ಮಾರ್ಕೆಟ್‌ನಲ್ಲಿ ಧೂಳೆಬ್ಬೆಸಲು ಬರ್ತಿದೆ ಶಿಯೋಮಿಯ ಹೊಸ ಫೋನ್‌..!

By Gizbot Bureau
|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿರುವ ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಶಿಯೋಮಿ ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ರೆಡ್‌ಮಿ 7A ಸ್ಮಾರ್ಟ್‌ಫೋನ್‌ನ್ನು ನಾಳೆ ಅಂದರೆ, ಜುಲೈ 4ರಂದು ಬಿಡುಗಡೆಗೊಳಿಸುತ್ತಿದೆ. ಇದನ್ನು ಸ್ವತಃ ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನುಕುಮಾರ್ ಜೈನ್ ಖಚಿತಪಡಿಸಿದ್ದು, ರೆಡ್‌ಮಿ 7A ಸ್ಮಾರ್ಟ್‌ಫೋನ್ ರೆಡ್‌ಮಿ 6Aಯ ಮುಂದುವರೆದ ಆವೃತ್ತಿಯಾಗಲಿದೆ.

ಮಾರ್ಕೆಟ್‌ನಲ್ಲಿ ಧೂಳೆಬ್ಬೆಸಲು ಬರ್ತಿದೆ ಶಿಯೋಮಿಯ ಹೊಸ ಫೋನ್‌..!

ವಾಲ್‌ಮಾರ್ಟ್ ಒಡೆತನದ ಇ ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್ ಶಿಯೋಮಿ ರೆಡ್‌ಮಿ 7A ಸ್ಮಾರ್ಟ್‌ಫೋನ್‌ಗಾಗಿ ಮೈಕ್ರೋಸೈಟ್ ಒಂದನ್ನು ಮೀಸಲಿಟ್ಟಿದೆ. ಸ್ಮಾರ್ಟ್‌ಫೋನ್‌ ಖರೀದಿಸಲು ಆಸಕ್ತಿ ಹೊಂದಿರುವವರು ನೋಟಿಫೈ ಮಿ ಆಯ್ಕೆಯನ್ನು ಕ್ಲಿಕ್ ಮಾಡಬಹುದಾಗಿದೆ. ಆದರೆ, ಶಿಯೋಮಿ ಅಥವಾ ಫ್ಲಿಪ್‌ಕಾರ್ಟ್ ನಾಳೆ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯ ಮತ್ತು ಸ್ಪೆಕ್ಸ್‌ಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ಗ್ರಾಹಕರಿಗೆ ಬಿಗ್ ಸರ್‌ಪ್ರೈಸ್‌ ನೀಡೋ ಸಾಧ್ಯತೆಯಿದೆ.

ರೆಡ್‌ಮಿ K 20 ಮತ್ತು K 20 ಪ್ರೊ

ರೆಡ್‌ಮಿ K 20 ಮತ್ತು K 20 ಪ್ರೊ

ಇನ್ನು, ರೆಡ್‌ಮಿ 7A ಜೊತೆಗೆ ಇದೇ ತಿಂಗಳಲ್ಲಿ ಶಿಯೋಮಿ ಕಂಪನಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ರೆಡ್‌ಮಿ K 20 ಪ್ರೊ ಮತ್ತು K 20 ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಜುಲೈ 15ಕ್ಕೆ ಭಾರತದಲ್ಲಿ ಶಿಯೋಮಿ ಕಾರ್ಯಾಚರಣೆ ಆರಂಭಿಸಿ 5 ವಸಂತಗಳು ಪೂರ್ಣಗೊಳ್ಳಲಿವೆ. ಈ ಹಿಂದಿನ ಸುಳಿವುಗಳಿಂದ ಅಂದೇ ಈ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವುದು ಪಕ್ಕಾ ಎನ್ನಲಾಗುತ್ತಿತ್ತು. ಸದ್ಯದ ಮಾಹಿತಿ ಪ್ರಕಾರ ಇದೇ ತಿಂಗಳಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುತ್ತವೆ. ಆದರೆ, 5ನೇ ವರ್ಷಾಚರಣೆಯ ಸಂದರ್ಭದಲ್ಲಿ ಲಾಂಚ್‌ ಆಗೋದು ಡೌಟ್‌.

