ರೆಡ್ಮಿಯಿಂದ ಎರಡು ಹೊಸ ಸ್ಮಾರ್ಟ್‌ಫೋನ್ ಲಾಂಚ್! ಹೇಗಿದೆ ಫೀಚರ್ಸ್!
ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಎ ಸರಣಿಯಲ್ಲಿ ಹೊಸ ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಾಗಿ ಗುರುತಿಸಿಕೊಂಡಿವೆ.
ಹೌದು, ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್ ಹಿಲಿಯೋ G36 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು? ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್ ಹೇಗಿದೆ?
ರೆಡ್ಮಿ A2 ಮತ್ತು ರೆಡ್ಮಿ A2+ ಎರಡು ಸ್ಮಾರ್ಟ್‌ಫೋನ್‌ಗಳು ಕೂಡ 6.52 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.
ರೆಡ್ಮಿ A2 ಮತ್ತು ರೆಡ್ಮಿ A2+ ಪ್ರೊಸೆಸರ್ ಯಾವುದು?
ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್ ಹಿಲಿಯೋ G36SoC ಪ್ರೊಸೆಸರ್ ವೇಗವನ್ನು ಹೊಂದಿವೆ. ಇದು ಆಂಡ್ರಾಯ್ಡ್ 12 (Go Edition) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಹಾಗೆಯೇ 3GB RAM ಮತ್ತು 32GB ಇಂಟರ್ ಸ್ಟೋರೇಜ್ ಬಲವನ್ನು ಒಳಗೊಂಡಿವೆ. ಈ ಸ್ಮಾರ್ಟ್‌ಫೋನ್‌ಗಳು ಮೆಮೊರಿ ಕಾರ್ಡ್ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ರೆಡ್ಮಿ A2 ಮತ್ತು ರೆಡ್ಮಿ A2+ ಕ್ಯಾಮೆರಾ ಸೆಟ್‌ಅಪ್ ಏನಿದೆ?
ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿವೆ. ಮುಖ್ಯ ಕ್ಯಾಮೆರಾ 8MP ಸೆನ್ಸಾರ್ ಹೊಂದಿದ್ದು, LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ಇದಲ್ಲದೆ ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 5MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ರೆಡ್ಮಿ A2 ಮತ್ತು ರೆಡ್ಮಿ A2+ ಬ್ಯಾಟರಿ ಬ್ಯಾಕ್‌ಅಪ್ ಏನು?
ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ. ಇದು ಮೈಕ್ರೋ-ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಲ್ಲಿ 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, 2.4GHz ವೈಫೈ, ಬ್ಲೂಟೂತ್ 5.0, GPS, ಗ್ಲೋನಾಸ್ ಮತ್ತು ಗೆಲಿಲಿಯೋವನ್ನು ಬೆಂಬಲಿಸುತ್ತವೆ.

ರೆಡ್ಮಿ A2 ಮತ್ತು ರೆಡ್ಮಿ A2+ ಬೆಲೆ ಮತ್ತು ಲಭ್ಯತೆ
ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ ಎಂದು ವರದಿಯಾಗಿದೆ.
ಇನ್ನು ಇದೇ ಸಮಯದಲ್ಲಿ ಜಾಘತಿಕ ಮಾರುಕಟ್ಟೆಯಲ್ಲಿ ರೆಡ್ಮಿ ವಾಚ್ 3 ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ 1.75 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಆಯ್ಕೆಯನ್ನು ನೀಡಲಿದೆ. ಜೊತೆಗೆ ಇದು SOS ಎಮರ್ಜೆನ್ಸಿ ಕಾಲ್ ಫೀಚರ್ಸ್ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್ 120ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ.
ರೆಡ್ಮಿ ವಾಚ್ 3 ಆರೋಗ್ಯ ಸಂಬಂಧಿತ ಫೀಚರ್ಸ್‌ಗಳಲ್ಲಿ ಅತ್ಯುತ್ತಮ ಆಯ್ಕೆಗಳನ್ನು ಹೊಂದಿದೆ. ಇದು ನಿಮ್ಮ ರಕ್ತದ ಆಮ್ಲಜನಕದ ಲೆವೆಲ್ ಮತ್ತು ಹಾರ್ಟ್‌ಬೀಟ್ ಮಾನಿಟರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಸ್ಲಿಪ್-ಟ್ರ್ಯಾಕರ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಜೊತೆಗೆ 289mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 12 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ.


Click it and Unblock the Notifications








