ರಿಯಲ್‌ಮಿ ಸಂಸ್ಥೆಯಿಂದ ಟಚ್‌ಸ್ಕ್ರೀನ್ ಬೆಂಬಲಿಸುವ ರಿಯಲ್‌ಮಿ ವಾಚ್ ಬಿಡುಗಡೆ!
ಇಂದಿನ ಜಮಾನದಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಟೆಕ್ನಾಲಜಿ ಮುಂದುವರೆದಷ್ಟು ಎಲ್ಲವೂ ಸ್ಮಾರ್ಟ್ ಆಗುತ್ತಿವೆ. ಸದ್ಯ ನಿಮಗೆಲ್ಲಾ ತಿಳಿದಿರುವಂತೆ ಸ್ವಾರ್ಟ್‌ವಾಚ್‌ಗಳ ಮಾರುಕಟ್ಟೆ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಹಲವು ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು ಲಭ್ಯವಿದ್ದರೂ, ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಸ್ಮಾರ್ಟ್‌ವಾಚ್‌ಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ಸದ್ಯ ರಿಯಲ್‌ಮಿ ಕಂಪೆನಿ ಕುಡ ಉತ್ತಮ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸುವಲ್ಲಿ ಹೆಸರುವಾಸಿಯಾಗಿದ್ದು, ಸದ್ಯ ಇದೀಗ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ವಾಚ್ ಅನ್ನ ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು, ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ರಿಯಲ್‌ಮಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿ. ಮಾರುಕಟ್ಟೆಗೆ ಎಂಟ್ರಿ ನೀಡಿದ ಕಡಿಮೆ ಅವಧಿಯಲ್ಲಿಯೇ ಏರುಗತಿಯಲ್ಲಿ ಜನಪ್ರಿಯತೆಯನ್ನ ಸಾಧಿಸಿದೆ. ಅಲ್ಲದೆ ಸ್ಮಾರ್ಟ್‌ವಾಚ್ ವಲಯದಲ್ಲೂ ತನ್ನ ಪ್ರಾಬಲ್ಯವನ್ನ ವಿಸ್ತರಿಸಿಕೊಳ್ಳುತ್ತಿದೆ. ಅದರಂತೆ ಇದೀಗ ತನ್ನ ಹೊಸ ಮಾದರಿಯ ರಿಯಲ್‌ಮಿ ವಾಚ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆ ಆಗಿರುವ ರಿಯಲ್‌ಮಿ ವಾಚ್ ವಿಶೇಷತೆ ಏನು, ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ರಿಯಲ್‌ಮಿ ವಾಚ್
ರಿಯಲ್‌ಮಿ ಕಂಪೆನಿ ತನ್ನ ಬಹು ನಿರೀಕ್ಷಿತ ರಿಯಲ್‌ಮಿ ವಾಚ್ ಅನ್ನು ಬಿಡುಗಡೆ ಮಾಡುವ ಮೂಲಕ ಇಂಟರ್ನೆಟ್ ಆಫ್ ಥಿಂಗ್ಸ್ (IOT) ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದೆ. ಇನ್ನು ಈ ಸ್ಮಾರ್ಟ್ ವಾಚ್ ಟಚ್‌ಸ್ಕ್ರೀನ್ ಬೆಂಬಲವನ್ನ ಹೊಂದಿದ್ದು, 320x320 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 1.4-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ 2.5D ಬಾಗಿದ ಗಾಜಿನ ಕಲರ್ ಡಿಸ್‌ಪ್ಲೇಯನ್ನ ಹೊಂದಿದ್ದು, ಇದು 2.5 ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಡಿಸ್‌ಪ್ಲೇಯನ್ನ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ ಮೂರು-ಅಕ್ಷದ ವೇಗವರ್ಧಕ ಮತ್ತು ಪಿಪಿಜಿ ಸೆನ್ಸಾರ್ ಅನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ವಾಚ್ 20mm ತೆಗೆಯಬಹುದಾದ ಮಣಿಕಟ್ಟಿನ ಪಟ್ಟಿಗಳನ್ನು ಬೆಂಬಲಿಸಲಿದೆ. ಇದಲ್ಲದೆ ಇದು ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿರುವ ಐಪಿ 68-ಪ್ರಮಾಣೀಕೃತ ನಿರ್ಮಾಣವನ್ನು ಹೊಂದಿದೆ.
