ಭಾರತದಲ್ಲಿ ರೆಡ್ಮಿ ಬಡ್ಸ್ 5 ಬಿಡುಗಡೆ: ವೇಗದ ಚಾರ್ಜಿಂಗ್, ಸ್ಟೈಲಿಶ್ ಲುಕ್!
ಜನಪ್ರಿಯ ರೆಡ್ಮಿ ಬ್ರ್ಯಾಂಡ್ ಭಾರತದಲ್ಲಿ ಹೊಸ Redmi Buds 5 ಅನ್ನು ಬಿಡುಗಡೆ ಮಾಡಿದೆ. ಇದು ಏರ್‌ಪಾಡ್ಸ್ ಮಾದರಿಯ ಸೆಮಿ-ಇನ್-ಇಯರ್ ವಿನ್ಯಾಸವನ್ನು ಹೊಂದಿದ್ದು, ಬಾಹ್ಯ ಶಬ್ದವನ್ನು 46dB ಯಿಂದ ಕಡಿಮೆ ಮಾಡಲು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್ ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್ 12.4mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ.
ಹೌದು, Redmi Buds 5 ಭಾರತದಲ್ಲಿ ಲಾಂಚ್ ಆಗಿದ್ದು, ಬರೋಬ್ಬರಿ 38 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಈ ಇಯರ್‌ಬಡ್ಸ್ ಡ್ಯುಯಲ್-ಡಿವೈಸ್ ಜೋಡಣೆಯನ್ನು ಬೆಂಬಲಿಸಲಿದ್ದು, ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಬಳಸಿ ತಮ್ಮ ಇಯರ್‌ಫೋನ್‌ಗಳನ್ನು ಸಹ ಪತ್ತೆ ಮಾಡಬಹುದು. ಹಾಗಾದ್ರೆ Redmi Buds 5 ಯಾವೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಬಡ್ಸ್ 5 ಫೀಚರ್ಸ್ ಹೇಗಿದೆ?
ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ 12.4mm ಆಡಿಯೋ ಡೈನಾಮಿಕ್ ಡ್ರೈವರ್‌ಗಳೊಂದಿಗೆ ಬರುತ್ತದೆ. ಇದು 20Hz ನಿಂದ 20kHz ಫ್ರಿಕ್ವೆನ್ಸಿ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. ಇದಲ್ಲದೆ ಅನಗತ್ಯ ಬಾಹ್ಯ ಶಬ್ದವನ್ನು ತೊಡೆದುಹಾಕಲು 46dB ANC ಫೀಚರ್ಸ್ ಅನ್ನು ನೀಡಲಿದೆ. ಜೊತೆಗೆ ಇಯರ್‌ಬಡ್ಸ್ ಹೈಬ್ರಿಡ್ ANC ಫೀಚರ್ಸ್ ಹೊಂದಿರುವುದರಿಂದ 99.5% ಬ್ಯಾಕ್‌ಗ್ರೌಂಡ್ ನಾಯ್ಸ್ ಅನ್ನು ಕಡಿಮೆ ಮಾಡಲಿದೆ.
ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಇನ್-ಇಯರ್ ವಿನ್ಯಾಸವನ್ನು ಹೊಂದಿದ್ದು, ಅಂಡಾಕಾರದ-ಆಕಾರದ ಚಾರ್ಜಿಂಗ್ ಕೇಸ್ ಹೊಂದಿದೆ. ಇದು AI ಬೆಂಬಲಿತ ಡ್ಯುಯಲ್ ಮೈಕ್ರೊಫೋನ್‌ಗಳನ್ನು ಹೊಂದಿದ್ದು, ಮೂರು ಪಾರದರ್ಶಕತೆ ಮೋಡ್‌ಗಳನ್ನು ನೀಡುತ್ತದೆ. ಅಂದರೆ ಬಳಕೆದಾರರು ಇದರಲ್ಲಿ ಪ್ರಮಾಣಿತ, ವರ್ಧಿತ ಟ್ರೆಬಲ್, ವರ್ಧಿತ ಬಾಸ್ ಮತ್ತು ವರ್ಧಿತ ಧ್ವನಿ ಸೇರಿದಂತೆ ವಿವಿಧ ಆಡಿಯೊ ಎಫೆಕ್ಟ್‌ಗಳನ್ನು ಒಳಗೊಂಡಿದೆ.

