ಕಲರ್‌ಡಿಸ್‌ಪ್ಲೇ ಹೊಂದಿರುವ ರೆಡ್‌ಮಿ ಬ್ಯಾಂಡ್‌ ಬಿಡುಗಡೆ!

|

ಟೆಕ್ ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಆಧಾರಿತ ಬ್ಯಾಂಡ್‌ಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಶೈಲಿಯ ಫಿಟ್ನೆಸ್‌ ಬ್ಯಾಂಡ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಹಲವು ಬ್ಯಾಂಡ್‌ಗಳು ಲಭ್ಯವಿದ್ದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಕಂಪೆನಿಯ ಬ್ಯಾಂಡ್‌ಗಳನ್ನ ಮಾತ್ರ ಖರೀದಿಸುತ್ತಾರೆ. ಇವುಗಳಲ್ಲಿ ಶಿಯೋಮಿ ಕಂಪೆನಿಯ ರೆಡ್‌ಮಿ ಕೂಡ ಒಂದಾಗಿದೆ. ಸದ್ಯ ಶಿಯೋಮಿಯ ಸಬ್‌ಬ್ರಾಂಡ್‌ ಆಗಿರುವ ರೆಡ್‌ಮಿ ವಿಶೇಷ ಬ್ಯಾಂಡ್‌ಗಳನ್ನ ಪರಿಚಯಿಸಿದ್ದು, ಇದೀಗ ತನ್ನ ಹೊಸ ಬ್ಯಾಂಡ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಜನಪ್ರಿಯ ಕಂಪೆನಿ ಶಿಯೋಮಿಯ ಸಬ್‌ ಬ್ರಾಂಡ್‌ ರೆಡ್‌ಮಿ ತನ್ನ ಹೊಸ ರೆಡ್‌ಮಿ ಬ್ಯಾಂಡ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸ್ಮಾರ್ಟ್‌ಬ್ಯಾಂಡ್‌ ಕಲರ್‌ ಡಿಸ್‌ಪ್ಲೇಯನ್ನ ಒಳಗೊಂಡಿದ್ದು, ರನ್ನಿಂಗ್‌, ವಾಕಿಂಗ್‌ ಆಕ್ಟಿವಿಟಿಸ್‌ಗಳನ್ನ ರೆಕಾರ್ಡಿಂಗ್‌ ಮಾಡಲು ಉಪಯುಕ್ತವಾದ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಿಯೋಮಿಯ ಮಿ ಫ್ಯಾನ್ ಫೆಸ್ಟಿವಲ್ 2020 ನಡೆಯಲಿದೆ. ಇದೇ ಸಂದರ್ಭದಲ್ಲಿ ರೆಡ್‌ಮಿ ತನ್ನ ಹೊಸ ಬ್ಯಾಂಡ್ ಅನ್ನು ಅನಾವರಣಗೊಳಿಸಿದೆ. ಅಷ್ಟಕ್ಕೂ ಈ ಬ್ಯಾಂಡ್‌ ವಿನ್ಯಾಸ ಹೇಗಿದೆ. ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಇದೀಗ

ಇನ್ನು ಇದೀಗ ಬಿಡುಗಡೆ ಆಗಿರುವ ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ ಕಲರ್‌ಫುಲ್‌ ಡಿಸ್‌ಪ್ಲೇಯನ್ನ ಒಳಗೊಂಡಿದೆ. ಇದು ಆಯತಾಕಾರದ 1.08-ಇಂಚಿನ ಡಿಸ್‌ಪ್ಲೇ ಆಗಿದೆ. ಜೊತೆಗೆ ಇದು ಐದು ವಿಭಿನ್ನ ಕ್ರೀಡಾ ವಿಧಾನಗಳೊಂದಿಗೆ ಬರುತ್ತದೆ. ಅಲ್ಲದೆ ಹೃದಯ ಬಡಿತದ ನೈಜ-ಸಮಯವನ್ನ ಮೇಲ್ವಿಚಾರಣೆ ಮಾಡಲಿದ್ದು, ಇದಕ್ಕಾಗಿ ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌ ಅನ್ನು ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್ ಬ್ಯಾಂಡ್ ಸ್ಲೀಪಿಂಗ್‌ ಮೇಲ್ವಿಚಾರಣೆಯನ್ನು ಸಹ ಹೊಂದಿದ್ದು, ಬಳಕೆದಾರರು ತಮ್ಮ ನಿದ್ರೆಯ ಮಾದರಿಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ.

