Home
ಸುದ್ದಿಜಾಲ

ಇಂದು ನಡೆಯಲಿದೆ ರೆಡ್ಮಿ A2 ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌! ಬೆಲೆ ಕೇವಲ 5,999ರೂ.!

ಕಳೆದ ವಾರ ಭಾರತಕ್ಕೆ ಎಂಟ್ರಿ ನೀಡಿದ್ದ ರೆಡ್ಮಿ A2 ಸರಣಿ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಸದ್ಯ ಈ ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಇಂದು (ಮೇ 23) ಭಾರತದಲ್ಲಿ ಫಸ್ಟ್‌ ಸೇಲ್‌ಗೆ ಬರಲಿವೆ. ಇನ್ನು ರೆಡ್ಮಿ ಕಂಪೆನಿ A2 ಸರಣಿಯಲ್ಲಿ ರೆಡ್ಮಿ A2 ಮತ್ತು ರೆಡ್ಮಿ A2 ಪ್ಲಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು.

ಹೌದು, ರೆಡ್ಮಿ A2 ಸರಣಿಯ ರೆಡ್ಮಿ A2 ಮತ್ತು ರೆಡ್ಮಿ A2 ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಇಂದು (ಮೇ 23) ಫಸ್ಟ್‌ ಸೇಲ್‌ ನಡೆಸಲಿವೆ. ಈ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಾಗಿದ್ದು, ಕೈ ಗೆಟಕುವ ಬೆಲೆಯಲ್ಲಿ ಲಭ್ಯವಾಗಲಿವೆ. ಹಾಗಾದ್ರೆ ಪಸ್ಟ್‌ ಸೇಲ್‌ನಲ್ಲಿ ಖರೀದಿಸೋರಿಗೆ ಏನೆಲ್ಲಾ ಆಫರ್‌ ಇದೆ? ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹೇಗಿದೆ ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂದು ನಡೆಯಲಿದೆ ರೆಡ್ಮಿ A2 ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌! ಬೆಲೆ ಕೇವಲ 5,999ರೂ

ರೆಡ್ಮಿ A2 ಸರಣಿ ಫಸ್ಟ್‌ ಸೇಲ್‌ ಬೆಲೆ ಎಷ್ಟು?

ರೆಡ್ಮಿ A2 ಸರಣಿಯಲ್ಲಿ ರೆಡ್ಮಿ A2 ಸ್ಮಾರ್ಟ್‌ಫೋನ್‌ 2GB RAM + 32 GB ಸ್ಟೋರೇಜ್‌ ಆಯ್ಕೆಯು 6,299ರೂ.ಬೆಲೆಯನ್ನು ಹೊಂದಿದೆ. ಇದರ 2GB RAM + 64GB ಸ್ಟೋರೇಜ್‌ ಆಯ್ಕೆಯು 6,799ರೂ. ಬೆಲೆಯನ್ನು ಹೊಂದಿದೆ. ಹಾಗೆಯೇ 4GB RAM + 64GB ಸ್ಟೋರೇಜ್‌ ಆಯ್ಕೆಯು 7,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ ಫಸ್ಟ್‌ ಸೇಲ್‌ನಲ್ಲಿ ವಿಶೇಷ ಆಫರ್‌ ಕೂಡ ಲಭ್ಯವಿದ್ದು ಇವುಗಳ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಇನ್ನು ರೆಡ್ಮಿ A2 ಪ್ಲಸ್‌ ಸ್ಮಾರ್ಟ್‌ಫೋನ್‌ 4GB RAM + 64 GB ಸ್ಟೋರೇಜ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಇದರ ಬೆಲೆ 8,499 ರೂ.ಆಗಿದೆ.

ರೆಡ್ಮಿ A2 ಸರಣಿ ಫಸ್ಟ್‌ ಸೇಲ್‌ ಆಫರ್‌ ಏನಿದೆ?

ರೆಡ್ಮಿ A2 ಸ್ಮಾರ್ಟ್‌ಫೋನ್‌ ಅನ್ನು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ EMI ಮೂಲಕ 2GB RAM ರೂಪಾಂತರದ ಆಯ್ಕೆ ಖರೀದಿಸಿದರೆ 300ರೂ. ರಿಯಾಯಿತಿ ಸಿಗಲಿದೆ. ಹಾಗೆಯೇ 4GB RAM ರೂಪಾಂತರವನ್ನು ಖರೀದಿಸಿದರೆ 500ರೂ. ರಿಯಾಯಿತಿ ಸಿಗಲಿದೆ. ಇದರೊಂದಿಗೆ HDFC ಮತ್ತು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ EMI ಮೂಲಕ ಖರೀದಿಸಿದರೆ 500ರೂ. ರಿಯಾಯಿತಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ಗಳು ಕ್ಲಾಸಿಕ್ ಬ್ಲ್ಯಾಕ್, ಆಕ್ವಾ ಬ್ಲೂ ಮತ್ತು ಸೀ ಗ್ರೀನ್ ಬಣ್ಣದ ಆಯ್ಕೆಯಲ್ಲಿ Mi ಸ್ಟೋರ್ ಅಪ್ಲಿಕೇಶನ್, ಮಿ.ಕಾಮ್‌, ಅಮೆಜಾನ್‌ ಇಂಡಿಯಾ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.

ಇಂದು ನಡೆಯಲಿದೆ ರೆಡ್ಮಿ A2 ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌! ಬೆಲೆ ಕೇವಲ 5,999ರೂ

ರೆಡ್ಮಿ A2 ಸರಣಿ ವಿಶೇಷತೆ ಏನು?

ರೆಡ್ಮಿ A2 ಸರಣಿ ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ಫೀಚರ್ಸ್‌ಗಳನ್ನು ಹೊಂದಿವೆ. ಅದರಂತೆ ರೆಡ್ಮಿ A2 ಸ್ಮಾರ್ಟ್‌ಫೋನ್‌ 6.52 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಮತ್ತು 120Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 400 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡುತ್ತದೆ.

ಇದು ಮೀಡಿಯಾಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇಂದು ನಡೆಯಲಿದೆ ರೆಡ್ಮಿ A2 ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌! ಬೆಲೆ ಕೇವಲ 5,999ರೂ

ಇನ್ನು ಸ್ಮಾರ್ಟ್‌ಫೋನ್‌ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್, ಎಫ್‌ಎಂ ರೇಡಿಯೋ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ. ಇದರೊಂದಿಗೆ ರೆಡ್ಮಿ A2 ಪ್ಲಸ್‌ ಸ್ಮಾರ್ಟ್‌ಫೋನ್‌ ಹೆಚ್ಚುವರಿಯಾಗಿ ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಪಡೆದುಕೊಂಡಿದೆ.

Best Mobiles in India

English summary
Redmi A2 series first sale in India today: Sale offers and specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+