ರೆಡ್ಮಿ G ಪ್ರೊ ಗೇಮಿಂಗ್ ನೋಟ್‌ಬುಕ್ 2024 ಲ್ಯಾಪ್‌ಟಾಪ್ ಅನಾವರಣ: ಬೆಲೆ ಎಷ್ಟು
ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಹೊಸ ಗೇಮಿಂಗ್ ನೋಟ್‌ಬುಕ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ರೆಡ್ಮಿ G ಪ್ರೊ ಗೇಮಿಂಗ್ ನೋಟ್‌ಬುಕ್ 2024 ಆವೃತ್ತಿ ಎಂದು ಹೆಸರಿಸಲಾಗಿದೆ. ಈ ಲ್ಯಾಪ್‌ಟಾಪ್ 14ನೇ Gen Intel Core i9 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ "ಐಸ್ ಕೂಲಿಂಗ್" ಕೂಲಿಂಗ್ ಆರ್ಕಿಟೆಕ್ಚರ್ ಟೆಕ್ನಾಲಜಿಯನ್ನು ಒಳಗೊಂಡಿದೆ.
ಹೌದು, ರೆಡ್ಮಿ G ಪ್ರೊ ಗೇಮಿಂಗ್ ನೋಟ್‌ಬುಕ್ 2024 ಲ್ಯಾಪ್‌ಟಾಪ್ ಬಿಡುಗಡೆ ಆಗಿದೆ. ಈ ಲ್ಯಾಪ್‌ಟಾಪ್ ಅತ್ಯಾಕರ್ಷಕ ವಿನ್ಯಾಸದೊಂದಿಗೆ ಗಮನಸೆಳೆದಿದ್ದು, WiFi-6E ಮತ್ತು ಬ್ಲೂಟೂತ್ 5.3 ಬೆಂಬಲವನ್ನು ಹೊಂದಿದೆ. ಇನ್ನು ಲ್ಯಾಪ್‌ಟಾಪ್ ಇದು NVIDIA RTX 4060 ಲ್ಯಾಪ್‌ಟಾಪ್ GPU ಹೊಂದಿದೆ. ಹಾಗಾದ್ರೆ ಹೊಸ ರೆಡ್ಮಿ G ಪ್ರೊ ಗೇಮಿಂಗ್ ಲ್ಯಾಪ್‌ಟಾಪ್ 2024 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ G ಪ್ರೊ ಗೇಮಿಂಗ್ ನೋಟ್‌ಬುಕ್ 2024 ಫೀಚರ್ಸ್ ಹೇಗಿದೆ?
ರೆಡ್ಮಿ G ಪ್ರೊ ಗೇಮಿಂಗ್ ನೋಟ್‌ಬುಕ್ 2024 ಲ್ಯಾಪ್‌ಟಾಪ್ 16 ಇಂಚಿನ 2.5K ಸ್ಕ್ರೀನ್ ಹೊಂದಿದೆ. ಈ ಡಿಸ್‌ಪ್ಲೇಯು 2560 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 240Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 178-ಡಿಗ್ರಿ ವೈಡ್ ವ್ಯೂಯಿಂಗ್ ಆಂಗಲ್ ಲೆನ್ಸ್ ಹೊಂದಿದೆ. ಈ ಡಿಸ್‌ಪ್ಲೇಯು 100% sRGB ಬಣ್ಣದ ಹರವು, 500 ನಿಟ್ಸ್ ವರೆಗೆ ಬ್ರೈಟ್‌ನೆಸ್ ಲೆವೆಲ್ ಹೊಂದಿದೆ.
