Home
ಸುದ್ದಿಜಾಲ

ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ 'ರೆಡ್‌ ಮಿ 6 ಪ್ರೊ'!..ಬಿಡುಗಡೆ ದಿನಾಂಕ ಫಿಕ್ಸ್!!

By Bhaskar N J

ಬಹುತೇಕ ಹೈ ಎಂಡ್ ಫೀಚರ್ಸ್ ಹೊತ್ತು ಚೀನಾದಲ್ಲಿ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಡುತ್ತಿದೆ.! ಕೇವಲ 10 ಸಾವಿರ ರೂ.ಗಳಿಂದ ಆರಂಭವಾಗಿದ್ದ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಇದೇ ತಿಂಗಳ(ಜುಲೈ 21) ಒಳಗಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.

5.84-ಇಂಚಿನ ಡಿಸ್‌ಪ್ಲೇ, ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳು, ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 625 SoC ಪ್ರೊಸೆಸರ್, ಮೀಸಲಾದ ಮೈಕ್ರೊ ಕಾರ್ಡ್ ಸ್ಲಾಟ್ ಮತ್ತು AI ಫೇಸ್‌ ಅನ್ಲಾಕ್ ಫೀಚರ್ಸ್ ಎಲ್ಲವನ್ನು ಹೊಂದಿರುವ ಶಿಯೋಮಿಯ ಈ ಬಜೆಟ್ ಸ್ಮಾರ್ಟ್‌ಫೋನ್ 'ರೆಡ್‌ ಮಿ 6 ಪ್ರೊ' ಅನ್ನು ಚೀನಾದ ನಂತರ ಮೊದಲು ಭಾರತದಲ್ಲಿ ಪರಿಚಯಿಸಲಾಗುತ್ತಿದೆ.

ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ 'ರೆಡ್‌ ಮಿ 6 ಪ್ರೊ'!!

'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಆರಂಭವಾಗಿದ್ದರಿಂದಲೇ, ಬಿಡುಗಡೆಯಾದ ತಕ್ಷಣವೇ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೈರಲ್ ಆಗಿತ್ತು. ಹಾಗಾಗಿ, ವಿಶ್ವ ಮೊಬೈಲ್ ಮಾರುಕಟ್ಟೆಗೆ ಆಶ್ಚರ್ಯ ಮೂಡಿಸಿದ್ದ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಬಗೆಗಿನ ಪೂರ್ತಿ ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

ಮೊದಲೇ ಹೇಳಿದಂತೆ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ 19:9 ಅನುಪಾತದಲ್ಲಿ 5.84-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.ಶೇಕಡಾ 84ರಷ್ಟು ಎನ್‌ಟಿಎಸ್‌ಸಿ ಬಣ್ಣದ ಗ್ಯಾಮಟ್‌ನೊಂದಿಗೆ 1080x2280 ಪಿಕ್ಸೆಲ್‌ ಸಾಮರ್ಥ್ಯದ ಡಿಸ್‌ಪ್ಲೇ ಗುಣಟ್ಟಕ್ಕೆ ಸಾಕ್ಷಿಯಾಗಿದೆ. 'ಆಪಲ್ ಎಕ್ಸ್' ವಿನ್ಯಾಸದ ನೋಚ್ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಮೊಬೈಲ್ ಅಂದವನ್ನು ಹೆಚ್ಚಿಸಿವೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಇಂದು ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 625 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ ಬೇಸ್ MIUI 9 ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಆಡ್ರೆನೊ 506 ಜಿಪಿಯು ಹಾಗೂ 3GB ಮತ್ತು 4GB RAM ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ರೆಡ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಹೊಂದಿದೆ. ಎಫ್ / 2.2 ಅಪರ್ಚರ್, ಪಿಡಿಎಎಫ್, ಎಲ್ಇಡಿ ಫ್ಲಾಶ್ ಫೀಚರ್ಸ್ ಜೊತೆಗೆ 5MP ಮತ್ತು 12 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಹಿಂಬಾಗದಲ್ಲಿವೆ. AI ತಂತ್ರಜ್ಞಾನವನ್ನು ಹೊಂದಿರುವ HDR ನೊಂದಿಗೆ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಆಪಲ್ ನೋಟ್ ವಿನ್ಯಾಸವನ್ನು ಹೊಂದಿರುವ ರೆಡ್‌ ಮಿ 6 ಪ್ರೊ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಫೇಸ್‌ ಅನ್‌ಲಾಕ್ ಫೀಚರ್, 256GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಈ ಫೋನಿನಲ್ಲಿ 4 ಜಿ ವೋಲ್ಟ್, ವೈ-ಫೈ 802.11 ಡ್ಯುಯಲ್-ಬ್ಯಾಂಡ್ 2.4GHz, 5GHz), ಬ್ಲೂಟೂತ್ v4.2, ಜಿಪಿಎಸ್, ಮೈಕ್ರೋ-ಯುಎಸ್‌ಬಿ ಮತ್ತು 3.5 ಎಂಎಂ ಹೆಡ್‌ಫೀನ್ ಜ್ಯಾಕ್ ನೀಡಲಾಗಿದೆ.

ರೆಡ್‌ ಮಿ 6 ಪ್ರೊ ಬೆಲೆ ಮತ್ತು ಮಾರಾಟ!

ರೆಡ್‌ ಮಿ 6 ಪ್ರೊ ಬೆಲೆ ಮತ್ತು ಮಾರಾಟ!

4ಜಿಬಿ RAM ಮತ್ತು 64 ಜಿಬಿ ಮೆಮೊರಿ ವೆರಿಯಂಟ್ ರೂಪಾಂತರದ ರೆಡ್‌ ಮಿ 6 ಪ್ರೊ ಬೆಲೆ ಚೀನಾದಲ್ಲಿ 999 ಸಿಎನ್‌ವೈಗಳಾಗಿವೆ (ಸರಿಸುಮಾರು 13,600 ರೂ.). 3ಜಿಬಿ RAM ಮತ್ತು 32 ಜಿಬಿ ಮೆಮೊರಿ ವೆರಿಯಂಟ್ ರೂಪಾಂತರದ ರೆಡ್‌ ಮಿ 6 ಪ್ರೊ ಬೆಲೆ 1,299 ಸಿಎನ್‌ವೈಗಳಾಗಿವೆ (ಸರಿಸುಮಾರು 10,400 ರೂ.).!!

Best Mobiles in India

English summary
In this article, we take a look at the expected release date of Redmi 6 Pro in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+