನ್ನಲಾಗಿದೆ. ಅಲ್ಲದೆ ಒಳಬರುವ ಕರೆಗಳನ್ನು ತಿರಸ್ಕರಿಸಲು ಮತ್ತು ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಲು ಸಹ ಇದು ಬಳಕೆದಾರರಿಗೆ ಅನುಮತಿಸುತ್ತದೆ. ಇನ್ನು ಈ ಅಪ್ಲಿಕೇಶನ್ ಮೂಲಕ ಅಧಿಕೃತವಾಗಿ ಲಭ್ಯವಿರುವ 100 ವಾಚ್ ಫೇಸ್‌ಗಳನ್ನು ಬಳಕೆದಾರರು ಆಯ್ಕೆ ಮಾಡಬಹುದಾಗಿದೆ. ಇನ್ನು ಬ್ಯಾಟರಿ ಬಾಳಿಕೆ ವಿಚಾರದಲ್ಲಿ ಇದು 390mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು,ಸಿಂಗಲ್‌ ಚಾರ್ಜ್‌ನಲ್ಲಿ 15 ದಿನಗಳವರೆಗೆ ಬಾಳಿಕೆಯನ್ನು ನೀಡಲಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದ್ದು, ಇದರ ಬೆಲೆ ಭಾರತದಲ್ಲಿ ಸರಿಸುಮಾರು 7,000 ರೂ ಆಗಿರಲಿದೆ.

Best Mobiles in India

Read more about:
English summary
Realme Watch S features a 1.3-inch circular display with a resolution of 360 x 360 and a pixel density of 600 nits.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X