ರೆಡ್ಮಿ G ಪ್ರೊ ಗೇಮಿಂಗ್ ನೋಟ್‌ಬುಕ್ 2024 ಲ್ಯಾಪ್‌ಟಾಪ್ VESA DisplayHDR 400 ಹೊಂದಿದ್ದು, DC Dimming ಡಾಲ್ಬಿ ವಿಷನ್ ಬೆಂಬಲಿಸಲಿದೆ. ಇದು 14 ನೇ ತಲೆಮಾರಿನ ಇಂಟೆಲ್ ಕೋರ್ i9-14900HX ಪ್ರೊಸೆಸರ್ (4.1GHz) ಜೊತೆಗೆ Intel Iris Xe ಗ್ರಾಫಿಕ್ಸ್, NVIDIA RTX 4060 ಲ್ಯಾಪ್‌ಟಾಪ್ GPU ಹೊಂದಿದೆ. ಹಾಗೆಯೇ 16GB RAM ಮತ್ತು 1TB SSD ಇಂಟರ್ ಸ್ಟೋರೇಜ್ ಹೊಂದಿದೆ.
ಇದಲ್ಲದೆ ಈ ಲ್ಯಾಪ್‌ಟಾಪ್ ಹೊಸ ಸ್ವಯಂ-ಅಭಿವೃದ್ಧಿಪಡಿಸಿದ "ಐಸ್ ಕೂಲಿಂಗ್" ಕೂಲಿಂಗ್ ಆರ್ಕಿಟೆಕ್ಚರ್ ಹೊಂದಿದೆ. ಇದು ಮೂರು ಆಯಾಮದ VC ಕೂಲಿಂಗ್ + CPU ಮತ್ತು GPU ಶಾಖ ವಿತರಣಾ ಚಾನಲ್ ಒಳಗೊಂಡಿದೆ. ಜೊತೆಗೆ 3 3D ಮೆಶ್ ಹೀಟ್ ಪೈಪ್‌ಗಳು ಮತ್ತು ದ್ರವ ಚಿನ್ನದ ಉಷ್ಣ ವಾಹಕ ವಸ್ತುಗಳೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ WiFi-6E ಮತ್ತು ಬ್ಲೂಟೂತ್ 5.3 ಬೆಂಬಲವನ್ನು ಹೊಂದಿದ್ದು, ಸಂಪರ್ಕ ಆಯ್ಕೆಗಳ ಶ್ರೇಣಿ, ಪೂರ್ಣ-ಗಾತ್ರದ ಬ್ಯಾಕ್‌ಲಿಟ್ ಕೀಬೋರ್ಡ್ ನೀಡಲಾಗಿದೆ.

ಇನ್ನು ಲ್ಯಾಪ್‌ಟಾಪ್ 80Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 330W ಪವರ್ ಅಡಾಪ್ಟರ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB-A 2.0 x 1, USB-A 3.2 Gen2 x 3, ಥಂಡರ್ಬೋಲ್ಟ್ 4 x 1, MiniDP 1.4 x 1, HDMI 2.1 x 1, 2.5G ವೈರ್ಡ್ ನೆಟ್ವರ್ಕ್ ಪೋರ್ಟ್ x 1, ಹೈ-ಸ್ಪೀಡ್ ಕಾರ್ಡ್ ರೀಡರ್ UHS-Ⅱ x 1 ಬೆಂಬಲಿಸಲಿದೆ. ಇದು 3.5mm ಹೆಡ್‌ಫೋನ್/ಹೆಡ್‌ಸೆಟ್ ಇಂಟರ್ಫೇಸ್, 2W × 2 ಸ್ಪೀಕರ್‌ಗಳು, ಡಿಜಿಟಲ್ ಅರೇ ಮೈಕ್ರೊಫೋನ್ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
Redmi G Pro ಗೇಮಿಂಗ್ ಲ್ಯಾಪ್‌ಟಾಪ್ 2024 ಪ್ರಸ್ತುತ ಚೀನಾದಲ್ಲಿ 8,999 ಯುವಾನ್ (ಅಂದಾಜು 1,05,720ರೂ)ಬೆಲೆಯನ್ನು ಹೊಂದಿದೆ. ಇದು ಬ್ಯಾಟಲ್‌ಶಿಪ್ ಗ್ರೇ ಬಣ್ಣದ ಆಯ್ಕೆಯಲ್ಲಿ ಬರುತ್ತದೆ.


Click it and Unblock the Notifications








