Redmi: ಭಾರತದಲ್ಲಿ ರೆಡ್ಮಿ ಬಡ್ಸ್ 5 ಎಂಟ್ರಿಗೆ ಮುಹೂರ್ತ ಫಿಕ್ಸ್! ಏನೆಲ್ಲಾ ನಿರೀಕ್ಷೆ?
ರೆಡ್ಮಿ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ವಿಭಿನ್ನ ಮಾದರಿಯ ಇಯರ್‌ಬಡ್ಸ್‌ಗಳಿಗೂ ಕೂಡ ಪ್ರಸಿದ್ಧಿ ಪಡೆದಿದೆ. ತನ್ನ ವೈವಿಧ್ಯಮಯ ಇಯರ್‌ಬಡ್ಸ್‌ಗಳ ಮೂಲಕ ಸದ್ದು ಮಾಡಿರುವ ರೆಡ್ಮಿ ಕಂಪೆನಿ ಇದೀಗ Redmi Buds 5 ಇಯರ್‌ಬಡ್ಸ್ ಪರಿಚಯಿಸಲು ತಯಾರಿ ನಡೆಸಿದೆ. ಈ ಇಯರ್‌ಬಡ್ಸ್ ಇದೇ ಫೆಬ್ರವರಿ 12 ಭಾರತಕ್ಕೆ ಎಂಟ್ರಿ ನೀಡುವುದು ಪಕ್ಕಾ ಆಗಿದೆ.
ಹೌದು, Redmi Buds 5 ಇಯರ್‌ಬಡ್ಸ್ ಭಾರತಕ್ಕೆ ಎಂಟ್ರಿ ನೀಡುವ ದಿನಾಂಕ ಬಹಿರಂಗವಾಗಿದೆ. ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ X (ಹಿಂದೆ Twitter)ನಲ್ಲಿ ಬಿಡುಗಡೆ ದಿನಾಂಕವನ್ನು ರೆಡ್ಮಿ ಕಂಪೆನಿ ಪ್ರಕಟಿಸಿದೆ. ಇನ್ನು ಈ ಇಯರ್‌ಬಡ್ಸ್ ಅನ್ನು "ಸೂಪರ್‌ಬಡ್ಸ್" ಹೆಸರಿನಲ್ಲಿ ಪ್ರಮೋಷನ್ ಮಾಡುತ್ತಿರುವುದು ಇದರ ಮೇಲೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಹಾಗಾದ್ರೆ ಹೊಸ ರೆಡ್ಮಿ ಬಡ್ಸ್ 5 ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಬಡ್ಸ್ 5 ವಿಶೇಷತೆ ಏನು?
ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಫೀಚರ್ಸ್ ಅಮೆಜಾನ್‌ನಲ್ಲಿ ಕಾಣಿಸಿಕೊಂಡಿದೆ. ಅದರಂತೆ ಈ ಇಯರ್‌ಬಡ್ಸ್ 12.4mm ಟೈಟಾನಿಯಂ ಆಡಿಯೋ ಡ್ರೈವರ್‌ಗಳನ್ನು ಹೊಂದಿರಲಿದೆ. ಇದು ಹೈಬ್ರಿಡ್ ANC ಅನ್ನು 46db ವರೆಗೆ ಬೆಂಬಲಿಸಲಿದ್ದು, ಬ್ಯಾಕ್‌ಗ್ರೌಂಡ್ ನಾಯ್ಸ್ ಅನ್ನು ಕಡಿಮೆ ಮಾಡಲಿದೆ. ಜೊತೆಗೆ ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ನೀಡುತ್ತದೆ. ಇದರಲ್ಲಿ ವಿಭಿನ್ನ ಮನಸ್ಥಿತಿಗಳು ಮತ್ತು ವಿಷಯವನ್ನು ಹೊಂದಿಸಲು ಮಲ್ಟಿ ವಾಯ್ಸ್ ಮೋಡ್‌ಗಳನ್ನು ಸಹ ನೀಡಲಾಗಿದೆ.
ಇನ್ನು Redmi ಬಡ್ಸ್ 5 ಡ್ಯುಯಲ್-ಡಿವೈಸ್ ಜೋಡಣೆಯಂತಹ ಫೀಚರ್ಸ್‌ಗಳನ್ನು ಸಹ ಬೆಂಬಲಿಸಲಿದೆ. ಈ ಇಯರ್‌ಬಡ್ಸ್ ಡ್ಯುಯಲ್-ಮೈಕ್ AI ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್ ಹೊಂದಿದ್ದು, ಕರೆ ಮಾಡುವ ಅನುಭವವನ್ನು ಸಾಕಷ್ಟು ಸುಧಾರಿಸುವ ಭರವಸೆ ನೀಡುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 38 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ರೆಡ್ಮಿ ಕಂಪೆನಿ ಹೇಳಿಕೊಂಡಿದೆ.

