Home
ಸುದ್ದಿಜಾಲ

ಶೀಘ್ರ Redmi A3 Pro ಬಿಡುಗಡೆ; 50MP ಕ್ಯಾಮೆರಾ, 5160mAh ಬ್ಯಾಟರಿ.. ಅಗ್ಗದ ಬೆಲೆ!

ರೆಡ್ಮಿ (Redmi) ಕಂಪನಿಯ ಹೊಸ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಕಂಪನಿಯು, ಭಾರತದಲ್ಲಿ Redmi A3X ಮತ್ತು Redmi A3 ಅನ್ನು ಲಾಂಚ್ ಮಾಡಿದೆ. ಇದರ ಬೆಲೆ ಕ್ರಮವಾಗಿ 6,999 ರೂ. ಮತ್ತು 8,999 ರೂ.ಗೆ ಆಗಿದೆ. ಈ ಸರಣಿಯ ಮೂರನೇ ಮೊಬೈಲ್ ರೆಡ್ಮಿ A3 ಪ್ರೊ (Redmi A3 Pro) ಕೂಡ ಜಾಗತಿಕ ಮಾರುಕಟ್ಟೆಗೆ ಬರಲಿದೆ. ಹಾಗಿದ್ರೆ, ಮುಂಬರುವ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ರೆಡ್ಮಿ A3 ಪ್ರೊ (Redmi A3 Pro) ಕೀನ್ಯಾದ ಶಾಪಿಂಗ್ ಸೈಟ್‌ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಅಗ್ಗದ ರೆಡ್ಮಿ ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು ಮೀಡಿಯಾಟೆಕ್ ಹೆಲಿಯೊ G81 ಅಲ್ಟ್ರಾ ಪ್ರೊಸೆಸರ್‌ ಹೊಂದಿರಲಿದೆ. 4GB RAM + 128GB ಸ್ಟೋರೇಜ್‌ ಆಯ್ಕೆಯೊಂದಿಗೆ ಬರಲಿದೆ. ಇದರೊಂದಿಗೆ, 4GB ವಿಸ್ತರಿಸಬಹುದಾದ RAM, 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಮತ್ತು 5,160mAh ಸಾಮರ್ಥ್ಯ ಬ್ಯಾಟರಿ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಶೀಘ್ರ Redmi A3 Pro ಲಾಂಚ್; 50MP ಕ್ಯಾಮೆರಾ, 5160mAh ಬ್ಯಾಟರಿ.. ಅಗ್ಗದ ಬೆಲೆ

ರೆಡ್ಮಿ A3 ಪ್ರೊ ಬೆಲೆ ಎಷ್ಟು?

ರೆಡ್ಮಿ A3 ಪ್ರೊ ಮೊಬೈಲ್‌ ಅನ್ನು 10 ಸಾವಿರಕ್ಕಿಂತ ಕಡಿಮೆ ಬಜೆಟ್‌ನಲ್ಲಿ ತರಲಾಗಿದೆ. ಕೀನ್ಯಾದಲ್ಲಿ ಈ ಫೋನಿನ ಬೆಲೆ ಸುಮಾರು 9,100 ರೂ. (KSh 13,999) ಆಗಿದೆ. ಈ ರೆಡ್ಮಿ ಮೊಬೈಲ್ ಭಾರತದಲ್ಲಿ 9,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದನ್ನು ರೆಡ್ಮಿ K3 ಫೋನಿಗಿಂತ 500 ರೂ. ಹೆಚ್ಚು ಬೆಲೆಗೆ ಮಾರಾಟ ಮಾಡಬಹುದು.

ರೆಡ್ಮಿ A3 ಪ್ರೊ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ A3 ಪ್ರೊ ಸ್ಮಾರ್ಟ್‌ಫೋನ್ 6.88 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದು 'U' ಆಕಾರದ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಆಗಿದೆ. ಇದನ್ನು ಎಲ್‌ಸಿಡಿ (LCD) ಪ್ಯಾನೆಲ್‌ನಲ್ಲಿ ಮಾಡಲಾಗಿದೆ. ಈ ಫೋನಿನ ಡಿಸ್ಪ್ಲೇಯು 90Hz ರಿಫ್ರೆಶ್ ದರವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವರದಿಯ ಪ್ರಕಾರ, ರೆಡ್ಮಿ A3 ಪ್ರೊ ಮೊಬೈಲ್ ಆಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೊ G81 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 12 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾದ ಚಿಪ್‌ಸೆಟ್ ಆಗಿದೆ.

ಸ್ಟೋರೇಜ್‌ ಆಯ್ಕೆ

ವೆಬ್‌ಸೈಟ್‌ನಲ್ಲಿ ರೆಡ್ಮಿ A3 ಪ್ರೊ ಸ್ಮಾರ್ಟ್‌ಫೋನ್ ಅನ್ನು 4GB RAM ನೊಂದಿಗೆ ಪಟ್ಟಿಮಾಡಲಾಗಿದೆ. ಈ ಫೋನ್ 4GB ವಿಸ್ತರಿಸಬಹುದಾದ RAM ತಂತ್ರಜ್ಞಾನವನ್ನು ಹೊಂದಿದೆ. ಇದು ಭೌತಿಕ RAM ಜೊತೆಗೆ 8GB RAM (4+4) ಶಕ್ತಿಯನ್ನು ನೀಡುತ್ತದೆ. ಈ ಅಗ್ಗದ ರೆಡ್ಮಿ ಸ್ಮಾರ್ಟ್‌ಫೋನ್ 128GB ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್

ರೆಡ್ಮಿ A3 ಪ್ರೊ ಮೊಬೈಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಹೊಂದಿದೆ. ಇದು ಈ ಸರಣಿಯ Redmi A3 ಮತ್ತು Redmi A3X ಫೊನಿನ ವೃತ್ತಾಕಾರದ ವಿನ್ಯಾಸವನ್ನು ಹೋಲುತ್ತದೆ. ಇದರಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಇದು ಸೆಕೆಂಡರಿ ಎಐ ಲೆನ್ಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ, ಸೆಲ್ಫಿ ಕ್ಯಾಮೆರಾದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ಬ್ಯಾಟರಿ ಬ್ಯಾಕಪ್

ರೆಡ್ಮಿ A3 ಪ್ರೊ ಸ್ಮಾರ್ಟ್‌ಫೋನ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್‌ನಲ್ಲಿ ಕನಿಷ್ಠ 15W ವೇಗದ ಚಾರ್ಜಿಂಗ್ ಸೌಲಭ್ಯ ಅನ್ನು ನಿರೀಕ್ಷಿಸಬಹುದು.

ಇತರೆ ವೈಶಿಷ್ಟ್ಯಗಳು

ರೆಡ್ಮಿ A3 ಪ್ರೊ ಮೊಬೈಲ್ ಭದ್ರತೆ ಮತ್ತು ಫೋನ್ ಅನ್‌ಲಾಕಿಂಗ್‌ಗಾಗಿ ಫೇಸ್ ಐಡಿ ವೈಶಿಷ್ಟ್ಯವನ್ನು ಹೊಂದಿದೆ. ಸೈಡ್ ಫ್ರೇಮ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಎಂಬೆಡೆಡ್ ಪವರ್ ಬಟನ್ ಅನ್ನು ಹೊಂದಿದೆ. ಈ ಫೋನ್ ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಜೊತೆಗೆ ಸ್ಪೀಕರ್ ಅನ್ನು ಹೊಂದಿರಲಿದೆ.

Best Mobiles in India

English summary
Redmi A3 Pro smartphones india launch soon: Expected price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+