Home
ಸುದ್ದಿಜಾಲ

Redmi Buds 4 Active: ಮ್ಯೂಸಿಕ್‌ ಪ್ರಿಯರಿಗೆ ಇದಕ್ಕಿಂತ ಮತ್ತೊಂದು ಆಯ್ಕೆ ಬೇಕೆ?

ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್‌ ಅಡಿಯಲ್ಲಿ ಹಲವು ಡಿವೈಸ್‌ಗಳನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಇಯರ್‌ಬಡ್ಸ್‌ಗಳನ್ನು ಸಹ ಪರಿಚಯಿಸುತ್ತಾ ಬಂದಿದೆ. ಅದರಂತೆ ಇದೀಗ ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣಗೊಳಿಸಿದೆ. ಇದನ್ನು ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಇಯರ್‌ಬಡ್ಸ್‌ ಎಂದು ಹೆಸರಿಸಲಾಗಿದೆ.

ಹೌದು, ಶಿಯೋಮಿ ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಇಯರ್‌ಬಡ್ಸ್‌ ಭಾರತದಲ್ಲಿ ಲಾಂಚ್‌ ಆಗಿದೆ. ಇದು ಆಡಿಯೊ-ವರ್ಧಿಸುವ ಫೀಚರ್ಸ್‌ಗಳೊಂದಿಗೆ ಲಾಂಗ್‌ ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಬರಲಿದೆ. ಈ ಇಯರ್‌ಬಡ್ಸ್‌ ಗೂಗಲ್‌ ಫಾಸ್ಟ್‌ವೇರ್‌ ಸಿಸ್ಟಂ ಹೊಂದಿರುವುದರಿಂದ ಸಿಂಗಲ್‌ ಟ್ಯಾಪ್‌ನಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಜೊತೆಗೆ ಕನೆಕ್ಟ್‌ ಆಗುವ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Redmi Buds 4 Active: ಮ್ಯೂಸಿಕ್‌ ಪ್ರಿಯರಿಗೆ ಇದಕ್ಕಿಂತ ಮತ್ತೊಂದು ಆಯ್ಕೆ ಬೇಕೆ?

ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಫೀಚರ್ಸ್‌ ವಿವರ: ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಇಯರ್‌ಬಡ್ಸ್‌ ವರ್ಧಿತ ಬಾಸ್ ಮತ್ತು ಅಕೌಸ್ಟಿಕ್ಸ್ ಅನುಭವಕ್ಕಾಗಿ 12mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇವುಗಳನ್ನು ಶಿಯೋಮಿಯ ಅಕೌಸ್ಟಿಕ್ ಲ್ಯಾಬ್ ಇನ್-ಹೌಸ್ ಟ್ಯೂನಿಂಗ್‌ ಮೂಲಕ ಬೆಂಬಲಿಸಲಾಗುತ್ತದೆ. ಇದರಿಂದ ನೀವು ಅತ್ಯುತ್ತಮವಾದ ಸ್ಟಿರಿಯೊ ಎಕ್ಸ್‌ಪಿರಿಯನ್ಸ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಇಯರ್‌ಬಡ್ಸ್‌ ಎಕೋ ನಾಯ್ಸ್‌ ಕ್ಯಾನ್ಸ್‌ಲೇಶನ್‌ ಸಿಸ್ಟಂ ಅನ್ನು ಹೊಂದಿದೆ. ಇದರಿಂದ ನಿಮಗೆ ಮ್ಯೂಸಿಕ್‌ ಕೇಳುವಾಗ ಬೇರೆ ಯಾವುದೇ ಧ್ವನಿ ಅಡಚಣೆ ಎದುರಾಗುವುದಿಲ್ಲ. ಜೊತೆಗೆ ಕರೆ ಸಮಯದಲ್ಲಿಯು ಅನಗತ್ಯ ಶಬ್ದ ಕೇಳದಂತೆ ಮಾಡಲಿದೆ. ಇದರಿಂದ ನೀವು ಕರೆ ಸಮಯದಲ್ಲಿ ಸ್ಪಷ್ಟವಾದ ಧ್ವನಿ ಕೇಳಲು ಸಾದ್ಯವಾಗಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

