ಭಾರತದಲ್ಲಿ ಇಂದು ಶಿಯೋಮಿ ''ರೆಡ್‌ಮಿ 8ಎ'' ರಿಲೀಸ್!..ತಿಳಿಯಬೇಕಾದ ವಿಷಯಗಳು!

|

ದೇಶದ ನಂಬರ್ ಒನ್ ಮೊಬೈಲ್ ಮಾರಾಟಗಾರ ಕಂಪೆನಿ ಶಿಯೋಮಿ ಇಂದು ಭಾರತದಲ್ಲಿ ರೆಡ್ಮಿ 7 ಎ ಫೋನಿನ ಉತ್ತರಾಧಿಕಾರಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿರುವ ಉಡಾವಣಾ ಕಾರ್ಯಕ್ರಮದಲ್ಲಿ ಬಹುನಿರೀಕ್ಷಿತ ರೆಡ್‌ಮಿ 8ಎ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಖಚಿತವಾಗಿದೆ. ಈ ಹಿಂದೆ ಬಿಡುಗಡೆಯಾದ ರೆಡ್‌ಮಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳಂತೆಯೇ ಮುಂಬರುವ ರೆಡ್‌ಮಿ 8ಎ ಸಹ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಆಗುವ ನಿರೀಕ್ಷೆಯಿದೆ.

ಹೆಚ್‌ಡಿ + ಡಿಸ್‌ಪ್ಲೇ

ಇಂದು ದೇಶದಲ್ಲಿ ರೆಡ್‌ಮಿ 8ಎ ಔಪಚಾರಿಕ ಉಡಾವಣೆಗೆ ಸಜ್ಜಾಗಿರುವ ಕೆಲವೇ ದಿನಗಳ ಮೊದಲು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ 8ಎ ಸ್ಮಾರ್ಟ್‌ಪೋನನ್ನು ಪ್ರದರ್ಶಿಸಲಾಗಿದ್ದು, ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನೋಚ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಹೆಚ್‌ಡಿ + ಡಿಸ್‌ಪ್ಲೇ ಹಾಗೂ ವೇಗವಾಗಿ ಚಾರ್ಜಿಂಗ್ ಬ್ಯಾಟರಿ ಬೆಂಬಲದೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿದೆ.ರೆಡ್‌ಮಿ 8 ಎ ಯ ಅಧಿಕೃತ ಬೆಲೆಯನ್ನು ಕಂಪನಿಯು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಿದೆ

ಆರಂಭಿಕ ಆವೃತ್ತಿ 2 GB ಮತ್ತು 16 GB

ಮ್ಯಾಟ್ ಬ್ಲೂ ಮತ್ತು ಬ್ಲ್ಯಾಕ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ರೆಡ್‌ಮಿ 8ಎ ಸ್ಮಾರ್ಟ್‌ಫೋನ್‌ನಲ್ಲಿ ದೊರೆಯಲಿದ್ದು, ಈ ಬಗ್ಗೆ ಫ್ಲಿಪ್‌ಕಾರ್ಟ್ ವಿಶೇಷ ಪೇಜ್ ಮೂಲಕ ಪ್ರಚಾರ ಕೂಡ ಆರಂಭಿಸಲಾಗಿದೆ. ಈ ಮೊದಲಿನ ಸರಣಿಯ ಫೋನ್ ರೆಡ್‌ಮಿ 7ಎ ಬೆಲೆಗೆ ಹೋಲಿಸಿದರೆ, ಇದರ ಆರಂಭಿಕ ಆವೃತ್ತಿ 2 GB ಮತ್ತು 16 GB ಮಾದರಿಗೆ 6,499 ರೂ. ಹಾಗೂ, 3 GB ಮತ್ತು 32 GB ಮಾದರಿಗೆ 6,999 ರೂ. ಹಾಗೂ 4 GB ಹಾಗೂ 64 GB ಆವೃತ್ತಿಗೆ 8,999 ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

