ಶಿಯೋಮಿ ರೆಡ್ಮಿ 8A ಡ್ಯುಯಲ್ 64GB ಸ್ಟೋರೇಜ್‌ ಫೋನ್ ಲಾಂಚ್!

|

ಶಿಯೋಮಿ ಸಂಸ್ಥೆಯು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕಳೆದ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ಎಂಟ್ರಿ ಲೆವೆಲ್ 'ರೆಡ್ಮಿ 8A ಡ್ಯುಯಲ್' ಹೆಚ್ಚು ಗ್ರಾಹಕರನ್ನು ಸೆಳೆದಿದೆ. ಈ ನಿಟ್ಟಿನಲ್ಲಿ ಶಿಯೋಮಿ ಈ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಇದೀಗ ಹೊಸದೊಂದು ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 6,499ರೂ.ಗಳು ಆಗಿದೆ.

3GB+ 32GB

ಹೌದು, ಶಿಯೋಮಿಯ ರೆಡ್ಮಿ 8A ಡ್ಯುಯಲ್ ಸ್ಮಾರ್ಟ್‌ಫೋನ್ ಈಗಾಗಲೇ 2GB+32GB ಮತ್ತು 3GB+ 32GB ಸಾಮರ್ಥ್ಯದ ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಈಗ ಹೊಸದಾಗಿ 3GB+ 64GB ಸ್ಟೋರೇಜ್‌ ವೇರಿಯಂಟ್‌ ಅನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯು ಗ್ರಾಹಕರಿಗೆ ಹೆಚ್ಚಿನ ಸ್ಟೋರೇಜ್ ಅನುಕೂಲ ಒದಗಿಸಲಿದ್ದು, ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಟ್ರೆಂಡ್ ಮೂಡಿಸುವ ಲಕ್ಷಣಗಳನ್ನು ನೀಡಿದೆ. ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ರೆಡ್ಮಿ 8A ಸ್ಮಾರ್ಟ್‌ಫೋನ್ 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ ಡಾಟ್‌ ನಾಚ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ಕವಚ ಪಡೆದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 270 ppi ಆಗಿದೆ.

ಪ್ರೊಸೆಸರ್ ಬಲವೇನು

ಪ್ರೊಸೆಸರ್ ಬಲವೇನು

ರೆಡ್ಮಿ 8A ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಸಹ ಇದೆ. ಮೂರು ವೇರಿಯಂಟ್ ಮಾದರಿಗಳ ಆಯ್ಕೆ ಇದ್ದು, ಅವುಗಳು ಕ್ರಮವಾಗಿ 2GB+32GB ಮತ್ತು 3GB+ 32GB ಈಗಾಗಲೇ ಇವೆ. ಈಗ ಹೊಸದಾಗಿ 3GB+ 64GB ವೇರಿಯಂಟ್ ಸೇರಿದೆ. ಇನ್ನು ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸುವ ಅವಕಾಶ ಸಹ ಇದೆ.

ಕ್ಯಾಮೆರಾ ಹೇಗಿದೆ

ಕ್ಯಾಮೆರಾ ಹೇಗಿದೆ

ರೆಡ್ಮಿ 8A ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಹಿಂಬದಿಯ ರಿಯರ್ ಕ್ಯಾಮೆರಾವು ಸೋನಿಯ IMX363 ಸಾಮರ್ಥ್ಯದ 13ಎಂಪಿ ಸೆನ್ಸಾರ್ ಪಡೆದಿದೆ. ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ. ಕ್ಯಾಮೆರಾದಲ್ಲಿ ಆಟೋ ಫೋಕಸ್‌ ಸೇರಿದಂತೆ ಆಕರ್ಷಕ ಎಡಿಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ರೆಡ್ಮಿ 8A ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್‌ ಆಗಿರುವುದು ಇದರ ಬ್ಯಾಟರಿಯೇ. ಈ ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಉಳಿದಂತೆ P2i ಕೋಟಿಂಗ್, ಎಫ್‌ಎಮ್ ರೇಡಿಯೊ, ಯುಎಸ್‌ಬಿ ಸಿ ಪೋರ್ಟ್, ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯಗಳು ಸಹ ಇವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ 8A ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಬೇಸ್ ಆವೃತ್ತಿಯು 2GB RAM + 32GB ಬೆಲೆಯು 6,499ರೂ ಆಗಿದೆ. ಇನ್ನು ಹೊಸ 3GB+ 64GB ವೇರಿಯಂಟ್ ಇದೇ ಜುಲೈ 15ರಂದು ಸೇಲ್ ಕಾಣಲಿದೆ.

Most Read Articles
Best Mobiles in India

English summary
This new variant will feature 64GB internal storage instead of 32GB in current models.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X