Home
ಸುದ್ದಿಜಾಲ

ಭಾರತದಲ್ಲಿ ರಿಯಲ್‌ಮಿ x7 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?

ಬಹು ನಿರೀಕ್ಷಿತ ರಿಯಲ್‌ಮಿ X7 ಪ್ರೊ 5G ಮತ್ತು ರಿಯಲ್‌ಮಿ X7 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣಗೊಂಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು 5G ಯನ್ನು ಬೆಂಬಲಿಸಲಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ SoC ಪ್ರೊಸೆಸರ್‌ ಅನ್ನೊ ಒಳಗೊಂಡಿವೆ. ಇದರಲ್ಲಿ ರಿಯಲ್‌ಮಿ X7 ಪ್ರೊ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದರೆ, ರಿಯಲ್‌ಮಿ X7 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ X7 ಪ್ರೊ 5G ಹಾಗೂ ರಿಯಲ್‌ಮಿ X7 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಪಂಚ್‌ ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿವೆ. ಇದರಲ್ಲಿ ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ 6.55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗಾದ್ರೆ ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ಹೇಗಿದೆ?

ಡಿಸ್‌ಪ್ಲೇ ಹೇಗಿದೆ?

ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಮತ್ತು 91.6% ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಹೊಂದಿದೆ. ಜೊತೆಗೆ 5th Gen ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 1,200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಇದು ಆಕ್ಟಾ-ಕೋರ್ ಡೈಮೆನ್ಸಿಟಿ 1000+ SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ವಾಡ್‌ ರಿಯರ್‌ ಕ್ಯಾಮೆರಾ

ಕ್ವಾಡ್‌ ರಿಯರ್‌ ಕ್ಯಾಮೆರಾ

ರಿಯಲ್‌ಮಿ X7 ಪ್ರೊ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ f/ 2.4 ಲೆನ್ಸ್ ಹೊಂದಿರುವ ಬ್ಲ್ಯಾಕ್‌ ಮತ್ತು ವೈಟ್‌ ಇಮೇಜ್‌ ಸೆನ್ಸಾರ್‌, ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರಿಯಲ್‌ಮಿ X7 ಪ್ರೊ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 65W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ ಏಕೈಕ 8GB RAM + 128GB ಮಾದರಿಗೆ 29,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್ ಫ್ಯಾಂಟಸಿ ಮತ್ತು ಮಿಸ್ಟಿಕ್ ಬ್ಲ್ಯಾಕ್‌ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ರಿಯಲ್‌ಮಿ X7 ಪ್ರೊ ಇದೇ ಫೆಬ್ರವರಿ 10 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್, ರಿಯಲ್‌ಮೆ.ಕಾಮ್ ಮತ್ತು ಆಫ್‌ಲೈನ್ ಮಳಿಗೆಗಳ ಮೂಲಕ ಮಾರಾಟವಾಗಲಿದೆ. ಇದಲ್ಲದೆ ಲಾಂಚ್ ಆಫರ್‌ಗಳಲ್ಲಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐನೊಂದಿಗೆ 2,000 ರೂ. ತ್ವರಿತ ರಿಯಾಯಿತಿ, ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಂಐನೊಂದಿಗೆ 1,500 ರೂ. ರಿಯಾಯಿತಿ.

Best Mobiles in India

English summary
Realme X7 Pro 5G With MediaTek Dimensity SoC Launched in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+