ರೆಡ್ಮಿ ಏರ್‌ಡಾಟ್ಸ್ S ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಪ್ರತಿನಿತ್ಯವೂ ಹೊಸ ಮಾದರಿಯ ಪ್ರಾಡಕ್ಟ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾದಷ್ಟು ಇಯರ್‌ಫೋನ್‌ಗಳ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಲೇ ಇದೆ. ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಫೋನ್‌‌ ನೀಡುವ ಕಾಲ ಮುಗಿದು ಹೋಗಿದೆ. ಹೀಗೆನಿದ್ದರೂ ತಮಗಿಷ್ಟವಾದ ಇಯರ್‌ಫೊನ್‌ಗಳನ್ನ ಖರೀದಿಸುವ ಕಾಲ. ಈಗಾಗಲೇ ಹಲವು ಕಂಪೆನಿಗಳ ಹೊಸ ಮಾದರಿಯ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಲಭ್ಯವಿವೆ. ಇವುಗಳಲ್ಲಿ ರೆಡ್ಮಿ ಕಂಪೆನಿಯ ಇಯರ್‌ಫೋನ್‌ಗಳು ಕೂಡ ಲಬ್ಯವಿವೆ. ಸದ್ಯ ಇದೀಗ ರೆಡ್ಮಿ ಕಂಪೆನಿ ತನ್ನ ಹೊಸ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಶಿಯೋಮಿಯ ಸಬ್‌ಬ್ರಾಂಡ್‌ ರೆಡ್ಮಿ ಕಂಪೆನಿ ತನ್ನ ಹೊಸ ಏರ್‌ಡಾಟ್ಸ್‌S ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ ಮಾರುಕಟ್ಟೆಯಲ್ಲಿ ಲಬ್ಯವಿರುವ ಹಗುರವಾದ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಇವು ಹೊಸ ಮಾದರಿಯ ಇಯರ್‌ಫೋನ್‌ ಆಗಿದ್ದು, ಗ್ರಾಹಕರ ಮನ ಸೆಳೆಯುವ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಇನ್ನು ಈ ಇಯರ್‌ಫೋನ್‌ ಕೇವಲ ತಲಾ 4.1 ಗ್ರಾಂ ಮಾತ್ರ ತೂಕವನ್ನು ಹೊಂದಿವೆ ಎಂದು ಹೇಳಲಾಗಿದೆ. ಇನ್ನು ಈ ಇಯರ್‌ಫೋನ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಬನ್ನಿರಿ.

ಮಾದರಿಯ

ಹೊಸ ಮಾದರಿಯ ವಿನ್ಯಾಸವನ್ನ ಹೊಂದಿರುವ ಈ ಇಯರ್‌ಫೋನ್‌ ಹೊಸ ತಲೆಮಾರಿನ ಯುವಜನತೆಯನ್ನ ಗಮನದಲಿಟ್ಟುಕೊಂಡು ರೂಪಿಸಲಾಗಿದೆ. ಸದ್ಯ ಕೊರೊನಾ ವೈರಸ್‌ ಭೀತಿಯಲ್ಲಿ ಜಗತ್ತೇ ತಲ್ಲಣಿಸುತ್ತಿದೆ. ಆದರೆ ಚೀನಾದಲ್ಲಿ ನಿದಾನವಾಗಿ ಟೆಕ್‌ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು. ರೆಡ್ಮಿ ಇಯರ್‌ಫೊನ್‌ ಬಿಡುಗಡೆ ಆಗಿರೋದು ಅಲ್ಲಿನ ಮಾರುಕಟ್ಟೆಯ ವಾಸ್ತವಿಕತೆಯನ್ನ ತೆರೆದಿಟ್ಟಿದೆ. ಇನ್ನು ಈ ಇಯರ್‌ಫೋನ್‌ಗಳು ಪ್ರತಿ ಚಾರ್ಜ್‌ಗೆ ನಾಲ್ಕು ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿವೆ. ಅಲ್ಲದೆ ಚಾರ್ಜಿಂಗ್ ಪ್ರಕರಣದಿಂದ ಒದಗಿಸಲಾದ ಹೆಚ್ಚುವರಿ ಶುಲ್ಕಗಳೊಂದಿಗೆ ಸಂಯೋಜಿಸಿದಾಗ, 12 ಗಂಟೆಗಳವರೆಗೆ ಬಳಕೆಯನ್ನು ನಿರೀಕ್ಷಿಸಬಹುದಾಗಿದೆ.

