ರೆಡ್ಮಿ 13C ಸ್ಮಾರ್ಟ್‌ಫೋನ್ ಲಾಂಚ್ ಟೀಸರ್‌ಗೆ ದಂಗಾದ ಮೊಬೈಲ್ ಮಾರುಕಟ್ಟೆ!
ಶಿಯೋಮಿ ಕಂಪೆನಿ ರೆಡ್ಮಿ ಬ್ರ್ಯಾಂಡ್‌ನಲ್ಲಿ ಪರಿಚಯಿಸಿರುವ ಫೋನ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ. ರೆಡ್ಮಿ ಫೋನ್‌ಗಳ ವಿನ್ಯಾಸ ಹಾಗೂ ಅವುಗಳ ಕ್ಯಾಮೆರಾ ಮಾಡ್ಯೂಲ್‌ಗಳು ಹೆಚ್ಚು ಗಮನಸೆಳೆದಿವೆ. ಇದೀಗ ಶಿಯೋಮಿ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಮತ್ತೊಂದು ಫೋನ್ ಪರಿಚಯಿಸಲು ಮುಂದಾಗಿದೆ. ಇದನ್ನು ರೆಡ್ಮಿ 13C ಸ್ಮಾರ್ಟ್‌ಫೋನ್ ಎಂದು ಗುರುತಿಸಲಾಗಿದೆ.
ಹೌದು, ರೆಡ್ಮಿ 13C ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಆನ್‌ಲೈನ್‌ನಲ್ಲಿ ವರದಿ ಆಗ್ತಿದ್ದ ಹಾಗೇ ಮೊಬೈಲ್ ಮಾರುಕಟ್ಟೆಯಲ್ಲಿ ಈ ಫೋನ್ ಬಗ್ಗೆ ಸಾಕಷ್ಟು ಕುತೂಹಲ ಗರಿಗೆದರಿದೆ. ಏಕೆದರೆ ಈ ಹ್ಯಾಂಡ್‌ಸೆಟ್‌ನ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳ ವಿವರಗಳು ಕಣ್ಮನಸೆಳೆಯುತ್ತಿವೆ. ಹಾಗಾದ್ರೆ ರೆಡ್ಮಿ 13C ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ 13C ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ರಚನೆ ಸಾಧ್ಯತೆ?
ರೆಡ್ಮಿ 13C ಸ್ಮಾರ್ಟ್‌ಫೋನ್ 6.74 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1650 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ. ಇದು 269 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದ್ದು, 500 ನೀಟ್ಸ್ ಬ್ರೈಟ್‌ನೆಸ್ ನೀಡಲಿದೆ ಎನ್ನಲಾಗಿದೆ. ಜೊತೆಗೆ 90 Hz ರಿಫ್ರೆಶ್ ರೇಟ್ ಹಾಗೂ 120 Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.
ರೆಡ್ಮಿ 13C ಸ್ಮಾರ್ಟ್‌ಫೋನ್ ಪ್ರೊಸೆಸರ್ ಯಾವುದು?
ರೆಡ್ಮಿ 13C ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 14.0.1 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ನೀಡುವ ನಿರೀಕ್ಷೆ ಇಡಲಾಗಿದೆ.

ರೆಡ್ಮಿ 13C ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟ್‌ಅಪ್
ರೆಡ್ಮಿ 13C ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿರಬಹುದು ಎಂಬ ನಿರೀಕ್ಷೆಯಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ರೆಡ್ಮಿ 13C ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಇತರೆ ಸೌಲಭ್ಯ
ರೆಡ್ಮಿ 13C ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 18W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.3, ವೈಫೈ, ಹಾಟ್‌ಸ್ಪಾಟ್, ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಬೆಂಬಲಿಸಬಹುದು ಎನ್ನಲಾಗಿದೆ.

ರೆಡ್ಮಿ 13C ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ ನಿರೀಕ್ಷೆ?
ರೆಡ್ಮಿ 13C ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆ ಆಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ನ ಬೇಸ್ ಮಾಡೆಲ್ 10,999ರೂ ಆರಂಭಿಕ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಇದೇ ಸಮಯದಲ್ಲಿ ರೆಡ್ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಇ-ಕಾಮರ್ಸ್ ಟೈಟ್‌ಗಳಲ್ಲಿ ಭಾರಿ ರಿಯಾಯಿತಿ ದೊರೆಯುತ್ತಿದೆ. ಇದರಲ್ಲಿ ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ಗೆ ಬಿಗ್ ಆಫರ್ ನೀಡಲಾಗಿದೆ. ಈ ಫೋನ್‌ನ ಸಾಮಾನ್ಯ ದರ 16,999ರೂ.ಗಳಾಗಿದೆ. ಆದರೆ ಇದರ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ 18% ಡಿಸ್ಕೌಂಟ್ ದೊರೆಯುತ್ತಿರುವುದರಿಂದ 13,890ರೂ.ಗಳಿಗೆ ಖರೀದಿಗೆ ಸಿಗಲಿದೆ.


Click it and Unblock the Notifications








