Redmi 12C ಸ್ಮಾರ್ಟ್‌ಫೋನ್ ಗ್ಲೋಬಲ್ ವೇರಿಯೆಂಟ್ ಬಿಡುಗಡೆ! ಫೀಚರ್ಸ್ ಹೇಗಿದೆ? ವಿಶೇಷತೆ ಏನು?
ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್‌ನಲ್ಲಿ ಹೊಸ ರೆಡ್ಮಿ 12C ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನ ಗ್ಲೋಬಲ್ ವೇರಿಯೆಂಟ್ ಆಯ್ಕೆಯು ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ರೆಡ್ಮಿ 12C ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ 12C ಡಿಸ್‌ಪ್ಲೇ ವಿನ್ಯಾಸ ಹೇಗಿದೆ?
ರೆಡ್ಮಿ 12C ಸ್ಮಾರ್ಟ್‌ಫೋನ್ 6.71 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20.6:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಅಲ್ಲದೆ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ.
ರೆಡ್ಮಿ 12C ಪ್ರೊಸೆಸರ್ ಯಾವುದು?
ರೆಡ್ಮಿ 12C ಸ್ಮಾರ್ಟ್‌ಫೋನ್ ಮಿಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಎರಡು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ಸ್ ಮತ್ತು ಮೂರು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ಅನ್ನು ಪಡೆದಿದೆ. ಹಾಗೆಯೇ 4GB RAM + 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.

ರೆಡ್ಮಿ 12C ಕ್ಯಾಮೆರಾ ಸೆಟ್‌ಅಪ್ ಏನಿದೆ?
ರೆಡ್ಮಿ 12C ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ರಿಯರ್ ಕ್ಯಾಮೆರಾ ಮೂಲಕ ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ (fps) 1080p ವರೆಗಿನ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
ರೆಡ್ಮಿ 12C ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ?
ರೆಡ್ಮಿ 12C ಸ್ಮಾರ್ಟ್‌ಫೋನ್ 10W ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ AI ಕ್ರಿಯೇಟ್ ಅನ್‌ಲಾಕ್, ಡ್ಯುಯಲ್ ಸಿಮ್ ಬೆಂಬಲ, ವೈ-ಫೈ, ಬ್ಲೂಟೂತ್ 5.1, ಎಫ್‌ಎಂ ರೇಡಿಯೋ ಮತ್ತು 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಬೆಂಬಲಿಸಲಿದೆ.

ರೆಡ್ಮಿ 12C ಬೆಲೆ ಮತ್ತು ಲಭ್ಯತೆ
ರೆಡ್ಮಿ 12C ಸ್ಮಾರ್ಟ್‌ಫೋನ್ ಇಂಡೋನೇಷ್ಯಾದಲ್ಲಿ 4GB RAM + 128GB ಇಂಟರ್ ಸ್ಟೋರೇಜ್ ವೇರಿಯಂಟ್ ಆಯ್ಕೆಯು IDR 1,599,000 (ಸುಮಾರು 8,500ರೂ)ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಶಾಡೋ ಬ್ಲಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಕಲರ್ ಆಯ್ಕೆಗಳಲ್ಲಿ ಬರಲಿದೆ.


Click it and Unblock the Notifications








