Home
ಸುದ್ದಿಜಾಲ

ರೆಡ್ಮಿ ಸಂಸ್ಥೆಯ ಈ ಫೋನ್‌ ಇದೀಗ 51% ಡಿಸ್ಕೌಂಟ್‌ ಪಡೆದಿದೆ! ಆಫರ್‌ ಮಿಸ್‌ ಮಾಡ್ಕೋಬೇಡಿ!

ಅಮೆಜಾನ್‌ ತಾಣದಲ್ಲಿ ರೆಡ್ಮಿ 12C ಸ್ಮಾರ್ಟ್‌ಫೋನ್‌ ಮೇಲೆ ಈಗಾಗಲೇ ವಿಶೇಷ ಆಫರ್‌ ನೀಡಲಾಗಿತ್ತು. ಆದರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಫೈನಲ್‌ ಡೇಸ್‌ ಸೇಲ್‌ನಲ್ಲಿನ ಇದರ ಮೇಲೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಘೋಷಿಸಲಾಗಿದೆ. ಈ ಮೂಲಕ ರೆಡ್ಮಿ 12C ಸ್ಮಾರ್ಟ್‌ಫೋನ್‌ ಹಿಂದೆಂದಿಗಿಂತಲೂ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.

ಹೌದು, ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಎಂಟ್ರಿ ನೀಡಿದ್ದ ರೆಡ್ಮಿ 12C ಕೈ ಗೆಟಕುವ ಬೆಲೆಗೆ ಲಭ್ಯವಾಗುತ್ತಿದೆ. ಅಮೆಜಾನ್‌ ನೀಡುತ್ತಿರುವ ಡಿಸ್ಕೌಂಟ್‌ ನೋಡುದ್ರೆ ಸ್ಮಾರ್ಟ್‌ಫೋನ್‌ ಪ್ರಿಯರು ಕೂಡ ಬೆರಗಾಗುವಂತೆ ಮಾಡಿದೆ. ಜೊತೆಗೆ ನೋ ಕಾಸ್ಟ್‌ ಇಎಂಐ ಆಫರ್‌ ಕೂಡ ಲಭ್ಯವಾಗುತ್ತಿರುವದರಿಂದ ಫೀಚರ್‌ ಫೋನ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಆಯ್ಕೆ ಸಿಗುತ್ತಿದೆ. ಹಾಗಾದ್ರೆ ರೆಡ್ಮಿ 12C ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ನೀಡುತ್ತಿರುವ ಡಿಸ್ಕೌಂಟ್‌ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಸಂಸ್ಥೆಯ ಈ ಫೋನ್‌ ಇದೀಗ 51% ಡಿಸ್ಕೌಂಟ್‌ ಪಡೆದಿದೆ! ಮಿಸ್‌ ಮಾಡ್ಕೋಬೇಡಿ!

ರೆಡ್ಮಿ 12C ಫೋನ್‌ ಮೇಲೆ ಏನಿದೆ ಡಿಸ್ಕೌಂಟ್‌!
ರೆಡ್ಮಿ 12C ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ಫೈನಲ್‌ ಡೇಸ್‌ ಸೇಲ್‌ನಲ್ಲಿ 51% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದು ರೆಡ್ಮಿ 12C ಸ್ಮಾರ್ಟ್‌ಫೋನ್‌ನ 4GB RAM ಹಾಗೂ 64GB ಸ್ಟೋರೇಜ್‌ ಆಯ್ಕೆಗೆ ಅನ್ವಯಲಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ ಅನ್ನು ನೀವು 13,999ರೂ ಬದಲಿಗೆ ಕೇವಲ 6,799ರೂ ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ನೋ ಕಾಸ್ಟ್‌ ಇಎಂಐ ಆಫರ್‌ ಹಾಗೂ ಬ್ಯಾಂಕ್‌ ಆಫರ್‌ಗಳು ಕೂಡ ಲಭ್ಯವಾಗುವುದರಿಂದ ಅತಿ ಕಡಿಮೆ ಬೆಲೆಯಲ್ಲಿ ಇದನ್ನು ಖರೀದಿಸಲು ಸಾಧ್ಯವಾಗಲಿದೆ.

ರೆಡ್ಮಿ 12C ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರೆಡ್ಮಿ 12C ಸ್ಮಾರ್ಟ್‌ಫೋನ್ 6.71 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1600×720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಜೊತೆಗೆ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.

ರೆಡ್ಮಿ ಸಂಸ್ಥೆಯ ಈ ಫೋನ್‌ ಇದೀಗ 51% ಡಿಸ್ಕೌಂಟ್‌ ಪಡೆದಿದೆ! ಮಿಸ್‌ ಮಾಡ್ಕೋಬೇಡಿ!

ರೆಡ್ಮಿ 12C ಪ್ರೊಸೆಸರ್‌ ಯಾವುದು?
ರೆಡ್ಮಿ 12C ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೇಸ್‌ ಮಾಡೆಲ್‌ 4GB RAM ಹಾಗೂ 64GB ಇಂಟರ್‌ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಿದೆ.

ರೆಡ್ಮಿ 12C ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ರೆಡ್ಮಿ 12C ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಎರಡು ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್ ಮೋಡ್ ಮತ್ತು ನೈಟ್ ಮೋಡ್‌ ಅನ್ನು ಕಾಣಬಹುದು. ಇದಲ್ಲದೆ ಸ್ಮಾರ್ಟ್‌ಫೋನ್‌ 5ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ರೆಡ್ಮಿ ಸಂಸ್ಥೆಯ ಈ ಫೋನ್‌ ಇದೀಗ 51% ಡಿಸ್ಕೌಂಟ್‌ ಪಡೆದಿದೆ! ಮಿಸ್‌ ಮಾಡ್ಕೋಬೇಡಿ!

ರೆಡ್ಮಿ 12C ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?
ರೆಡ್ಮಿ 12C ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು 10W ಚಾರ್ಜಿಂಗ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್‌, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌, ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆಯನ್ನು ಬೆಂಬಲಿಸಲಿದೆ.

ಇದೇ ಸಮಯದಲ್ಲಿ ರೆಡ್ಮಿ A2 ಸ್ಮಾರ್ಟ್‌ಫೋನ್‌ ಸಹ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಇದು 47% ಡಿಸ್ಕೌಂಟ್‌ ಪಡೆದಿದ್ದು, ಕೇವಲ 5,299ರೂ ಬೆಲೆಗೆ ದೊರೆಯುತ್ತಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Redmi 12C Smartphone Has Received 51% Discount on amazon: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+