ಸದ್ಯ ಈ ರಿಯಲ್‌ಮಿ ವಾಚ್ ಪ್ರಾರಂಭಿಕ ಹಂತದಲ್ಲಿ ಒಟ್ಟು 12 ಮಾದರಿಯ ವಿನ್ಯಾಸದಲ್ಲಿ ಬರಲಿದೆ. ಆದರೂ ಮುಂದಿನ ದಿನಗಳಲ್ಲಿ ಓವರ್-ದಿ-ಏರ್ (ಒಟಿಎ) ಅಪ್‌ಡೇಟ್ ಮೂಲಕ 100 ಕ್ಕೂ ಹೆಚ್ಚು ಹೊಸ ಮಾದರಿಯ ವಾಚ್ ವಿನ್ಯಾಸಗಳನ್ನ ನೀಡಲು ಕಂಪೆನಿ ಸಿದ್ಧವಾಗಿದೆ.

ಇನ್ನು ಈ ಸ್ಮಾರ್ಟ್ ವಾಚ್ ಫೋಟೊಪ್ಲೆಥಿಸ್ಮೊಗ್ರಾಮ್ (PPG) ಸೆನ್ಸಾರ್ ಅನ್ನು ಹೊಂದಿದ್ದು, 14 ಮಾದರಿಯ ಹೊಸ ಸ್ಪೋರ್ಟ್ಸ್ ಮೋಡ್‌ಗಳನ್ನ ಹೊಂದಿದೆ. ಇದರ ಮೂಲಕ ಹೃದಯ ಬಡಿತದ ಮೇಲ್ವಿಚಾರಣೆಯನ್ನು ಸಹ ನಡೆಸಲಿದೆ. ಅಲ್ಲದೆ ಪ್ರತಿ ಐದು ನಿಮಿಷಗಳಲ್ಲಿ ಹೃದಯ ಬಡಿತವನ್ನು ದಾಖಲಿಸಲು ಅಂತರ್ನಿರ್ಮಿತ ಪಿಪಿಜಿ ಸೆನ್ಸಾರ್ ಮೂಲಕ ರಿಯಲ್ ಟೈಂ ಹಾರ್ಟ್‌ಬಿಟ್ ರೇಟಿಂಗ್ ಮಾನಿಟರಿಂಗ್ ಮಾಡಲಿದೆ. ಇದಲ್ಲದೆ ಬಳಕೆದಾರರು ತಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು ಪತ್ತೆಹಚ್ಚಲು ಇದರಲ್ಲಿ SpO2 ಮೇಲ್ವಿಚಾರಣೆಯನ್ನು ಸಹ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ 160mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಸಿಂಗಲ್ ಚಾರ್ಜಿಂಗ್‌ನಲ್ಲಿ 20 ದಿನಗಳವರೆಗೆ ಬಳಕೆಯನ್ನು ನೀಡಲು ಪವರ್ ಸೇವಿಂಗ್ ಮೋಡ್ ಸಹ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ವಿ 5.0 ಮತ್ತು ಆಂಡ್ರಾಯ್ಡ್ 5.0 ಲಾಲಿಪಾಪ್ ಅನ್ನು ಬೆಂಬಲಿಸಲಿದೆ.

ಸದ್ಯ ಮಾರುಕಟ್ಟೆಯೆಗೆ ಎಂಟ್ರಿ ನೀಡಿರುವರಿಯಲ್‌ಮಿ ವಾಚ್ ನ ಬೆಲೆಯನ್ನು 3,999. ರೂ.ಗೆ ನಿಗದಿಪಡಿಸಲಾಗಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ ಜೂನ್ 5 ರಂದು ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಬ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕೆಂಪು, ನೀಲಿ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications




