Redmi: ಬಿಡುಗಡೆಗೂ ಮುನ್ನವೇ ದೂಳೆಬ್ಬಿಸಿದ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್!
ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ತನ್ನ ವಿಭಿನ್ನ ಶ್ರೇಣಿಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಇದರಲ್ಲಿ ರೆಡ್ಮಿ ಬಡ್ಸ್‌ಗಳು ಕೂಡ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿದೆ. ಇದೀಗ ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಹೊಸ ರೆಡ್ಮಿ ಬಡ್ಸ್ 4 ಆಕ್ಟಿವ್ TWS (Redmi Buds 4 Active) ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
ಹೌದು, ರೆಡ್ಮಿ ಬಡ್ಸ್ 4 ಆಕ್ಟಿವ್ TWS ಇದೇ ಜೂನ್ 13 ರಂದು ಭಾರತದಲ್ಲಿ ಲಾಂಚ್ ಆಗೋದು ಪಕ್ಕಾ ಆಗಿದೆ. ಸದ್ಯ ರೆಡ್ಮಿ ಬಡ್ಸ್ 4 ಆಕ್ಟಿವ್ TWS ಲಾಂಚ್ ಮೈಕ್ರೋ ಸೈಟ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಇದರಲ್ಲಿ ರೆಡ್ಮಿ ಬಡ್ಸ್ 4 ಆಕ್ಟಿವ್ TWS ಫೀಚರ್ಸ್ ಬಹಿರಂಗವಾಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ರೆಡ್ಮಿ ಬಡ್ಸ್ 4 ಆಕ್ಟಿವ್ TWS ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಬಡ್ಸ್ 4 ಆಕ್ಟಿವ್ ಲಾಂಚ್ ಮೈಕ್ರೋ-ಸೈಟ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಇದರಲ್ಲಿ ಬಹಿರಂಗವಾಗಿರುವ ಮಾಹಿತಿ ಪ್ರಕಾರ ಈ ಬಡ್ಸ್ ಅಲ್ಟ್ರಾ ಬ್ಯಾಟರಿ ಅವಧಿಯನ್ನು ಹೊಂದಿರಲಿದೆ. ಅಲ್ಲದೆ ಗೂಗಲ್ ಫಾಸ್ಟ್ ಪೇರ್ ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ಕಂಪೆನಿ ಬಹಿರಂಗಪಡಿಸಿದೆ. ಇದನ್ನು ಬಾಸ್ ಪ್ರೊ ಡ್ರೈವರ್ಸ್‌ನೊಂದಿಗೆ ಸಜ್ಜುಗೊಳಿಸಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಈ ಬಡ್ಸ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಬೆಂಬಲವನ್ನು ಹೊಂದಿರಲಿದೆ ಎಂದು ಶಿಯೋಮಿ ಸಂಸ್ಥೆ ಹೇಳಿದೆ.
ರೆಡ್ಮಿ ಬಡ್ಸ್ 4 ಆಕ್ಟಿವ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಅದೇ ಮಾದರಿಯ ಫೀಚರ್ಸ್‌ಗಳನ್ನು ಭಾರತೀಯ ಆವೃತ್ತಿಯಲ್ಲಿ ಕೂಡ ನೀಡಲಾಗಿದೆ ಎಂದು ಹೇಳಲಾಗಿದೆ. ಅದರಂತೆ ರೆಡ್ಮಿ ಬಡ್ಸ್ 4 ಆಕ್ಟಿವ್ ಪವರ್‌ಫುಲ್ ಬಾಸ್‌ಗಾಗಿ 12mm ಡೈನಾಮಿಕ್ ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಅಲ್ಲದೆ ಎಕೋ ಸೌಂಡ್ ಕ್ಯಾನ್ಸಲೇಶನ್ ಬೆಂಬಲವನ್ನು ಸಹ ಪಡೆದುಕೊಂಡಿದೆ. ಇದರಿಂದ ನಿಮ್ಮ ಸುತ್ತಮುತ್ತಲಿನ ಬ್ಯಾಕ್‌ಗ್ರೌಂಡ್ ನಾಯ್ಸ್ ಅನ್ನು ಕಡಿಮೆ ಮಾಡಲಿದೆ.

ಈ ಇಯರ್‌ಬಡ್ಸ್‌ನಲ್ಲಿ ಗೇಮರ್‌ಗಳಿಗಾಗಿ ಲೋ ಲೇಟೆನ್ಸಿ ಗೇಮಿಂಗ್ ಮೋಡ್ ಅನ್ನು ಸಹ ನೀಡಲಾಗಿದೆ. ಇದರಿಂದ ಗೇಮರ್‌ಗಳಿಗೆ ಅತ್ಯುತ್ತಮ ಅನುಭವ ದೊರೆಯಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಇಯರ್‌ಬಡ್ಸ್ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದ್ದು, SBC ಆಡಿಯೊ ಕೊಡೆಕ್ ಅನ್ನು ಬೆಂಬಲಿಸುತ್ತದೆ. ಇನ್ನು ಸರಳವಾದ ಜೋಡಣೆಯ ಅನುಭವಕ್ಕಾಗಿ ಇದು ಗೂಗಲ್ ಫಾಸ್ಟ್ ಪೇರ್‌ಗೆ ಬೆಂಬಲವನ್ನು ನೀಡಲಿದೆ. ಅಲ್ಲದೆ ಆಡಿಯೊ ಟ್ರ್ಯಾಕ್‌ಗಳ ನಡುವೆ ಬದಲಾವಣೆ ಮಾಡುವುದಕ್ಕೆ ಕೂಡ ಅವಕಾಶ ನೀಡಲಿದೆ.

ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್ 34mAh ಬ್ಯಾಟರಿ ಯೂನಿಟ್ ಅನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 5 ಗಂಟೆಗಳ ಕಾಲ ಬಾಳಿಕೆ ಬರಲಿದೆ. ಅಲ್ಲದೆ ಇದರ ಚಾರ್ಜಿಂಗ್ ಕೇಸ್ 440mAH ಬ್ಯಾಟರಿ ಯೂನಿಟ್ ಅನ್ನು ಹೊಂದಿದೆ, ಇದರಿಂದ ಸುಮಾರು 28 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅವಕಾಶ ಸಿಗಲಿದೆ. ಇನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಕೇಸ್ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಫೀಚರ್ಸ್‌ಅನ್ನು ಸಹ ಬೆಂಬಲಿಸುತ್ತದೆ. ಸದ್ಯ ಇದರ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ.
ಇದಲ್ಲದೆ ರೆಡ್ಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ರೆಡ್ಮಿ ನೋಟ್ 12 4G ಮತ್ತು ರೆಡ್ಮಿ 12C (Redmi Note 12 4G, Redmi 12C) ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಇವು 4G ಫೋನ್‌ಗಳಾಗಿದ್ದು, ರೆಡ್ಮಿ ನೋಟ್12 4G ಫೋನ್ ಹಿಲಿಯೋ G85SoC ಪ್ರೊಸೆಸರ್ ಬಲ ಹೊಂದಿದ್ದರೆ ರೆಡ್ಮಿ ನೋಟ್12 ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ.


Click it and Unblock the Notifications