5,000 ಎಂಎಹೆಚ್ ಬ್ಯಾಟರಿ

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ರೆಡ್‌ಮಿ 7ಎ 4,000 ಎಂಎಹೆಚ್ ಬ್ಯಾಟರಿಯನ್ನು ಒಳಗೊಂಡಿದ್ದನ್ನು ನಾವು ನೋಡಬಹುದಾಗಿದ್ದು, ನೂತನ ಫೋನಿನಲ್ಲಿ ಇದಕ್ಕಿಂತಲೂ ಶಕ್ತಿಶಾಲಿಯಾದ ಬ್ಯಾಟರಿಯನ್ನು ಅಳವಡಿಸುತ್ತಿದೆ. ಶಿಯೋಮಿ ಗುರುವಾರ ರೆಡ್‌ಮಿ 8ಎ ಬಿಡುಗಡೆ ದಿನಾಂಕವನ್ನು ದೃಢಪಡಿಸಿದಾಗಲೇ ಈ ಫೋನ್ 5,000 ಎಂಎಹೆಚ್ ಬ್ಯಾಟರಿ ಹೊಂದಿರುವುದನ್ನು ಸೂಚಿಸಿದೆ. ಇದರಿಂದ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಒಂದು ಗ್ರಾಹಕರಿಗೆ 5,000 ಎಂಎಹೆಚ್ ಬ್ಯಾಟರಿ ಶಕ್ತಿಯನ್ನು ನೀಡಿದಂತಾಗುತ್ತದೆ.

 ಟಿಎಫ್‌ಟಿ ಡಿಸ್ಪ್ಲೇ

ಇನ್ನು ರೆಡ್‌ಮಿ 8ಎ ಆನ್‌ಲೈನ್ ಪಟ್ಟಿಯು ಅದರ ಯಾವುದೇ ಇತರೆ ವಿಶೇಷತೆಗಳನ್ನು ಬಹಿರಂಗಪಡಿಸುತ್ತಿಲ್ಲ. ಆದಾಗ್ಯೂ, TENAAದಲ್ಲಿ ಲಭ್ಯವಿರುವ ವಿವರಗಳು ಕೆಲವು ಹಾರ್ಡ್‌ವೇರ್ ವಿವರಗಳನ್ನು ಸೂಚಿಸುತ್ತವೆ. ಇವುಗಳಲ್ಲಿ 6.217-ಇಂಚಿನ ಎಚ್‌ಡಿ + (720x1520 ಪಿಕ್ಸೆಲ್‌ಗಳು) ಟಿಎಫ್‌ಟಿ ಡಿಸ್ಪ್ಲೇ ಮತ್ತು ಆಕ್ಟಾ-ಕೋರ್ ಎಸ್‌ಒಸಿ ಸೇರಿವೆ, ಇದು 4 ಜಿಬಿ ವರೆಗೆ RAM ಮತ್ತು 64 ಜಿಬಿ ಆನ್‌ಬೋರ್ಡ್ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿದೆ. ಇದಲ್ಲದೆ, ಫೋನ್ 156.3x75.4x9.4mm ಮತ್ತು 190 ಗ್ರಾಂ ತೂಕವಿರಬಹುದು ಎಂದು ಹೇಳಿದೆ.

ನನಗೆ ಸೂಚಿಸು

ಫೋನ್‌ನಲ್ಲಿ 12 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರುತ್ತದೆ ಎಂದು ಹೇಳಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶಿಯೋಮಿ ತನ್ನ ಮಿ.ಕಾಮ್ ವೆಬ್‌ಸೈಟ್‌ನಲ್ಲಿ ಮೀಸಲಾದ ಈವೆಂಟ್ ಪುಟವನ್ನು ರಚಿಸಿದೆ. ಈವೆಂಟ್ ಪುಟವು ಫ್ಲಿಪ್‌ಕಾರ್ಟ್ ಪಟ್ಟಿಯಲ್ಲಿ ಪ್ರದರ್ಶಿಸಲಾದ ಎಲ್ಲಾ ವಿವರಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ರೆಡ್‌ಮಿ 8ಎ ಉಡಾವಣೆಗೆ ನೋಟಿಫಿಕೇಷನ್ ಕಳುಹಿಸಲು "ನನಗೆ ಸೂಚಿಸು" ಎಂಬ ಆಯ್ಕೆಯನ್ನು ನೀಡಲಾಗಿದೆ.

Best Mobiles in India

English summary
The Redmi 8A is launching in India today at 12noon. The Redmi 8A will succeed the Redmi 7A that launched in the country earlier this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X