ಶಿಯೋಮಿಯ ರೆಡ್ಮಿ ಡಿಸ್‌ಪ್ಲೇ 1A ಮಾನಿಟರ್ ಬಿಡುಗಡೆ!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಕಂಪೆನಿ ಟೆಕ್ ಮಾರುಕಟ್ಟೆ ಹಲವು ಮಾದರಿಯ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನ ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳ ವಲಯದಲ್ಲೂ ಕೂಡ ತನ್ನ ಪ್ರಾಬಲ್ಯವನ್ನ ವಿಸ್ತರಿಸಿದೆ. ಈಗಾಗಲೇ ಟೆಕ್‌ ವಲಯದಲ್ಲಿ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಮದಾಗಿರುವ ಶಿಯೋಮಿ ತನ್ನ ಸಬ್‌ಬ್ರ್ಯಾಂಡ್‌ ರೆಡ್‌ಮಿ ಬ್ರಾಂಡ್‌ನ ಅಡಿಯಲ್ಲಿ ಹಲವು ಪ್ರಾಡಕ್ಟ್‌ಗಳನ್ನ ಸಹ ಪರಿಚಯಿಸಿದೆ. ಸದ್ಯ ಇದೀಗ ರೆಡ್‌ಮಿ ಬ್ರಾಂಡ್‌ನ ಅಡಿಯಲ್ಲಿ ಹೊಸ ಡಿಸ್‌ಪ್ಲೇಯನ್ನ ಪರಿಚಯಿಸಿದೆ.

ಶಿಯೋಮಿ

ಹೌದು ಶಿಯೋಮಿ ಸಬ್‌ಬ್ರಾಂಡ್‌ ರೆಡ್ಮಿ ತನ್ನ ಹೊಸ ಮಾದರಿಯ ರೆಡ್ಮಿ ಡಿಸ್‌ಪ್ಲೇ 1A ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಡಿಸ್‌ಪ್ಲೇ ರೆಡ್ಮಿ ಬ್ರಾಮಡ್‌ನ ಅಡಿಯಲ್ಲಿ ಹೊರತಂದಿರುವ ಮೊದಲ ಮಾನಿಟರ್‌ ಡಿಸ್‌ಪ್ಲೇ ಆಗಿದೆ. ಸದ್ಯ ಈ ಡಿಸ್‌ಪ್ಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಇನ್ನು ಈ ಡಿಸ್‌ಪ್ಲೇ ವಿನ್ಯಾಸ ಹೇಗಿದೆ ಹಾಗೂ ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್‌ಮಿ ಡಿಸ್‌ಪ್ಲೆ 1A

ರೆಡ್‌ಮಿ ಡಿಸ್‌ಪ್ಲೆ 1A

ರೆಡ್‌ಮಿ ಮಾನಿಟರ್ ಡಿಸ್‌ಪ್ಲೇ 1a ಅನ್ನು ಪ್ರಸ್ತುತ ಶಿಯೋಮಿಯ ಸ್ವಂತ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಯೂಪಿನ್‌ನಲ್ಲಿ ಕ್ರೌಡ್‌ಫಂಡ್ ಮಾಡಲಾಗುತ್ತಿದೆ. ಇನ್ನು ಈ ಹೊಸ ರೆಡ್‌ಮಿ ಡಿಸ್‌ಪ್ಲೇ 23.-8-ಇಂಚಿನ ಪ್ಯಾನಲ್ ಫುಲ್‌ಹೆಚ್‌ಡಿ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಐಪಿಎಸ್ ಎಲ್ಸಿಡಿ ಪ್ಯಾನಲ್ ಆಗಿದ್ದು, ಮೇಲ್ಭಾಗದಲ್ಲಿ, ಎಡ ಮತ್ತು ಬಲಕ್ಕೆ ತೆಳುವಾದ ಬೆಜೆಲ್ ಮತ್ತು ಗಲ್ಲವನ್ನು ಹೊಂದಿದೆ. ಜೊತೆಗೆ 250 ಸಿಡಿ /m² ಬ್ರೈಟ್‌ನೆಶ್‌, ಮತ್ತು 1000: 1 ಕಾಂಟ್ರಾಸ್ಟ್ ಅನುಪಾತವನ್ನು ಒಳಗೊಂಡಿವೆ. ಇದಲ್ಲದೆ ಈ ಡಿಸ್‌ಪ್ಲೇಯು 16: 9 ರಚನೆಯ ಅನುಪಾತವನ್ನ ಹೊಂದಿದ್ದು, 16.7 ಮಿಲಿಯನ್ ಬಣ್ಣಗಳಿಗೆ ಬೆಂಬಲವನ್ನ ನೀಡಲಿದೆ. ಜೊತೆಗೆ ಇದು 60Hz ನಲ್ಲಿ ರಿಫ್ರೆಶ್ ಆಗುತ್ತದೆ ಮತ್ತು 6ms ಪ್ರತಿಕ್ರಿಯೆ ಸಮಯವನ್ನು ಹೊಂದಿರುತ್ತದೆ.

