ರೆಡ್‌ಮಿ ಏರ್‌ಡಾಟ್ಸ್ 3 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಇಯರ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮ ಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದರಲ್ಲಿ ರೆಡ್‌ಮಿ ಕಂಪೆನಿ ಕೂಡ ಒಂದಾಗಿದ್ದು, ತನ್ನ ವೈವಿಧ್ಯಮಯ ಇಯರ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ರೆಡ್ಮಿ ಏರ್‌ಡಾಟ್ಸ್ 3 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ಗಳು ಕಾಂಡೇತರ ವಿನ್ಯಾಸವನ್ನು ಹೊಂದಿದ್ದು, ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆ ತನ್ನ ರೆಡ್ಮಿ ಏರ್ ಡಾಟ್ಸ್ 3 ಅನ್ನು ಚೀನಾದಲ್ಲಿ ಲಾಂಚ್‌ ಮಾಡಿದೆ. ಈ ಹೊಸ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ವಾಟರ್‌ ರೆಸಿಸ್ಟೆನ್ಸ್‌ ಮತ್ತು ಟಚ್‌ ಕಂಟ್ರೋಲ್‌ಗಳೊಂದಿಗೆ ಬರುತ್ತವೆ. ಅಲ್ಲದೆ ಈ ಇಯರ್‌ಫೋನ್‌ ಏಳು ಗಂಟೆಗಳ ತಡೆರಹಿತ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡಬಲ್ಲದು ಎಂದು ಕಂಪೆನಿ ಹೇಳಿದೆ. ಜೊತೆಗೆ ಇದು ಕಾಂಪ್ಯಾಕ್ಟ್ ಚಾರ್ಜಿಂಗ್ ಕೇಸ್‌ ಮುಂಭಾಗದಲ್ಲಿ ಎಲ್ಇಡಿ ಸೂಚಕವನ್ನು ಹೊಂದಿದ್ದು ಅದು ಬ್ಯಾಟರಿ ಸ್ಥಿತಿಯನ್ನು ಸೂಚಿಸುತ್ತದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್‌ಮಿ ಏರ್‌ಡಾಟ್ಸ್ 3

ರೆಡ್‌ಮಿ ಏರ್‌ಡಾಟ್ಸ್ 3 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಕ್ವಾಲ್ಕಾಮ್ ಕ್ಯೂಸಿಸಿ 3040 ಚಿಪ್‌ಸೆಟ್‌ ನಿಂದ ನಿಯಂತ್ರಿಸಲ್ಪಡುತ್ತವೆ. ಇನ್ನು ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದೆ. ಗೇಮ್‌ಗಳನ್ನು ಆಡುವಾಗ ಸುಧಾರಿತ ಧ್ವನಿ ಮತ್ತು ಕಡಿಮೆ ಸುಪ್ತತೆಗಾಗಿ ಆಪ್ಟಿಎಕ್ಸ್ ಅಡಾಪ್ಟಿವ್ ಕೋಡೆಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ವೇರಿಂಗ್‌ ಡಿಟೆಕ್ಷನ್‌, ಸ್ಮಾರ್ಟ್ ಕನೆಕ್ಟ್‌ ಮತ್ತು ಟಚ್‌ ಕಂಟ್ರೋಲ್‌ ಅನ್ನು ಹೊಂದಿವೆ. ರೆಡ್‌ಮಿ ಏರ್‌ಡಾಟ್ಸ್ 3 ನಲ್ಲಿ ನೀವು ಕರೆಗಳಿಗೆ ಉತ್ತರಿಸಬಹುದು ಅಥವಾ ತಿರಸ್ಕರಿಸಬಹುದು, ಮ್ಯೂಸಿಕ್‌ ಅನ್ನು ನಿಯಂತ್ರಿಸಬಹುದು ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಕ್ರಿಯಗೊಳಿಸಬಹುದಾಗಿದೆ.

ರೆಡ್‌ಮಿ

ಇನ್ನು ಬ್ಯಾಟರಿ ಅವಧಿಗೆ ಸಂಬಂಧಿಸಿದಂತೆ, ರೆಡ್‌ಮಿ ಏರ್‌ಡಾಟ್ಸ್ 3 ಇಯರ್‌ಬಡ್‌ಗಳಲ್ಲಿ 43mAh ಬ್ಯಾಟರಿ ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ 600mAh ಬ್ಯಾಟರಿಯನ್ನು ಹೊಂದಿದೆ. ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ ಏಳು ಗಂಟೆಗಳ ಪ್ಲೇಟೈಮ್ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 30 ಗಂಟೆಗಳ ಸಮಯವನ್ನು ನೀಡಬಲ್ಲವು ಎಂದು ಶಿಯೋಮಿ ಹೇಳಿಕೊಂಡಿದೆ. ಇಯರ್‌ಬಡ್‌ಗಳು ಸಂಪೂರ್ಣವಾಗಿ ಚಾರ್ಜ್ ಮಾಡಲು 1.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಚಾರ್ಜಿಂಗ್‌ ಕೇಸ್‌ ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬಳಸುತ್ತದೆ.

ರೆಡ್‌ಮಿ ಏರ್‌ಡಾಟ್ಸ್ 3

ರೆಡ್‌ಮಿ ಏರ್‌ಡಾಟ್ಸ್ 3 CNY 199 (ಸುಮಾರು 2,300 ರೂ.)ಬೆಲೆಯನ್ನು ಹೊಂದಿದೆ. ಇದು ಮ್ಯಾಗ್ನೋಲಿಯಾ ವೈಟ್, ಪಿಂಕ್ ಮತ್ತು ಸ್ಟಾರಿ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಪ್ರಸ್ತುತ ಪೂರ್ವ ಬುಕಿಂಗ್‌ಗೆ ಸಿದ್ಧವಾಗಿವೆ. ಇನ್ನು ಈ ಇಯರ್‌ಫೋನ್‌ಗಳು ಇದೇ ಮಾರ್ಚ್ 4 ರಿಂದ ಚೀನಾದಲ್ಲಿ ಖರೀದಿಗೆ ಲಭ್ಯವಿರುತ್ತವೆ. ಸದ್ಯ ರೆಡ್‌ಮಿ ಏರ್‌ಡಾಟ್ಸ್ 3 ಗಾಗಿ ಅಂತರರಾಷ್ಟ್ರೀಯ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
Redmi AirDots 3 TWS Earphones With aptX Adaptive Support Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X