ಅಬ್ಬರಿಸಲು ಬರಲಿದೆ Redmi A5 ಫೋನ್; 5200mAh ಬ್ಯಾಟರಿ.. 6.88 ಇಂಚಿನ ಡಿಸ್ಪ್ಲೇ.. 7000ಕ್ಕಿಂತ ಅಗ್ಗದ ಬೆಲೆ!
ರೆಡ್ಮಿ ಕಂಪನಿಯು ಇಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಮಾಡಲಿದೆ. ಇದು ರೆಡ್ಮಿ A5 (Redmi A5) ಎಂಬ ಹೆಸರಿನೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಶಿಯೋಮಿ (Xiaomi) ಕಂಪನಿಯು ತನ್ನ ಅಭಿಮಾನಿಗಳಿಗಾಗಿ ಅಗ್ಗದ ಬಜೆಟ್‌ನಲ್ಲಿ ರೆಡ್ಮಿ A5 ಫೋನನ್ನು ಪರಿಚಯಿಸುತ್ತಿದೆ. ಈ ಫೋನಿನ ಮೈಕ್ರೋ ಸೈಟ್ ಕಂಪನಿಯ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಬನ್ನಿ, ಈ ಸೊಗಸಾದ ರೆಡ್ಮಿ A5 ಫೋನಿನ ನಿರೀಕ್ಷಿತ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ರೆಡ್ಮಿ A5 ಸ್ಮಾರ್ಟ್‌ಫೋನ್ ಯುನಿಸಾಕ್ T7250 ಪ್ರೊಸೆಸರ್ ಅನ್ನು ಹೊಂದಿದೆ. ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 4GB RAM + 128GB ಸ್ಟೋರೇಜ್, 5200mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಿಶೇಷವೆಂದರೆ, ಈಗಾಗಲೇ ಈ ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ.

ರೆಡ್ಮಿ A5 ಬೆಲೆ (ನಿರೀಕ್ಷಿತ)
ಶೀಯೋಮಿ ಇಂದು (ಏಪ್ರಿಲ್ 15) ರೆಡ್ಮಿ A5 ಅನ್ನು ಅಧಿಕೃತವಾಗಿ ಭಾರತದಲ್ಲಿ ಲಾಂಚ್ ಮಾಡಲಿದೆ. ಇದು ಸಾಫ್ಟ್ ಲಾಂಚ್ ಆಗಿದ್ದು, ಮಧ್ಯಾಹ್ನ 12 ಗಂಟೆಗೆ ಕಂಪನಿಯ ವೆಬ್‌ಸೈಟ್ ಮೂಲಕ ಈ ಫೋನನ್ನು ಅನಾವರಣಗೊಳಿಸಲಾಗುವುದು. ಈ ಮೂಲಕ ನೂತನ ರೆಡ್ಮಿ A5 ಫೋನಿನ ಬೆಲೆ ಮತ್ತು ಮಾರಾಟದ ವಿವರಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗುತ್ತದೆ. ಈ ರೆಡ್ಮಿ A5 ಸ್ಮಾರ್ಟ್‌ಫೋನ್ ಜೈಸಲ್ಮೇರ್ ಗೋಲ್ಡ್, ಪಾಂಡಿಚೇರಿ ಬ್ಲೂ ಮತ್ತು ಜಸ್ಟ್ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ವರದಿಯ ಪ್ರಕಾರ, ಈ ಅಗ್ಗದ ರೆಡ್‌ಮಿ ಫೋನಿನ ಬೆಲೆ ಸುಮಾರು 7 ಸಾವಿರ ರೂ. ಆಗಿರಲಿದೆ.
ರೆಡ್ಮಿ A5 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ A5 ಸ್ಮಾರ್ಟ್‌ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು 6.88 ಇಂಚಿನ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 1640 x 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಮತ್ತು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ರೆಡ್ಮಿ A5 ಫೋನ್ ಯುನಿಸಾಕ್ T7250 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 12 ನ್ಯಾನೋಮೀಟರ್ (ಆರ್ಕಿಟೆಕ್ಚರ್‌ನಲ್ಲಿ) ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಇದರಲ್ಲಿ 1.6GHz ಗಡಿಯಾರದ ವೇಗದೊಂದಿಗೆ ಆರು ಕಾರ್ಟೆಕ್ಸ್-A55 ಕೋರ್‌ಗಳು ಮತ್ತು 1.8GHz ಗಡಿಯಾರದ ವೇಗದೊಂದಿಗೆ ಎರಡು ಕಾರ್ಟೆಕ್ಸ್-A75 ಕೋರ್‌ಗಳು ಇವೆ.

ಕ್ಯಾಮೆರಾ ಸೆಟಪ್
ರೆಡ್ಮಿ A5 ಮೊಬೈಲ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ ಎಲ್‌ಇಡಿ ಫ್ಲ್ಯಾಷ್ ಜೊತೆಗೆ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರೆಡ್ಮಿ A5 ಫೋನ್ 5,200mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಈ ಮೊಬೈಲ್ 18W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಹಾಗೆಯೇ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.2, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುತ್ತದೆ.


Click it and Unblock the Notifications








