Home
ಸುದ್ದಿಜಾಲ

12 ಸಾವಿರಕ್ಕಿಂತ ಕಡಿಮೆ! 512GB ಸ್ಟೋರೇಜ್.. 5060mAh ಬ್ಯಾಟರಿ.. ಬರ್ತಿದೆ ಹೊಸ Redmi ಫೋನ್

ರೆಡ್ಮಿ ಇತ್ತೀಚೆಗೆ ರೆಡ್ಮಿ 14C 4G (Redmi 14C 4G) ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ, ಮತ್ತೊಂದು ರೆಡ್ಮಿ ಮೊಬೈಲ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಹೌದು, ಕಂಪನಿಯು ರೆಡ್ಮಿ 14C 5G (Redmi 14C 5G) ಅನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ವಿಶೇಷವೆಂದರೆ, ಈ 5G ರೆಡ್ಮಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾತ್ರ ಮೊದಲು ಲಭ್ಯವಿರುತ್ತದೆ. ಇದನ್ನು ಕೇವಲ 12 ಸಾವಿರ ರೂ.ಗೆ ಪರಿಚಯಿಸುವ ಸಾಧ್ಯತೆಯಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ರೆಡ್ಮಿ 14C 5G ಫೋನಿನ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಈ ಹೊಸ 5G ಮೊಬೈಲ್ ಭಾರತದಲ್ಲಿ 2025ರ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿದೆ. ಈ ಫೋನಿನ ಹೆಸರನ್ನು ಕಂಪನಿ ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, ಟೀಸರ್ ನೋಡಿದಾಗ, ಇದು ರೆಡ್ಮಿ 14C 5G ಸ್ಮಾರ್ಟ್‌ಫೋನ್ ಎಂದು ಊಹಿಸಬಹುದು. ಕಂಪನಿಯು ಈ ಫೋನನ್ನು #2025G ಹ್ಯಾಶ್‌ಟ್ಯಾಗ್‌ನೊಂದಿಗೆ ಪ್ರಚಾರ ಮಾಡುತ್ತಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.

ಕೇವಲ 12000 ರೂ.! 512GB ಸ್ಟೋರೇಜ್, 5060mAh ಬ್ಯಾಟರಿ; ಬರಲಿದೆ ಹೊಸ Redmi ಫೋನ್

ರೆಡ್ಮಿ 14C 5G ಫೋನಿನ ಬೆಲೆ (ನಿರೀಕ್ಷಿತ)

ವರದಿಯ ಪ್ರಕಾರ ರೆಡ್ಮಿ 14C 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿರಲಿದೆ. ಈ ಪ್ರೊಸೆಸರ್‌ ಅನ್ನು ಕಡಿಮೆ ಬಜೆಟ್‌ನ ಫೋನ್‌ಗಳಿಗಾಗಿ ನಿರ್ಮಿಸಲಾಗಿದೆ. ಇವುಗಳನ್ನು 15 ಸಾವಿರ ರೂ. ವರೆಗಿನ ಬಜೆಟ್‌ನಲ್ಲಿ ತರಲಾಗುತ್ತದೆ. POCO M6 Plus ಮತ್ತು Redmi 13 5G ಫೋನ್‌ಗಳಲ್ಲಿ ಈ ಪ್ರೊಸೆಸರ್ ಅನ್ನು ಕಾಣಬಹುದು. ಆದರೆ, Redmi 14C 5G ಫೋನನ್ನು 4GB RAM ನೊಂದಿಗೆ ಬಿಡುಗಡೆ ಮಾಡಬಹುದು. ಇದರ ಬೆಲೆ 12 ಸಾವಿರ ರೂ. ಇರಲಿದೆ.

ರೆಡ್ಮಿ 14C 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ 14C 5G ಮೊಬೈಲ್ 6.88 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ದೊಡ್ಡ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಫೋನ್ 720 x 1640 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರದ ಬೆಂಬಲ ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ರೆಡ್ಮಿ 14C 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 2.36 GHz ಗಡಿಯಾರದ ವೇಗದ ಆಕ್ಟಾಕೋರ್ ಪ್ರೊಸೆಸರ್ ಆಗಿದೆ.

ಸ್ಟೋರೇಜ್ ಆಯ್ಕೆ

ರೆಡ್ಮಿ 14C 5G ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು RAM ಮತ್ತು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು 4GB, 6GB, 8GB ಮತ್ತು 12GB RAM ಹೊಂದಿದೆ. ಹಾಗೆಯೇ 64GB, 128GB, 256GB ಮತ್ತು 512GB ಸ್ಟೋರೇಜ್ ಲಭ್ಯವಿರುತ್ತದೆ. ಆದರೆ, ಈ ಫೋನ್ ಭಾರತೀಯ ಮಾರುಕಟ್ಟೆಗಳಲ್ಲಿ ಬೇರೆ ರೂಪಾಂತರಗಳಲ್ಲಿ ಮಾರಾಟವಾಗಲಿದೆ.

ಕೇವಲ 12000 ರೂ.! 512GB ಸ್ಟೋರೇಜ್, 5060mAh ಬ್ಯಾಟರಿ; ಬರಲಿದೆ ಹೊಸ Redmi ಫೋನ್

ಕ್ಯಾಮೆರಾ ಸೆಟಪ್

ರೆಡ್ಮಿ 14C 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಹಾಗೆಯೇ 0.8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ 14C 5G ಫೋನ್ 5060mAh ಅಥವಾ 5160mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.

ಇತರೆ ವೈಶಿಷ್ಟ್ಯಗಳು

ರೆಡ್ಮಿ 14C 5G ಸ್ಮಾರ್ಟ್‌ಫೋನ್ 212.3 ಗ್ರಾಂ ತೂಕ ಹೊಂದಿರುತ್ತದೆ. ಈ ಮೊಬೈಲ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಒಳಗೊಂಡಿರಲಿದೆ.

Best Mobiles in India

English summary
Redmi 14C 5G launch in india in january 2025: Expected Price, Specs and More Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+