Home
ಸುದ್ದಿಜಾಲ

ರೆಡ್ಮಿ 13C ಸರಣಿಯ ಸೇಲ್‌ ಕಂಡು ಕಂಗಾಲಾದ ಪ್ರತಿಸ್ಪರ್ಧಿಗಳು! ಸೇಲ್‌ನಲ್ಲಿ ಹೊಸ ದಾಖಲೆ ಬರೆದ ರೆಡ್ಮಿ!

ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ರೆಡ್ಮಿ ಬ್ರ್ಯಾಂಡ್‌ ಇದೀಗ ಹೊಸ ದಾಖಲೆ ಬರೆದಿದೆ. ಇದೇ ಡಿಸೆಂಬರ್‌ ತಿಂಗಳ ಆರಂಭದಲ್ಲಿ ಭಾರತದಲ್ಲಿ ಪರಿಚಯಿಸಿದ ರೆಡ್ಮಿ 13C ಸರಣಿ ತನ್ನ ಮಾರಾಟದಲ್ಲಿ ಹೊದ ದಾಖಲೆಯನ್ನು ಸೃಷ್ಟಿಸಿದೆ. ಈ ಸರಣಿಯಲ್ಲಿ ಪ್ರಾರಂಭವಾದ 4G ಮಾದರಿ ಮತ್ತು 5G ರೂಪಾಂತರ ಎರಡೂ ಕೂಡ ಸೇಲ್‌ ಆಗುವುದರಲ್ಲಿ ಮುಂಚೂಣಿಯಲ್ಲಿವೆ.

ಹೌದು, ರೆಡ್ಮಿ 13C ಸರಣಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿರುವ ಸಂಖ್ಯೆಯನ್ನು ಕೇಳಿ ಟೆಕ್‌ ವಲಯವೇ ಬೆಚ್ಚಿ ಬಿದ್ದಿದೆ. ಪ್ರತಿಸ್ಫರ್ಧಿಗಳು ಇದೇನಿದು ಅಂತಾ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಯಾಕೆಂದರೆ ಕೇವಲ ಒಂದು ಇಪ್ಪತ್ತು ದಿನಗಳ ಅವಧಿಯಲ್ಲಿ 3,00,000 ಯೂನಿಟ್ ರೆಡ್ಮಿ 13C ಸರಣಿ ಫೋನ್‌ಗಳು ಮಾರಾಟವಾಗಿದೆ. ಇದನ್ನು ಸ್ವತಃ ಶಿಯೋಮಿ ಕಂಪೆನಿಯು ಬಹಿರಂಗಪಡಿಸಿದೆ. ಅಷ್ಟಕ್ಕೂ ರೆಡ್ಮಿ 13C ಫೋನ್‌ ದಾಖಲೆಯ ಮಾರಾಟಕ್ಕೆ ಕಾರಣ ಏನು? ಈ ಫೋನ್‌ ಫೀಚರ್ಸ್‌ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ 13C ಸೇಲ್‌ ಕಂಡು ಕಂಗಾಲಾದ ಪ್ರತಿಸ್ಪರ್ಧಿಗಳು! ಹೊಸ ದಾಖಲೆ ಬರೆದ ರೆಡ್ಮಿ!