ಇನ್ನು ಈ ಇಯರ್‌ಬಡ್ಸ್ ಡ್ಯುಯಲ್-ಡಿವೈಸ್ ಪೇರಿಂಗ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಏಕಕಾಲದಲ್ಲಿ ಎರಡು ಡಿವಯಸ್‌ಗಳನ್ನು ಕನೆಕ್ಟ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಸ್ಮಾರ್ಟ್‌ಫೋನ್ ಬಳಸಿಯೂ ಇಯರ್‌ಬಡ್‌ಗಳನ್ನು ಪತ್ತೆ ಮಾಡುವುದಕ್ಕೆ ಸಹ ಅವಕಾಶವಿದೆ ಎಂದು ರೆಡ್ಮಿ ಕಂಪನಿ ಹೇಳಿದೆ. ಇದರೊಂದಿಗೆ ಈ ಇಯರ್‌ಫೋನ್‌ಗಳು SBC ಮತ್ತು AAC ಕೊಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ 5.3 ಸಂಪರ್ಕವನ್ನು ಹೊಂದಿವೆ.
Redmi ಬಡ್ಸ್ 5 ಪ್ಲೇಬ್ಯಾಕ್ ಮತ್ತು ಶಬ್ದ ರದ್ದತಿಯ ತ್ವರಿತ ನಿಯಂತ್ರಣವನ್ನು ಅನುಮತಿಸಲು ಟಚ್ ಕಂಟ್ರೊಲ್‌ಗಳನ್ನು ಒಳಗೊಂಡಿದೆ. ಇದು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇನ್ನು ಇಯರ್‌ಫೋನ್‌ಗಳು Xiaomi ಇಯರ್‌ಬಡ್ಸ್ ಅಪ್ಲಿಕೇಶನ್‌ನೊಂದಿಗೆ ಹೊಂದಿಕೊಳ್ಳುತ್ತವೆ.

ಇದಲ್ಲದೆ ಇಯರ್‌ಬಡ್ಸ್ 480mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಇದರ ಇಯರ್‌ಬಡ್‌ಗಳು 54mAh ಬ್ಯಾಟರಿಯನ್ನು ಹೊಂದಿವೆ. ಇದು ವೇಗದ ಚಾರ್ಜಿಂಗ್ ಬೆಂಬಲಿಸಲಿದ್ದು,ಕೇವಲ ಐದು ನಿಮಿಷಗಳ ಚಾರ್ಜಿಂಗ್‌ನಲ್ಲಿ ಎರಡು ಗಂಟೆಗಳ ಪ್ಲೇಟೈಮ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ನೀವು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ ನಾಲ್ಕು ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಪಡೆದುಕೊಳ್ಳಬಹುದು. ಅಲ್ಲದೆ ಚಾರ್ಜಿಂಗ್ ಕೇಸ್ ಮೂಲಕ ಒಂದೇ ಚಾರ್ಜ್‌ನಲ್ಲಿ 38 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯಬಹುದು.
ಭಾರತದಲ್ಲಿ Redmi ಬಡ್ಸ್ 5 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Redmi Buds 5 2,999ರೂ ಬೆಲೆಯನ್ನು ಹೊಂದಿದೆ. ಇದು ಫ್ಯೂಷನ್ ಬ್ಲ್ಯಾಕ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದನ್ನು ನೀವು ಫೆಬ್ರವರಿ 20 ರಿಂದ Mi.com, Amazon, Flipkart, Mi Homes ಮತ್ತು Xiaomi ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.
ಆದರೆ ಲಾಂಚ್ ಆಫರ್ ಪ್ರಯುಕ್ತ Redmi Note 13 ಸರಣಿಯ ಸ್ಮಾರ್ಟ್‌ಫೋನ್‌ಗಳು, Xiaomi Pad ಅಥವಾ Redmi Pad ಅನ್ನು ಖರೀದಿಸುವ ಗ್ರಾಹಕರು ಇಯರ್‌ಬಡ್ಸ್ ಅನ್ನು ನೀವು ಕೇವಲ 2,499ರೂ ಬೆಲೆಗೆ ಖರೀದಿಸಬಹುದು.


Click it and Unblock the Notifications