ಶಿಯೋಮಿ

ಇದಲ್ಲದೆ ಶಿಯೋಮಿ ರೆಡ್‌ಮಿ ಬ್ಯಾಂಡ್‌ನಲ್ಲಿ 70 ಕ್ಕೂ ಹೆಚ್ಚು ವೈಯಕ್ತಿಕ ಡಯಲ್ ಮುಖಗಳನ್ನು ಒದಗಿಸಿದ್ದು, ಇದರಲ್ಲಿ ನಾಲ್ಕು ವಿಭಿನ್ನ ರಿಸ್ಟ್‌ಬ್ಯಾಂಡ್ ಆಯ್ಕೆಗಳನ್ನ ನೀಡಲಾಗಿದೆ. ಇನ್ನು ಈ ರೆಡ್ಮಿ ಬ್ಯಾಂಡ್ ಇಂಟಿಗ್ರೇಟೆಡ್ ಯುಎಸ್‌ಬಿ ಕನೆಕ್ಟರ್‌ನೊಂದಿಗೆ ಬರಲಿದ್ದು, ಯುಎಸ್‌ಬಿ ಚಾರ್ಜರ್‌ಗೆ ಪ್ಲಗ್ ಮಾಡುವ ಮೂಲಕ ಸಿಸ್ಟಮ್ ಅನ್ನು ಚಾರ್ಜ್ ಮಾಡಬಹುದಾಗಿದೆ. ಅಲ್ಲದೆ ಈ ಬ್ಯಾಂಡ್‌ನಲ್ಲಿ ಇಂಟರ್‌ಬಿಲ್ಟ್‌ ಬ್ಯಾಟರಿಯನ್ನ ನೀಡಲಾಗಿದ್ದು, ಈ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 14 ದಿನಗಳವರೆಗೆ ಬಾಳಿಕೆ ಬರಲಿದೆ.

ಬ್ಯಾಂಡ್

ಇನ್ನು ಈ ರೆಡ್‌ಮಿ ಬ್ಯಾಂಡ್ ಆಂಡ್ರಾಯ್ಡ್ ಹೊಂದಾಣಿಕೆಯನ್ನು ಹೊಂದಿದ್ದು, ಅದು ರೆಡ್‌ಮಿ ಮತ್ತು ಮಿ ಮಾದರಿಗಳನ್ನು ಹೊರತುಪಡಿಸಿ ಇತರ ಫೋನ್‌ಗಳೊಂದಿಗೆ ಕಾರ್ಯನಿರ್ವಹಿಸುವಂತೆ ಮಾಡಲಿದೆ. ಇನ್ನು ಈ ರೆಡ್‌ಮಿ ಬ್ಯಾಂಡ್ ಬೆಲೆ CNY 99 (ಸುಮಾರು 1,100 ರೂ.)ಗೆ ನಿಗದಿಪಡಿಸಲಾಗಿದೆ, ಆದರೂ ಇದು ಸಿಎನ್‌ವೈ 95 (ಸುಮಾರು 1,000 ರೂ.) ನಲ್ಲಿ ಕ್ರೌಡ್‌ಫಂಡಿಂಗ್ ಅಭಿಯಾನದಡಿಯಲ್ಲಿ ಲಭ್ಯವಾಗಲಿದೆ. ಈ ಅಭಿಯಾನವು ಏಪ್ರಿಲ್ 9 ರಿಂದ ಚೀನಾದಲ್ಲಿ ಶುರುವಾಗಲಿದೆ.

ಬ್ಯಾಂಡ್

ಇದಲ್ಲದೆ ರೆಡ್ಮಿ ಬ್ಯಾಂಡ್ ಜೊತೆಗೆ, ಶಿಯೋಮಿ ತನ್ನ ಮಿ ಫ್ಯಾನ್ ಫೆಸ್ಟಿವಲ್ 2020 ಕಾರ್ಯಕ್ರಮದಲ್ಲಿ ಮಿ ಬನ್ನಿ ವಾಚ್ 4 ಸ್ಮಾರ್ಟ್ ವಾಚ್ ಮತ್ತು ಮಿ ಏರ್ 2 ಎಸ್ ಇಯರ್‌ಬಡ್ ಗಳನ್ನು ಸಹ ಬಿಡುಗಡೆ ಮಾಡಿದೆ. ಜೊತೆಗೆ ತನ್ನ ಹೊಸ ಸ್ಮಾರ್ಟ್ ಟಿವಿ, ಸಂಪರ್ಕಿತ ಕ್ಯಾಮೆರಾ ಮತ್ತು ಮುಂದಿನ ದಿನಗಳಲ್ಲಿ ಚೀನೀ ಮಾರುಕಟ್ಟೆಗೆ ಆಗಮಿಸುವ ರೂಟರ್ ಮಾದರಿಗಳನ್ನು ಪ್ರದರ್ಶಿಸಿದೆ.

Most Read Articles
Best Mobiles in India

Read more about:
English summary
Redmi Band With Colour Display, Integrated USB Plug Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X