ಭಾರತದಲ್ಲಿ ರೆಡ್‌ಮಿ 9i ಸ್ಮಾರ್ಟ್‌ಫೋನ್‌ ಬೆಲೆ ಬಹಿರಂಗ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಹೊಸ ರೆಡ್‌ಮಿ 9I ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ. ಸದ್ಯ ಇದೀಗ ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಯಲ್ಲಿ ರೆಡ್‌ಮಿ 9I ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಶಿಯೋಮಿ ಘೋಷಣೆ ಮಾಡಿದೆ. ಅಲ್ಲದೆ ಇದು ಹೊಸ ಬಜೆಟ್ ಸ್ಮಾರ್ಟ್‌ಫೋನ್ ಆಗರಲಿದೆ ಎನ್ನುವ ಮಾಹಿತಿಯನ್ನು ಸಹ ಬಹಿರಂಗ ಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೊನ್‌ ಹೊಸ ವಿನ್ಯಾಸದ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಹೊಸ ಫೀಚರ್ಸ್‌ಗಳನ್ನ ಇದು ಒಳಗೊಂಡಿರಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ಮುಂಬರುವ ರೆಡ್‌ಮಿ 9I ಸ್ಮಾರ್ಟ್‌ಫೋನ್‌ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದೆ. ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎನ್ನಲಾಗಿದ್ದು, ಇದರ ಬೆಲೆ ಏನು ಅನ್ನೊದು ಬಹಿರಂಗವಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಕುರಿತು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದೆ. ಅಲ್ಲದೆ ರೆಡ್ಮಿ 9i ತನ್ನ ಸ್ಪೆಕ್ಸ್, ಕಲರ್ ವೆರಿಯೆಂಟ್‌ಗಳನ್ನು ಸಹ ಬಹಿರಂಗಪಡಿಸಿದೆ. ಲಬ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಬೆಲೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಸದ್ಯ ಶಿಯೋಮಿ ಸಂಸ್ಥೆ ಬಹಿರಂಗ ಪಡಿಸಿರುವ ಮಾಹಿತಿ ಪ್ರಕಾರ ರೆಡ್‌ಮಿ 9i ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯದ ಬೇಸ್ ಮಾಡೆಲ್‌ ಬೆಲೆ 7,999 ರೂ ಹೊಂದಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ವೆರಿಯೆಂಟ್‌ ಆಯ್ಕೆಯಲ್ಲಿಯೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಮಿಡ್‌ನೈಟ್ ಬ್ಲ್ಯಾಕ್, ಸೀ ಬ್ಲೂ, ಮತ್ತು ನೇಚರ್ ಗ್ರೀನ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ ಎಂದು ವರದಿ ಆಗಿದೆ.

ಶಿಯೋಮಿ

ಇನ್ನು ಶಿಯೋಮಿ ಬಿಡುಗಡೆ ಮಾಡಿರುವ ಟೀಸರ್‌ ಮಾಹಿತಿ ಪ್ರಕಾರ ರೆಡ್‌ಮಿ 9i ಸ್ಮಾರ್ಟ್‌ಫೋನ್ 6.53-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇಯು ಎಚ್‌ಡಿ + ರೆಸಲ್ಯೂಶನ್ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ ರೆಡ್‌ಮಿ 9i ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G25 SoC ಪ್ರೊಸೆಸರ್‌ ಹೊಂದಿರುವ ಸಾಧ್ಯತೆಯಿದೆ. ಜೊತೆಗೆ ಇದು ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ 4GB RAM ಸಾಮರ್ಥ್ಯದ ಆಯ್ಕೆ ಇರಲಿದೆ.

ರೆಡ್‌ಮಿ

ರೆಡ್‌ಮಿ 9i ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಸಾಧ್ಯತೆ ಇದೆ. ಕ್ಯಾಮೆರಾವು 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ರೆಡ್‌ಮಿ 9i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 4G VOLTE, ವೈ-ಫೈ, ಬ್ಲೂಟೂತ್ 5.0, GPS, USB-C, ಐಆರ್ ಬ್ಲಾಸ್ಟರ್ ಮತ್ತು 3.5mm ಆಡಿಯೊ ಜ್ಯಾಕ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ.

Best Mobiles in India

English summary
Based on the latest leak, Redmi 9i will be the most affordable phone offered by Xiaomi in the Redmi 9 series.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X