ಇಯರ್‌ಫೋನ್‌ನಲ್ಲಿ

ಇನ್ನು ಈ ಇಯರ್‌ಫೋನ್‌ನಲ್ಲಿ ಲೇಟೆನ್ಸಿ ಮೋಡ್‌ ಅನ್ನು ನೀಡಲಾಗಿದೆ. ಇದರಿಂದ ಗೇಮಿಂಗ್ ಬಳಕೆದಾರರು ರೆಡ್ಮಿ ಏರ್‌ಡಾಟ್ಸ್ ಎಸ್‌ನಲ್ಲಿ ಕಡಿಮೆ-ಲೇಟೆನ್ಸಿ ಮೋಡ್‌ನಿಂದ ಉತ್ತಮ ಪ್ರಯೋಜನವನ್ನ ಪಡೆದುಕೊಳ್ಳಲಿದ್ದಾರೆ. ಏಕೆಂದರೆ ಇದು ಕಡಿಮೆ ವಿಳಂಬದೊಂದಿಗೆ ಸ್ಮಾರ್ಟ್‌ಫೋನ್‌ನಿಂದ ಇಯರ್‌ಫೋನ್‌ಗಳಿಗೆ ಸುಗಮವಾಗಿ ಧ್ವನಿಯನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಹೆಚ್ಚುವರಿಯಾಗಿ, ವಾಯ್ಸ್‌ ಅಸಿಸ್ಟೆಂಟ್‌ಗೆ ಈ ಇಯರ್‌ಫೋನ್‌ ಬಂಬಲಿಸಲಿದೆ. ಅಲ್ಲದೆ ಈ ಇಯರ್‌ಫೊನ್‌ ಬ್ಲೂಟೂತ್‌ 5.0 ಹಾಗೂ 7.2mm ಆಡಿಯೋ ಡ್ರೈವರ್‌ ಅನ್ನು ಬೆಂಬಲಿಸಲಿದೆ.

ರಿಯಲ್‌ಟೆಕ್

ಇನ್ನು ರಿಯಲ್‌ಟೆಕ್ ಆರ್‌ಟಿಎಲ್ 8763 ಬಿಎಫ್‌ಆರ್ ಬ್ಲೂಟೂತ್ ಚಿಪ್ ಮೂಲಕ ವಾತಾವರಣದಲ್ಲಿ ನಾಯಿಸ್‌ ರಿಡಕ್ಷನ್‌ ಮತ್ತು ರೆಡ್ಮಿ ಏರ್‌ಡಾಟ್ಸ್ ಎಸ್‌ನ ಪ್ರತಿ ಇಯರ್‌ಫೋನ್ ಅನ್ನು ಪ್ರತ್ಯೇಕವಾಗಿ ಜೋಡಿಸದೆ ಇಯರ್‌ಫೋನ್ ಅನ್ನು ಪ್ರತ್ಯೇಕವಾಗಿ ಬಳಸುವ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಈ ಇಯರ್‌ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆ ಆಗಿದ್ದು, ಜಾಗತಿಕವಾಗಿ ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದು ಸ್ಪಷ್ಟವಾಗಿಲ್ಲ. ಇನ್ನು ಇದರ ಬೆಲೆ CNY 100 (ಅಂದಾಜು 1,100 ರೂ.).ಆಗಿದ್ದು ಚೀನಾ ಕಂಪನಿಯ ಇ-ಸ್ಟೋರ್‌ನಲ್ಲಿ ಖರೀದಿಸಲು ಲಭ್ಯವಿದೆ.

Best Mobiles in India

English summary
The Redmi Airdots S true wireless earphones are available in a single colour variant - black - and use Bluetooth 5.0 for connectivity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X