ರೆಡ್ಮಿ ಡಿಸ್‌ಪ್ಲೇ

ಇನ್ನು ರೆಡ್ಮಿ ಡಿಸ್‌ಪ್ಲೇ 1a ಕೇವಲ 7.3 ಎಂಎಂ ದಪ್ಪವಾಗಿದ್ದು, ರೆಡ್ಮಿ ಡಿಸ್ಪ್ಲೇ 1a 178 ಡಿಗ್ರಿ ನೋಡುವ ಕೋನವನ್ನು ಹೊಂದಿದೆ. ಅಲ್ಲದೆ ಕಡಿಮೆ ನೀಲಿ-ಬೆಳಕಿನ ಹೊರಸೂಸುವಿಕೆಗಾಗಿ ಟಿಯುವಿ ರೈನ್‌ಲ್ಯಾಂಡ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಜೊತೆಗೆ ಕಣ್ಣುಗಳ ಮೇಲೆ ಕಡಿಮೆ ಒತ್ತಡ ನೀಡುವುದಲ್ಲದೆ, ಮನೆಯಲ್ಲಿ ದೈನಂದಿನ ಬಳಕೆಗೆ ಉತ್ತಮ ಅನುಭವವನ್ನ ನೀಡುತ್ತದೆ. ಇದಲ್ಲದೆ, ರೆಡ್ಮಿ ಡಿಸ್ಪ್ಲೇ 1a ಅನ್ನು ಅನೇಕ ಕೋನಗಳಲ್ಲಿ ಸರಿಹೊಂದಿಸಬಹುದಾಗಿದೆ. ಇದು ವಿವಿಧ ಎತ್ತರಗಳಲ್ಲಿ ಹೊಂದಿಸಲು ಸಹಾಯ ಮಾಡುತ್ತದೆ. ಇನ್ನು ತೆಳುವಾದ ವಿನ್ಯಾಸವನ್ನ ಹೊಂದಿದ್ದು, ಬಹು-ಮಾನಿಟರ್ ಸೆಟ್‌ಅಪ್‌ಗಳಿಗಾಗಿ ರೆಡ್ಮಿ ಡಿಸ್‌ಪ್ಲೇ 1a ಅನ್ನು ಬಳಸಬಹುದಾಗಿದೆ.

ಮಾನಿಟರ್‌

ಇದಲ್ಲದೆ ಈ ಡಿಸ್ಪ್ಲೇಯು ಡಿಸಿ ಪವರ್ ಇನ್‌ಪುಟ್ ಪೋರ್ಟ್, HDMI ಪೋರ್ಟ್ ಮತ್ತು VGA ​​ಪೋರ್ಟ್ ಅನ್ನು ಒಳಗೊಂಡಿದ್ದು, ಉತ್ತಮವಾದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಮಾನಿಟರ್‌ ಬೆಲೆ CNY 499 (ಸುಮಾರು 5279 ರೂ) ಆಗಿದ್ದು, ಮೂರು ವರ್ಷಗಳ ಖಾತರಿಯನ್ನ ಕಂಪೆನಿ ನೀಡಿದೆ.

Best Mobiles in India

English summary
Redmi Display 1A has a 178-degree viewing angle and is also certified by TUV Rhineland for low blue-light emission.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X