ರೆಡ್ಮಿ ಕಂಪೆನಿಯ ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ಈ ಸಮಯದಲ್ಲಿ ರೆಡ್ಮಿ ಬಡ್ಸ್ 5 ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ. ಇದರ ವಿನ್ಯಾಸ ಹಾಗೂ ಸ್ಟೈಲಿಶ್ ಲುಕ್ ಯುವಜನರನ್ನು ಸೆಳೆಯುವ ಸೂಚನೆ ನೀಡಿದೆ. ಇದಲ್ಲದೆ ರೆಡ್ಮಿ ಬಡ್ಸ್ 5 ಬಳಕೆದಾರರ ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ವಿನ್ಯಾಸವನ್ನು ಪಡೆದುಕೊಂಡಿವೆ.

Redmi ಬಡ್ಸ್ 5 ನಿರೀಕ್ಷಿತ ಬೆಲೆ ವಿವರ
Redmi ಬಡ್ಸ್ 5 ಭಾರತದಲ್ಲಿ ಯಾವುದೇ ಬೆಲೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇದರ ಬೆಲೆ $46 (ಸುಮಾರು 4,000ರೂ) ಆಗಿದೆ. ಅದರಂತೆ ಇದರ ಬೆಲೆ ಭಾರತದಲ್ಲಿ ಜಾಗತಿಕ ಬೆಲೆಗೆ ಸಮಾನವಾಗಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಕಳೆದ ವರ್ಷ ಭಾರತದಲ್ಲಿ ರೆಡ್ಮಿ ಸಂಸ್ಥೆ ರೆಡ್ಮಿ ಬಡ್ಸ್ 4 ಆಕ್ಟಿವ್ TWS ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿತ್ತು. ಇನ್ನು ರೆಡ್ಮಿ ಬಡ್ಸ್ 4 ಆಕ್ಟಿವ್ TWS ಇಯರ್‌ಬಡ್ಸ್ ವರ್ಧಿತ ಬಾಸ್ ಮತ್ತು ಅಕೌಸ್ಟಿಕ್ಸ್ ಅನುಭವಕ್ಕಾಗಿ 12mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇವುಗಳನ್ನು ಶಿಯೋಮಿಯ ಅಕೌಸ್ಟಿಕ್ ಲ್ಯಾಬ್ ಇನ್-ಹೌಸ್ ಟ್ಯೂನಿಂಗ್ ಮೂಲಕ ಬೆಂಬಲಿಸಲಾಗುತ್ತದೆ. ಇದರಿಂದ ನೀವು ಅತ್ಯುತ್ತಮವಾದ ಸ್ಟಿರಿಯೊ ಎಕ್ಸ್‌ಪಿರಿಯನ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಈ ಇಯರ್‌ಬಡ್ಸ್ ಎಕೋ ನಾಯ್ಸ್ ಕ್ಯಾನ್ಸ್‌ಲೇಶನ್ ಸಿಸ್ಟಂ ಅನ್ನು ಹೊಂದಿದೆ. ಇದರಿಂದ ನಿಮಗೆ ಮ್ಯೂಸಿಕ್ ಕೇಳುವಾಗ ಬೇರೆ ಯಾವುದೇ ಧ್ವನಿ ಅಡಚಣೆ ಎದುರಾಗುವುದಿಲ್ಲ. ಜೊತೆಗೆ ಕರೆ ಸಮಯದಲ್ಲಿಯು ಅನಗತ್ಯ ಶಬ್ದ ಕೇಳದಂತೆ ಮಾಡಲಿದೆ. ಇದರಿಂದ ನೀವು ಕರೆ ಸಮಯದಲ್ಲಿ ಸ್ಪಷ್ಟವಾದ ಧ್ವನಿ ಕೇಳಲು ಸಾದ್ಯವಾಗಲಿದೆ


Click it and Unblock the Notifications








