Home
ಸುದ್ದಿಜಾಲ

ಆಂಡ್ರಾಯ್ಡ್ ಬಿಟ್ಟು 'ಸ್ಟಾಕ್ ಆಂಡ್ರಾಯ್ಡ್' ಫೋನ್ ಖರೀದಿಸಲೇಬೇಕು ಎನ್ನಲು 7 ಮುಖ್ಯ ಕಾರಣಗಳು!!

ಮೊದಲೆಲ್ಲಾ ಆಂಡ್ರಾಯ್ಡ್ ಫೋನ್ ಎಂದರೆ ಆಂಡ್ರಾಯ್ಡ್ ಫೋನ್ ಮಾತ್ರ ಆಗಿರುತ್ತಿತ್ತು. ಆದರೆ, ಈಗ ಆಂಡ್ರಾಯ್ಡ್ ಬದಲಾಗಿ ಸ್ಟಾಕ್ ಆಂಡ್ರಾಯ್ಡ್ ಎಂಬ ಪದ ಜೋರಾಗಿ ಕೇಳಿಸುತ್ತಿದೆ. ನೀವೀಗ ಖರೀದಿ ಮಾಡಬೇಕಾದ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಹೊಂದಿದ್ದರೆ ಸಾಕೇ? ಅಥವಾ ಯಾವ ಆಂಡ್ರಾಯ್ಡ್ ಹೊಂದಿದ್ದರೆ ಉತ್ತಮ ಎಂಬುದನ್ನು ಸಹ ತಿಳಿಯಬೇಕಿದೆ.!

ಮೊದಲೆಲ್ಲಾ ಆಂಡ್ರಾಯ್ಡ್ ಫೋನ್‌ ತಯಾರಿಸುವ ಹಲವು ಕಂಪನಿಗಳು, ಫೋನ್‌ಗೆ ತಮ್ಮದೇ ಆದ ಆಂಡ್ರಾಯ್ಡ್ ಆವೃತ್ತಿಯನ್ನು ಅಳವಡಿಸುತ್ತಿದ್ದವು. ಅಂದರೆ, ಅವು ಗೂಗಲ್ನ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ತರುತ್ತಿದ್ದವು. ಆದರೆ, ಈಗ ಬದಲಾವಣೆ ಮಾಡುವ ಬದಲು ಸ್ಟಾಕ್‌ ಆಂಡ್ರಾಯ್ಡ್ ವ್ಯವಸ್ಥೆ ನೀಡಲು ಬಹುತೇಕ ಕಂಪೆನಿಗಳು ಮುಂದಾಗಿವೆ.

'ಸ್ಟಾಕ್ ಆಂಡ್ರಾಯ್ಡ್' ಫೋನ್ ಖರೀದಿಸಲೇಬೇಕು ಎನ್ನಲು 7 ಮುಖ್ಯ ಕಾರಣಗಳು!!

ಮುಗಿದೇ ಹೋಯಿತು ಎಂಬಂತೆ ಆಗಿದ್ದ ನೋಕಿಯಾ ಈಗ ಮತ್ತೆ ಮೊಬೈಲ್‌ ಫೋನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಹಳೆಯ ಸುದ್ದಿ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೋಕಿಯಾ ಫೋನ್‌ಗಳಲ್ಲಿ ಸ್ಟಾಕ್‌ ಆಂಡ್ರಾಯ್ಡ್ ವ್ಯವಸ್ಥೆ ಅಳವಡಿಸಿರುವುದು. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಟಾಕ್ ಆಂಡ್ರಾಯ್ಡ್ ಫೋನ್ ಏಕೆ ಬೆಸ್ಟ್ ಎಂಬುದಕ್ಕೆ ಉತ್ತರ ಪಡೆಯೋಣ.

ಸ್ಟಾಕ್ ಆಂಡ್ರಾಯ್ಡ್ ಬೆರಕೆಯಲ್ಲ!

ಸ್ಟಾಕ್ ಆಂಡ್ರಾಯ್ಡ್ ಬೆರಕೆಯಲ್ಲ!