ರೆಡ್‌ಮಿ 7A ಫೀಚರ್ಸ್

ರೆಡ್‌ಮಿ 7A ಫೀಚರ್ಸ್

ಈಗಾಗಲೇ ರೆಡ್‌ಮಿ 7A ಸ್ಮಾರ್ಟ್‌ಫೋನ್‌ನ್ನು ಚೀನಾದಲ್ಲಿ ಮೇ ತಿಂಗಳಿನಲ್ಲಿಯೇ ಲಾಂಚ್ ಮಾಡಲಾಗಿದೆ. 2GB + 16GB ಮತ್ತು 2GB + 32GB ಎರಡು ಮೆಮೊರಿ ಆವೃತ್ತಿಗಳಲ್ಲಿ ರೆಡ್‌ಮಿ 7A ಲಭ್ಯವಿದೆ. ಬೆಲೆ ಕೂಡ ಆರಂಭಿಕ ಹಂತದಲ್ಲಿದ್ದು, ಬಜೆಟ್‌ ಗ್ರಾಹಕರನ್ನು ಸೆಳೆಯಲಿದೆ. 2GB + 16GB ಸ್ಮಾರ್ಟ್‌ಫೋನ್‌ ಅಂದಾಜು 5,500 ರೂ.ಗೆ ದೊರೆತರೆ, 2GB + 32GB ಆವೃತ್ತಿ ಅಂದಾಜು 6,000 ರೂ.ಗೆ ದೊರೆಯಲಿದೆ.

ಪ್ರೊಸೆಸರ್, ಒಎಸ್

ಪ್ರೊಸೆಸರ್, ಒಎಸ್

ರೆಡ್‌ಮಿ 7A ಸ್ಮಾರ್ಟ್‌ಫೋನ್ ಒಕ್ಟಾ ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 439 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 9.0 ಪೈ ಒಎಸ್ ಆಧರಿಸಿ MIUI 10ನಲ್ಲಿ ಕೆಲಸ ಮಾಡುತ್ತದೆ. 18:9 ಆಸ್ಪೆಕ್ಟ್ ರೆ‍ಷಿಯೋ ಮತ್ತು 720x1440 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸ್ಮಾರ್ಟ್‌ಫೋನ್ 5.45 ಇಂಚಿನ ಡಿಸ್‌ಪ್ಲೇ ಸ್ಕ್ರೀನ್ ಹೊಂದಿದೆ.

ಕ್ಯಾಮೆರಾ, ಬ್ಯಾಟರಿ

ಕ್ಯಾಮೆರಾ, ಬ್ಯಾಟರಿ

ಫೋಟೋಗಳಿಗಾಗಿ ಶಿಯೋಮಿ ರೆಡ್‌ಮಿ 7A ಸ್ಮಾರ್ಟ್‌ಫೋನ್ 13MP ರಿಯರ್ ಕ್ಯಾಮೆರಾ ಮತ್ತು AI ಬೆಂಬಲಿತ ಫೇಸ್ ಅನ್‌ಲಾಕ್ ಹೊಂದಿರುವ 5MP ಫ್ರಂಟ್ ಫೇಸಿಂಗ್ ಶೂಟರ್ ಕ್ಯಾಮೆರಾ ಹೊಂದಿದೆ. ಇನ್ನು, 4,000mAh ಸಾಮರ್ಥ್ಯದ ಬ್ಯಾಟರಿ ಹಾಗೂ 10W ಚಾರ್ಜಿಂಗ್ ಬೆಂಬಲ ಹೊಂದಿದೆ.

ಇತರೆ ಫೀಚರ್ಸ್

ಇತರೆ ಫೀಚರ್ಸ್

ರೆಡ್‌ಮಿ 7A ಸ್ಮಾರ್ಟ್‌ಫೋನ್ 146.30 × 70.41 × 9.55 ಮಿ.ಮೀ. ಅಳತೆ ಹೊಂದಿದ್ದು, ಯಾವುದೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿಲ್ಲ. ಇದು ಡ್ಯುಯಲ್ 4G, VoLTE, 3G, ವೈಫೈ, ಬ್ಲೂಟೂತ್ ಮತ್ತು ಜಿಪಿಎಸ್ ಸಂಪರ್ಕ ಆಯ್ಕೆಗಳನ್ನು ಹೊಂದಿದೆ.

Best Mobiles in India

Read more about:
English summary
Redmi 7A To Launch In India On July 4, Flipkart Holds Exclusivity

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X