Home
ಸುದ್ದಿಜಾಲ

ಕೇವಲ 8,499 ರೂ.! ಇಂದು Redmi A4 5G ಫೋನ್ ಬಿಡುಗಡೆ; ವಿಶೇಷತೆಗಳೇನು?

ರೆಡ್ಮಿ ಮೊಬೈಲ್ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ. ಶಿಯೋಮಿ ಇಂದು (ನವೆಂಬರ್ 20) ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದು ರೆಡ್ಮಿ A4 5G (Redmi A4 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಫೋನಿನ ಬೆಲೆ 10,000 ರೂ.ಗಿಂತ ಕಡಿಮೆ ಇರಲಿದೆ. ವಿಶೇಷವೆಂದರೆ, ಈ ಮೊಬೈಲ್ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಪ್ರೊಸೆಸರ್‌ ಹೊಂದಿರುವ ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ ಇದಾಗಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಇಂದು ಮಧ್ಯಾಹ್ನ 12 ಗಂಟೆಗೆ ರೆಡ್ಮಿ A4 5G ಫೋನನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇದು ರೆಡ್ಮಿ A3 5G (Redmi A3 5G) ಮೊಬೈಲ್‌ನ ಉತ್ತರಾಧಿಕಾರಿಯಾಗಿ ಬರಲಿದೆ. ಈಗಾಗಲೇ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈವೆಂಟ್ ಪೇಜ್‌ ಲೈವ್ ಆಗಿದೆ. ಈ ರೆಡ್ಮಿ ಮೊಬೈಲ್ Poco M6 5G, itel P55 5G, Moto G04s 5G ಮತ್ತು IQOO Z9 Lite 5G ಫೋನ್‌ಗಳಿಗೆ ಪೈಪೋಟಿ ನೀಡಲಿದೆ.

ಇಂದು Redmi A4 5G ಲಾಂಚ್; ಕೇವಲ 8,499 ರೂ.! ವಿಶೇಷತೆಗಳೇನು?

ರೆಡ್ಮಿ A4 5G ಫೋನಿನ ಬೆಲೆ ಎಷ್ಟು?

ರೆಡ್ಮಿ A4 5G ಅಗ್ಗದ ಫೋನ್ ಆಗಿರುತ್ತದೆ. ಈ ಫೋನನ್ನು ಕೇವಲ 4GB RAMನೊಂದಿಗೆ ಬಿಡುಗಡೆ ಮಾಡಲಾಗುವುದು. ಇದು 4GB RAM + 64GB, 4GB RAM + 128GB ಸ್ಟೋರೇಜ್ ಒಳಗೊಂಡಿರಲಿದೆ. ವರದಿಯ ಪ್ರಕಾರ, ಫೋನನ್ನು 8,499 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗುತ್ತದೆ. ಇದು ರಿಯಾಯಿತಿಯನ್ನು ಒಳಗೊಂಡಿರುತ್ತದೆ. ಈ ರೆಡ್ಮಿ A4 5G ಫೋನ್ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ ಮೂಲಕ ಮಾರಾಟವಾಗಲಿದೆ. ನೀವು, ನವೆಂಬರ್ 27 ರಿಂದ ಖರೀದಿಸಬಹುದು.

ರೆಡ್ಮಿ A4 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ A4 5G ಮೊಬೈಲ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ ಎಂದು ಕಂಪನಿಯು ತಿಳಿಸಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಡಿಸ್ಪ್ಲೇಯನ್ನು ವಾಟರ್‌ಡ್ರಾಪ್ ನಾಚ್ ಶೈಲಿಯಲ್ಲಿ ತಯಾರಿಸಲಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರೆಡ್ಮಿ A4 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ವಿಶೇಷವೆಂದರೆ, ಯಾವುದೇ ಕಂಪನಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಪ್ರೊಸೆಸರ್ ಅಳವಡಿಸಿಲ್ಲ. ಈ ಪ್ರೊಸೆಸರ್ ಅನ್ನು 4ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ.

ಸ್ಟೋರೇಜ್ ಆಯ್ಕೆ

ನೂತನ ರೆಡ್ಮಿ A4 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. 4GB RAM + 64GB ಸ್ಟೋರೇಜ್ ವೇರಿಯಂಟ್ ಮತ್ತು 128GB ಸ್ಟೋರೇಜ್ ಆಯ್ಕೆ ಇರಲಿದೆ. ಆದರೆ, ಈ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ತಿಳಿಸಿಲ್ಲ.

ಕ್ಯಾಮೆರಾ ಸೆಟಪ್

ಹೊಸ ರೆಡ್ಮಿ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದನ್ನು ಫೋನಿನ ಹಿಂಭಾಗದ ಫಲಕದಲ್ಲಿ ದೊಡ್ಡ ವೃತ್ತದಲ್ಲಿ ಅಳವಡಿಸಲಾಗಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಇದರೊಂದಿಗೆ ದ್ವಿತೀಯ ಎಐ ಲೆನ್ಸ್ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಅಗ್ಗದ ರೆಡ್ಮಿ ಸ್ಮಾರ್ಟ್‌ಫೋನ್ 5160mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ಶಿಯೋಮಿ ಖಚಿತಪಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಕನಿಷ್ಠ 33W ವೇಗದ ಚಾರ್ಜಿಂಗ್ (18W ವೈರ್ಡ್ ಚಾರ್ಜಿಂಗ್) ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ A4 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು ಡ್ಯುಯಲ್ ಸಿಮ್, ವೈ-ಫೈ, ಜಿಪಿಎಸ್, ಬ್ಲೂಟೂತ್ 5.10, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿರಲಿದೆ.

Best Mobiles in India

English summary
Redmi A4 5G to launch in India Today: know Price, Specs and more. ರೆಡ್ಮಿ A4 5G ಭಾರತದಲ್ಲಿ ಇಂದು ಬಿಡುಗಡೆಯಾಗಲಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+