ಆಂಡ್ರಾಯ್ಡ್‌ಗೆ ಅಪ್ಪ ಅಮ್ಮ ಎಲ್ಲವೂ ಗೂಗಲ್‌ ಕಂಪನಿ ಎಂಬುದು ನಿಮಗೇನು ಹೇಳಬೇಕಿಲ್ಲ. ಗೂಗಲ್‌ ಸಿದ್ಧಪಡಿಸಿದ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯೇ ಈ ಸ್ಟಾಕ್‌ ಆಂಡ್ರಾಯ್ಡ್. ಈ ಸ್ಟಾಕ್‌ ಆಂಡ್ರಾಯ್ಡ್ ಅನ್ನು ವೆನಿಲ್ಲಾ ಆಂಡ್ರಾಯ್ಡ್ ಅಥವಾ ಪ್ಯೂರ್‌ ಆಂಡ್ರಾಯ್ಡ್ ಎಂದೂ ಸಹ ಕರೆಯಲಾಗುತ್ತದೆ. ಇದು ತಿಳಿನೀರಿನಂತೆ ಇದಕ್ಕೆ ಬೇರೆ ಏನೂ ಬೆರಕೆ ಆಗಿರುವುದಿಲ್ಲ.

ಅನಗತ್ಯ ಎಂಬುದಿಲ್ಲ!

ಅನಗತ್ಯ ಎಂಬುದಿಲ್ಲ!

ಸ್ಟಾಕ್‌ ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಕಂಪನಿ ನಿರ್ಧರಿಸಿದ ಅತ್ಯಗತ್ಯ ಆಪ್‌ಗಳು ಮಾತ್ರ ಇರುತ್ತವೆ. ಬಳಕೆದಾರ ತನಗೆ ಬೇಕಿರುವ ಇತರ ಯಾವುದೇ ಆಪ್‌ ಅನ್ನು ಪ್ಲೇಸ್ಟೋರ್‌ನಿಂದ ಪಡೆದುಕೊಳ್ಳಬಹುದು. ಇದರ ಲಾಭ ಅಂದರೆ, ಅನಗತ್ಯ ಆಪ್‌ಗಳು ಇಲ್ಲದೆ, ಫೋನ್‌ನಲ್ಲಿ ಲಭ್ಯವಿರುವ ಸ್ಟೋರೇಜ್‌ನ ಬಳಕೆದಾರನಿಗೆ ತನ್ನಿಷ್ಟದಂತೆ ಬಳಸಲು ದೊರೆಯುತ್ತದೆ.

ಆಂಡ್ರಾಯ್ಡ್ ಭದ್ರತೆ

ಆಂಡ್ರಾಯ್ಡ್ ಭದ್ರತೆ

ಗೂಗಲ್‌ ಕಂಪನಿ ಸರಿಸುಮಾರು ಪ್ರತಿ ತಿಂಗಳೂ ಅಪ್‌ಡೇಟ್‌ ನೀಡಿ ಆಂಡ್ರಾಯ್ಡ್ ಫೋನ್‌ನ ಭದ್ರತೆಯನ್ನು, ಕಾರ್ಯಕ್ಷಮತೆಯನ್ನು ಉತ್ತಮಪಡಿಸುತ್ತ ಇರುತ್ತದೆ. ಈ ರೀತಿಯ ಅಪ್‌ಡೇಟ್‌ಗಳು ಮೊದಲು ಸಿಗುವುದು ಸ್ಟಾಕ್‌ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೇ ವಿನಾ ಆಂಡ್ರಾಯ್ಡ್‌ನ ಮಾರ್ಪಾಟು ಆವೃತ್ತಿಗಳನ್ನು ಹೊಂದಿರುವ ಫೋನ್‌ಗಳಿಗೆ ಅಲ್ಲ ಎಂಬುದನ್ನು ನೀವು ತಿಳಿಯಬೇಕು.

ಬಳಕೆದಾರರೇ ನಿರ್ಧರಿಸಬಹುದು.

ಬಳಕೆದಾರರೇ ನಿರ್ಧರಿಸಬಹುದು.

ಸ್ಟಾಕ್‌ ಆಂಡ್ರಾಯ್ಡ್ ವ್ಯವಸ್ಥೆ ಇದ್ದಲ್ಲಿ, ಫೋನ್‌ನ ಹೋಂ ಸ್ಕ್ರೀನ್ ಹೇಗಿರಬೇಕು, ಆಪ್‌ ಡ್ರಾವರ್ ಹೇಗಿರಬೇಕು ಎಂಬುದನ್ನು ಬಳಕೆದಾರರೇ ನಿರ್ಧರಿಸಬಹುದು. ಬಳಕೆದಾರ ತನಗೆ ಬೇಕಾದಂತೆ ಹೋಂ ಸ್ಕ್ರೀನ್ ಮರುವಿನ್ಯಾಸ ಮಾಡಿಕೊಳ್ಳಬಹುದು. ಆದರೆ, ರೂಪಾಂತರಗೊಂಡ ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ವ್ಯವಸ್ಥೆಯಲ್ಲಿ ಈ ಅವಕಾಶ ಇಲ್ಲ ಎಂಬುದನ್ನು ನೀವು ತಿಳಿದಿರಿ.