ದಾಖಲೆ ಮಾರಾಟ ಕಂಡ ರೆಡ್ಮಿ 13C ಸರಣಿ
ರೆಡ್ಮಿ 13C ಸರಣಿ ಸ್ಮಾರ್ಟ್‌ಫೋನ್‌ಗಳು ಕಳೆದ ವಾರ ಮೊದಲ ಬಾರಿಗೆ ಮಾರಾಟಕ್ಕೆ ಬಂದಿವೆ. ಇಷ್ಟು ಕಡಿಮೆ ಅವಧಿಯಲ್ಲಿ 3,00,000 ಯೂನಿಟ್ ಸೇಲ್‌ ಆಗುವ ಮೂಲಕ ಭಾರಿ ಸಂಲಚನ ಸೃಷ್ಟಿಸಿದೆ. ಇನ್ನು ಈ ಸರಣಿಯಲ್ಲಿ 4G ಮಾದರಿ ಮತ್ತು 5G ರೂಪಾಂತರ ಎರಡನ್ನು ಕೂಡ ಪರಿಚಯಿಸಲಾಗಿದೆ. ಆದರೆ ಇಷ್ಟು ಸಂಖ್ಯೆಯ ಮಾರಾಟದಲ್ಲಿ ಯಾವ ರೂಪಾಂತರ ಹೆಚ್ಚಿನ ಸಂಖ್ಯೆಯ ಮಾರಾಟ ಕಂಡಿದೆ ಎಂಬುದರ ಬಗ್ಗೆ ಶಿಯೋಮಿ ಕಂಪೆನಿ ಸ್ಪಷ್ಟಪಡಿಸಿಲ್ಲ.

ಸೇಲ್‌ ಆರಂಭವಾಗಿದ್ದು ಯಾವಾಗ?
ರೆಡ್ಮಿ 13C ಸರಣಿಯ ಮೊದಲ ಮಾರಾಟವು ಡಿಸೆಂಬರ್ 12 ರಂದು ಪ್ರಾರಂಭವಾಯಿತು. ನಂತರ ಡಿಸೆಂಬರ್ 16 ರಂದು ರೆಡ್ಮಿ 13C 5G ಯ ಉದ್ಘಾಟನಾ ಮಾರಾಟವನ್ನು ನಡೆಸಲಾಯ್ತು. ಈ ಎರಡೂ ಉತ್ಪನ್ನಗಳನ್ನು Mi.com, Amazon India ಮತ್ತು Xiaomi ರಿಟೇಲ್‌ ಸ್ಟೋರ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

ರೆಡ್ಮಿ 13C ಸೇಲ್‌ ಕಂಡು ಕಂಗಾಲಾದ ಪ್ರತಿಸ್ಪರ್ಧಿಗಳು! ಹೊಸ ದಾಖಲೆ ಬರೆದ ರೆಡ್ಮಿ!

ರೆಡ್ಮಿ 13C 5G ಫೀಚರ್ಸ್‌ ಹೇಗಿದೆ?
ರೆಡ್ಮಿ 13C 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದ್ದು, 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಜೊತೆಗೆ ಡಿಸ್‌ಪ್ಲೇ 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್‌ ಅನ್ನು ಸಪೋರ್ಟ್ ಮಾಡುತ್ತದೆ.

ರೆಡ್ಮಿ 13C 5G ಪ್ರೊಸೆಸರ್‌ ಯಾವುದು?
ರೆಡ್ಮಿ 13C 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಸಪೋರ್ಟ್‌ ನೊಂದಿಗೆ ರನ್‌ ಆಗಲಿದೆ. ಹಾಗೆಯೇ 6GB RAM + 128GB ಹಾಗೂ 8GB RAM+ 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ರೆಡ್ಮಿ 13C ಸೇಲ್‌ ಕಂಡು ಕಂಗಾಲಾದ ಪ್ರತಿಸ್ಪರ್ಧಿಗಳು! ಹೊಸ ದಾಖಲೆ ಬರೆದ ರೆಡ್ಮಿ!

ರೆಡ್ಮಿ 13C 5G ಕ್ಯಾಮೆರಾ ಸೆಟಪ್‌
ರೆಡ್ಮಿ ನೋಟ್‌ 13 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ರೆಡ್ಮಿ 13C 5G ಬ್ಯಾಟರಿ ಮತ್ತು ಇತರೆ
ರೆಡ್ಮಿ ನೋಟ್‌ 13 ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 3.5 ಎಂಎಂ ಆಡಿಯೊ ಜಾಕ್, 5G SA, NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.3, GPS + GLONASS, USB ಟೈಪ್-C ಚಾರ್ಜಿಂಗ್‌ ಸಪೋರ್ಟ್‌ ಮಾಡುತ್ತದೆ.

Best Mobiles in India

English summary
Redmi 13C series phones sale over 3,00,000 units: details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+