ಶಿಯೋಮಿ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಗೂಗಲ್‌ನ ಫಾಸ್ಟ್‌ಪೇರ್‌ ಫೀಚರ್ಸ್‌ ಹೊಂದಿದೆ. ಆದರಿಂದ ಸಿಂಗಲ್‌ ಟ್ಯಾಪ್‌ನಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್‌ ಮಾಡಲು ಸಾಧ್ಯವಾಗಲಿದೆ. ಈ ಮೂಲಕ ಬಳಕೆದಾರರು ಸ್ಮಾರ್ಟ್‌ಫೋನ್‌ನ ಕರೆಗಳನ್ನು ಇಯರ್‌ಬಡ್ಸ್‌ ಮೂಲಕವೇ ಕಂಟ್ರೋಲ್‌ ಮಾಡಬಹುದಾಗಿದೆ. ಜೊತೆಗೆ ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಪ್ಲೇ ಮಾಡಬಹುದು, ಮ್ಯೂಸಿಕ್‌ ಅನ್ನು ನಿಮಗೆ ಇಷ್ಟ ಬಂದಂತೆ ಬದಲಾಯಿಸುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ವಿಭಿನ್ನ ಟಚ್‌ ಗೆಸ್ಚರ್‌ಗಳನ್ನು ಬಳಸಿಕೊಂಡು ಲೋ-ಲೆಟೆನ್ಸಿ ಮೋಡ್‌ಗಳನ್ನು ಆಕ್ಟಿವ್‌ ಮಾಡಬಹುದಾಗಿದೆ.

Redmi Buds 4 Active: ಮ್ಯೂಸಿಕ್‌ ಪ್ರಿಯರಿಗೆ ಇದಕ್ಕಿಂತ ಮತ್ತೊಂದು ಆಯ್ಕೆ ಬೇಕೆ?

ಈ ಇಯರ್‌ಬಡ್ಸ್‌ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದು USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದ್ದು, ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 110 ನಿಮಿಷಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಚಾರ್ಜಿಂಗ್‌ ಕೇಸ್‌ನಲ್ಲಿ 30 ಗಂಟೆಗಳ ಪ್ಲೇಬ್ಯಾಕ್ ನೀಡಲಿದೆ ಎಂದು ಹೇಳಲಾಗಿದೆ. ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ ಐದು ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ ಎಂದು ಸಹ ವರದಿಯಾಗಿದೆ.

ಭಾರತದಲ್ಲಿ ರೆಡ್ಮಿ ಬಡ್ಸ್‌ 4 ಆಕ್ಟಿವ್‌ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಶಿಯೋಮಿ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಬೆಲೆ 1,399ರೂ.ಆಗಿದೆ. ಆದರೆ ಲಾಂಚ್‌ ಆಫರ್‌ನಲ್ಲಿ ಇದನ್ನು ನೀವು 1,199ರೂ.ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಭಾರತದಲ್ಲಿ ಬಡ್‌ ಜೂನ್ 20 ರಂದು ಮಾರಾಟವಾಗಲಿದೆ. ಇದರ ಲಾಂಚ್‌ ಆಫರ್‌ ಜೂನ್ 23 ರವರೆಗೆ ಮಾನ್ಯವಾಗಿರುತ್ತದೆ. ಇದನ್ನು ನೀವು ಶಿಯೋಮಿ ಇಂಡಿಯಾ ವೆಬ್‌ಸೈಟ್, ಅಮೆಜಾನ್‌ ಮತ್ತು ಶಿಯೋಮಿ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ. ಇದು ಏರ್ ವೈಟ್ ಮತ್ತು ಬಾಸ್ ಬ್ಲ್ಯಾಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Redmi Buds 4 Active TWS Earbuds Launched in India: Price and Specifications details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+