Home
ಸುದ್ದಿಜಾಲ

ಭಾರತದಲ್ಲಿ ರೆಡ್ಮಿ A2 ಸರಣಿ ಬಿಡುಗಡೆ: ನೀವು ತಿಳಿದುಕೊಳ್ಳಬೇಕಾದ ವಿವರ ಇಲ್ಲಿದೆ!

ಶಿಯೋಮಿ ಇಂದು ಭಾರತದಲ್ಲಿ ದೇಶ್‌ಕಾ ಸ್ಮಾರ್ಟ್‌ಫೋನ್‌ ರೆಡ್ಮಿ A2 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಕಳೆದ ವರ್ಷ ಬಿಡುಗಡೆಯಾದ ರೆಡ್‌ಮಿ A1 ಸರಣಿಯ ಉತ್ತರಾಧಿಕಾರಿಯಾಗಿದೆ. ಇನ್ನು ಶಿಯೋಮಿ ರೆಡ್ಮಿ A2 ಸರಣಿಯಲ್ಲಿ ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ರೆಡ್ಮಿ A2 ಸರಣಿಯ ಆರಂಭಿಕ ಬೆಲೆ 5999ರೂ. ರಿಂದ ಪ್ರಾರಂಭವಾಗುತ್ತದೆ. ಇದು ಮೇ 23, 2023 ರಿಂದ ಪ್ರತ್ಯೇಕವಾಗಿ ಅಮೆಜಾನ್‌,ಮಿ.ಕಾಮ್‌, ಮೀ ಹೋಮ್ಸ್‌ ಮತ್ತು ಆದ್ಯತೆಯ ಪಾಲುದಾರ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಭಾರತದಲ್ಲಿ ರೆಡ್ಮಿ A2 ಸರಣಿ ಬಿಡುಗಡೆ: ನೀವು ತಿಳಿದುಕೊಳ್ಳಬೇಕಾದ ವಿವರ ಇಲ್ಲಿದೆ!

ರೆಡ್ಮಿ A2 ಸರಣಿಯು ಆಕ್ಟಾ-ಕೋರ್ ಹಿಲಿಯೋ G36 ಪ್ರೊಸೆಸರ್‌ ಮತ್ತು 6.52-ಇಂಚಿನ HD+ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದ್ದು, ತಡೆರಹಿತ ಬ್ರೌಸಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗಾಗಿ ಅಗತ್ಯವಿರುವ ಎಲ್ಲಾ ಶಕ್ತಿಯನ್ನು ನೀಡುತ್ತದೆ. ರೆಡ್ಮಿ A2 ಸರಣಿಯು 5000mAh ಸಾಮರ್ಥ್ಯದ ಬೃಹತ್‌ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ 10W ಇನ್-ಬಾಕ್ಸ್ ಚಾರ್ಜರ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಗಂಟೆಗಳವರೆಗೆ ರನ್‌ ಆಗುವಂತೆ ಮಾಡಲಿದೆ. ಈ ಫೋನ್‌ಗಳು ಹಿಂಭಾಗದಲ್ಲಿ 8MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ.

ರೆಡ್ಮಿ A2 ಸರಣಿಯು ಇತ್ತೀಚಿನ ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಕ್ಲೀನರ್ ಮತ್ತು ಮೃದುವಾದ ಸಾಫ್ಟ್‌ವೇರ್ ಅನುಭವವನ್ನು ನೀಡುತ್ತದೆ. ಈ ಫೋನ್ 7GB ವರೆಗಿನ ಹೆಚ್ಚುವರಿ ವರ್ಚುವಲ್ RAM ಬೆಂಬಲಿಸಲಿದೆ. ಜೊತೆಗೆ ವೇಗವಾದ ಪ್ರಕ್ರಿಯೆ ಮತ್ತು ಉತ್ತಮ ಬಹುಕಾರ್ಯಕವನ್ನು ಅನುಮತಿಸುತ್ತದೆ.

ಇನ್ನು ವಿಶಿಷ್ಟ ಮತ್ತು ನಯವಾದ ಚರ್ಮದ ವಿನ್ಯಾಸದೊಂದಿಗೆ ಫಿಂಗರ್‌ಪ್ರಿಂಟ್‌ ಸ್ಮಡ್ಜ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ತಮ್ಮ ಬೆರಗುಗೊಳಿಸುವ ವಿನ್ಯಾಸ, ಹೆಚ್ಚುವರಿ ಭದ್ರತೆ ಮತ್ತು ಪವರ್-ಪ್ಯಾಕ್ಡ್ ಕಾರ್ಯಕ್ಷಮತೆಯೊಂದಿಗೆ ಹೊಸ ಅನುಭವವನ್ನು ನೀಡಲಿವೆ. ಈ ಸ್ಮಾರ್ಟ್‌ಫೋನ್‌ಗಳು ಸೀ ಗ್ರೀನ್, ಆಕ್ವಾ ಬ್ಲೂ, ಕ್ಲಾಸಿಕ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಇದಲ್ಲದೆ ಹೆಚ್ಚುವರಿಯಾಗಿ, ರೆಡ್ಮಿ A2+ ಸೂಪರ್ ತ್ವರಿತ ಮತ್ತು ಸುರಕ್ಷಿತ ಅನ್‌ಲಾಕಿಂಗ್‌ಗಾಗಿ ಸುಧಾರಿತ ಮತ್ತು ಸ್ಪಂದಿಸುವ ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ರೆಡ್ಮಿ A2 ಸರಣಿ ಮೂಲಕ, ನೀವು ಕೇವಲ ಉತ್ತಮ ಡಿವೈಸ್‌ ಮಾತ್ರವಲ್ಲ 2 ವರ್ಷದ ವಾರಂಟಿಯೊಂದಿಗೆ "ರೆಡ್ಮಿ ಕಾ ಡಬಲ್‌ ಭರೋಸಾ" ದ ಭರವಸೆಯನ್ನು ಪಡೆಯುತ್ತೀರಿ.

Best Mobiles in India

English summary
Redmi A2 series launched in India: Everything you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+