Home
ಸುದ್ದಿಜಾಲ

ಆ.31ಕ್ಕೆ Redmi 14C ಬಿಡುಗಡೆ; ಫೀಚರ್ಸ್‌ ಬಹಿರಂಗ.. ಕಡಿಮೆ ಬೆಲೆ!

ಶಿಯೋಮಿ ಕಂಪನಿಯ ಉಪ ಬ್ರಾಂಡ್ ರೆಡ್ಮಿ ತನ್ನ ಹೊಸ ಫೋನ್‌ ಬಿಡುಗಡೆಗೆ ಸಿದ್ಧವಾಗಿದೆ. ರೆಡ್ಮಿ 14 ಸರಣಿಯ ಅಡಿಯಲ್ಲಿ ರೆಡ್ಮಿ 14C 4G (Redmi 14C 4G) ಫೋನನ್ನು ಪರಿಚಯಿಸಲಿದೆ. ಇದೀಗ, ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ಆಗಸ್ಟ್ 31 ರಂದು ವಿಯೆಟ್ನಾಂನಲ್ಲಿ ರೆಡ್ಮಿ 14C 4G ಫೋನನ್ನು ಬಿಡುಗಡೆ ಮಾಡಲಾಗುವುದು. ಇದು ಈ ಹಿಂದೆ ಬಿಡುಗಡೆಯಾಗಿದ್ದ Redmi 13C 4G ಫೋನಿಗೆ ಉತ್ತರಾಧಿಕಾರಿಯಾಗಿ ಬರುತ್ತಿದೆ. ಈ ಫೋನಿನ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಬಿಡುಗಡೆಗೆ ಮುಂಚೆಯೇ, ಈ ಮುಂಬರುವ ರೆಡ್ಮಿ 14C 4G ಫೋನಿನ ವೈಶಿಷ್ಟ್ಯಗಳು ವಿಯೆಟ್ನಾಂ ಚಿಲ್ಲರೆ ವ್ಯಾಪಾರಿಗಳ ಮೂಲಕ ಬಹಿರಂಗಪಡಿಸಲಾಗಿದೆ. ಈ ಫೋನಿನ ಹಿಂಭಾಗವು ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ. ಇದು ಕಂಪನಿಯ ಹಿಂದಿನ ಮಾದರಿಗಳ ವಿನ್ಯಾಸದಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಫೋನಿನ ಸ್ಟೋರೇಜ್ ಮತ್ತು ಬಣ್ಣಗಳ ಆಯ್ಕೆಯೂ ಬಹಿರಂಗವಾಗಿದೆ.

ಆ.31ಕ್ಕೆ Redmi 14C ಬಿಡುಗಡೆ; ಫೀಚರ್ಸ್‌ ಬಹಿರಂಗ.. ಕಡಿಮೆ ಬೆಲೆ!

ರೆಡ್ಮಿ 14C 4G ಫೋನಿನ ಬೆಲೆ ಸೋರಿಕೆ!

ರೆಡ್ಮಿ 14C 4G ಮೊಬೈಲ್ ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಬರಲಿದೆ. ಈ ರೆಡ್ಮಿ 14C 4G ಸ್ಮಾರ್ಟ್‌ಫೋನ್ ವಿಶೇಷವಾಗಿ 12,000 ರೂ.ಗಳ ಬೆಲೆಯೊಂದಿಗೆ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರೆಡ್ಮಿ 14C 4G ಅಲ್ಲದೆ Redmi 14C 5G ಫೋನ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ. IMEI ಡೇಟಾಬೇಸ್‌ನಲ್ಲಿ ಬಹು ಮಾದರಿ ಸಂಖ್ಯೆಗಳೊಂದಿಗೆ ರೆಡ್ಮಿ 14C 5G ಫೋನನ್ನು ಗುರುತಿಸಲಾಗಿದೆ. ಚೀನಾ ಮಾತ್ರವಲ್ಲದೆ, ಜಾಗತಿಕ ಬಿಡುಗಡೆಗಾಗಿ ರೆಡ್ಮಿ 4G ಜೊತೆಗೆ 5G ರೂಪಾಂತರವನ್ನು ಸಿದ್ಧಪಡಿಸಲಾಗುತ್ತಿದೆ.

ರೆಡ್ಮಿ 14C ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)

ಕಂಪನಿಯು ಮುಂಬರುವ ರೆಡ್ಮಿ 14C ಫೋನನ್ನು Helio G91 ಅಲ್ಟ್ರಾ ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಫೋನಿನ ಕ್ಯಾಮೆರಾ ಲೆನ್ಸ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದು ಹಿಂದಿನ ಮಾದರಿಯಂತೆ ಮುಖ್ಯ ಕ್ಯಾಮೆರಾ ಮತ್ತು LED ಫ್ಲ್ಯಾಷ್‌ನೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ಫೋನ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ 1.0 ಓಎಸ್‌ನಲ್ಲಿ ಕೆಲಸ ಮಾಡಲಿದೆ.

ವರದಿಯ ಪ್ರಕಾರ, ರೆಡ್ಮಿ 14C 4G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಫೋನನ್ನು 4GB RAM ಮತ್ತು 128 GB ಸ್ಟೋರೇಜ್‌, 4GB RAM ಮತ್ತು 256 GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಈ ಹೊಸ ರೆಡ್ಮಿ 14C 4G ಫೋನ್ ಬಜೆಟ್ ಸ್ನೇಹಿ ಆಯ್ಕೆಯಾಗಿದೆ.

ಈ ಸ್ಮಾರ್ಟ್‌ಫೋನ್ 5,160mAh ಬ್ಯಾಟರಿಯನ್ನು ಹೊಂದಿರಲಿದೆ. ಇದು 18W ವೇಗದ ಚಾರ್ಜಿಂಗ್ ಸಪೋರ್ಟ್‌ ಪಡೆಯಲಿದೆ. ಬಯೋಮೆಟ್ರಿಕ್ಸ್‌ಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇತರೆ ವೈಶಿಷ್ಟ್ಯಗಳಲ್ಲಿ ಈ ಫೋನ್ 4G, NFC, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈ-ಫೈ, ಬ್ಲೂಟೂತ್‌ನಂತಹ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ರೆಡ್ಮಿ 13C 4G ಫೋನಿನ ವೈಶಿಷ್ಟ್ಯಗಳು

ರೆಡ್ಮಿ 13C 4G ಫೋನ್ 6.74 ಇಂಚಿನ HD Plus ಡಿಸ್ಲ್ಪೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಪಡೆದಿದೆ. ಈ ಫೋನ್‌ MediaTek Helio G85 ಚಿಪ್‌ಸೆಟ್ ಹೊಂದಿದೆ. ಇದು 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಇದು RAM ಪ್ಲಸ್ ವೈಶಿಷ್ಟ್ಯವನ್ನು ಸಹ ಹೊಂದಿದೆ.

ರೆಡ್ಮಿ 13C ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಒಳಗೊಂಡಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಎರಡು ಇತರ 2 ಮೆಗಾಪಿಕ್ಸೆಲ್ ಲೆನ್ಸ್‌ಗಳನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಮಾಡಲು 18W ವೇಗದ ಚಾರ್ಜಿಂಗ್ ಹೊಂದಿದೆ.

Best Mobiles in India

English summary
Redmi 14C launching on August 31: launch timeline and colour options revealed: Check specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+