ಹೆಚ್ಚಿನ ಅಧಿಕಾರ!

ಹೆಚ್ಚಿನ ಅಧಿಕಾರ!

ಶುದ್ಧ ರೂಪದ ಆಂಡ್ರಾಯ್ಡ್ ಬಳಸದ ಸ್ಮಾರ್ಟ್‌ಫೋನ್‌ಗಳಲ್ಲಿ ಬೇರೆ ಬೇರೆ ವೆಬ್‌ ಬ್ರೌಸರ್‌ಗಳು ಇರುತ್ತದೆ. ಕೆಲವು ಫೋನ್‌ಗಳು ಈ ಬೇರೆ ಬ್ರೌಸರ್‌ಗಳನ್ನು ತೆಗೆದುಹಾಕಲು ಬಿಡುವುದಿಲ್ಲ. ಆದರೆ, ಸ್ಟಾಕ್‌ ಆಂಡ್ರಾಯ್ಡ್‌ನಲ್ಲಿ ಇರುವುದು ಗೂಗಲ್‌ ಕ್ರೋಂ ವೆಬ್‌ ಬ್ರೌಸರ್‌ ಮಾತ್ರ. ಆದರೆ, ಬಳಕೆದಾರನಿಗೆ ಹೆಚ್ಚಿನ ಅಧಿಕಾರ ನೀಡುವುದು ಸ್ಟಾಕ್‌ ಆಂಡ್ರಾಯ್ಡ್ ಫೋನ್‌ಗಳು ಮಾತ್ರ.

ಫೋನ್‌ ವೇಗ ಹೆಚ್ಚಿರುತ್ತದೆ!

ಫೋನ್‌ ವೇಗ ಹೆಚ್ಚಿರುತ್ತದೆ!

ಸ್ಟಾಕ್‌ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಲ್ಲಿ ಹಲವು ಲಾಭಗಳಿವೆ. ಅದರಲ್ಲಿ ಫೋನಿನ ವೇಗ ಹೆಚ್ಚಿರುವುದು ಒಂದು. ಸ್ಟಾಕ್ ಆಂಡ್ರಾಯ್ಡ್ ಫೋನಿನಲ್ಲಿ ಅನಗತ್ಯ ಆಪ್‌ಗಳು ಇಲ್ಲದಿರುವ ಕಾರಣ, ರ್ಯಾಮ್ ಬಳಕೆ ಕೂಡ ಚೆನ್ನಾಗಿರುತ್ತದೆ. ಇದರ ಪರಿಣಾಮವಾಗಿ, ಫೋನ್‌ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.

ಆಪಲ್‌ಗೂ ಸೆಡ್ಡು ಹೊಡೆಯುತ್ತದೆ.

ಆಪಲ್‌ಗೂ ಸೆಡ್ಡು ಹೊಡೆಯುತ್ತದೆ.

ಐಫೋನ್ ಪ್ರೇಮಿಗಳು ಆಂಡ್ರಾಯ್ಡ್ ಫೋನ್‌ಗಳ ಬಗ್ಗೆ ಆಗಾಗ ಒಂದು ವಿಷಯ ಇಟ್ಟುಕೊಂಡು ತಮಾಷೆ ಮಾಡುವುದುಂಟು. ಅದು ಆಂಡ್ರಾಯ್ಡ್ ಫೋನ್‌ಗಳಲ್ಲಿನ ಭದ್ರತೆ, ಕಾರ್ಯಕ್ಷಮತೆಗೆ ಸಂಬಂಧಿಸಿದ್ದು. ಆದರೆ, ಸ್ಟಾಕ್ ಆಂಡ್ರಾಯ್ಡ್ ಆಂಡ್ರಾಯ್ಡ್ ಫೋನ್‌ಗಳಲ್ಲಿನ ಭದ್ರತೆ, ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಹೆಚ್ಚು ಉತ್ತಮವಾಗಿದೆ. ಇದು ಆಪಲ್‌ಗೂ ಸೆಡ್ಡು ಹೊಡೆಯುತ್ತಿದೆ.

Best Mobiles in India

English summary
Stock Android,Stock, Android, googlle, mobile, smartphone, phone, ಸ್ಟಾಕ್, ಆಂಡ್ರಾಯ್ಡ್, ಫೋನ್, ಗೂಗಲ್, ಸ್ಮಾರ್ಟ್‌ಫೋನ್, news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+