ರಿಯಲ್‌ಮಿ X50m 5G ಸ್ಮಾರ್ಟ್‌ಫೋನ್ ಬಿಡುಗಡೆ! ವಿಶೇಷ ಫೀಚರ್ಸ್!
ಸ್ಮಾರ್ಟ್‌ಫೋನ್ ವಲಯದಲ್ಲಿ ಹಲವಾರು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳು ಲಬ್ಯವಿವೆ. ಪ್ರತಿನಿತ್ಯ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಆಗುತ್ತಲೇ ಇರುತ್ತೆ. ಇನ್ನು ಸ್ಮಾರ್ಟ್‌ಫೋನ್ ಪ್ರಿಯರು ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸುತ್ತಾರೆ. ಇವುಗಳಲ್ಲಿ ರಿಯಲ್ ಮಿ ಕಂಪೆನಿ ಕೂಡ ಒಂದಾಗಿದೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕೆಲವೇ ವರ್ಷಗಳಲ್ಲಿ ಏರುಗತಿಯ ಬೆಳವಣಿಗೆ ಸಾಧಿಸಿದೆ. ಸದ್ಯ ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಂಚನ ಸೃಷ್ಟಿಸುತ್ತಲೇ ಇದ್ದು, ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ.

ಹೌದು, ಕಡಿಮೆ ಅವಧಿಯಲ್ಲಿ ಏರುಗತಿಯ ಬೆಳವಣಿಗೆ ಸಾಧಿಸುತ್ತಿರುವ ಚೀನಾ ಮೂಲದ ರಿಯಲ್‌ಮಿ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ರಿಯಲ್‌ಮಿ x50 ಸರಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಇದನ್ನ ರಿಯಲ್‌ಮಿ X50m ಎಂದು ಹೆಸರಿಸಲಾಗಿದೆ. ಸದ್ಯ ರಿಯಲ್‌ಮಿ X50m ಸ್ಮಾರ್ಟ್‌ಫೋನ್ ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಇದು 5G ಬೆಂಬಲಿತ ಸ್ಮಾರ್ಟ್‌ಫೋನ್ ಆಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ರಿಯಲ್ ಮಿ ಗ್ರೇಡಿಯೆಂಟ್ ವಿನ್ಯಾಸವನ್ನ ಉಳಿಸಿಕೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿನ್ಯಾಸಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಡಿಸ್‌ಪ್ಲೇ ಮಾದರಿ
ರಿಯಲ್‌ಮಿ X50m ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನ ಹೊಂದಿರುವ 6.57 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಫುಲ್‌ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನ ಒಳಗೊಂಡಿದ್ದು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಅಲ್ಲದೆ ಡಿಸ್‌ಪ್ಲೇ ಸ್ಕ್ರೀನ್-ಟು-ಬಾಡಿ 90.4 ರಷ್ಟು ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್
ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್-ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಹಾಗೂ 8GB RAM+ 256GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಯನ್ನ ಹೊಂದಿದೆ. ಇನ್ನು ಮೆಮೊರಿಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ.

ಕ್ಯಾಮೆರಾ ವಿನ್ಯಾಸ
ರಿಯಲ್‌ಮಿ X50m ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್ ಸೆನ್ಸಾರ್ f/ 1.8 ಸಿಕ್ಸ್-ಪೀಸ್ ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, f/ 2.3 ಫೈವ್-ಪೀಸ್ ಲೆನ್ಸ್ ಅನ್ನು ಹೊಂದಿದೆ, ಇದು 119 ಡಿಗ್ರಿಗಳ ವೀಕ್ಷಣಾ ಕ್ಷೇತ್ರವನ್ನು ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 -ಮೆಗಾಪಿಕ್ಸೆಲ್ f/ 2.4 ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX 471 ಸೆನ್ಸಾರ್, ಜೊತೆಗೆ 2 ಮೆಗಾಪಿಕ್ಸೆಲ್ ಸೆನ್ಸಾರ್, ಸಾಮರ್ಥ್ಯದ ಡ್ಯುಯೆಲ್ ಸೆಲ್ಫಿ ಕ್ಯಾಮೆರಾವನ್ನ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಸ್ಮಾರ್ಟ್‌ಫೋನ್ 4,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ನೀಡಲಾಗಿದ್ದು, ಇದು 30W ಡಾರ್ಟ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್ 5G, 4G LTE, ವೈ-ಫೈ , ಬ್ಲೂಟೂತ್ 5.0, GPS /A-GPS, NFC ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಸದ್ಯ ರಿಯಲ್‌ಮಿ X50m 5G ಸ್ಮಾರ್ಟ್‌ಫೋನ್ 6GB RAM ರೂಪಾಂತರಕ್ಕೆ CNY 1,999 (ಸುಮಾರು 21,500 ರೂ.) ಬೆಲೆಯನ್ನ ನಿಗದಿಪಡಿಸಲಾಗಿದೆ. ಆದರೆ 8GB RAM ಆಯ್ಕೆಯ ಸ್ಮಾರ್ಟ್‌ಫೋನ್ CNY 2,299 (ಅಂದಾಜು 25,000 ರೂ.) ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ವೈಟ್ ಮತ್ತು ಸ್ಟಾರಿ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಬ್ಯವಾಗಲಿದ್ದು, ಇದೇ ಏಪ್ರಿಲ್ 29 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.


Click it and Unblock the Notifications




