Just In
Don't Miss
- Sports
ಸೈನ್ ಮಾಡಿ ಕೆಣಕಿದ ಕೆಸ್ರಿಕ್ಗೆ ಬ್ಯಾಟ್ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ
- News
'ಅತ್ಯಾಚಾರ ರಾಜಧಾನಿ' ಉನ್ನಾವೋ: ಗಾಬರಿಗೊಳಿಸುವ ಅಂಕಿ-ಅಂಶ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Finance
ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ಪೊಕೊ ಎಫ್ 2' ನಿರೀಕ್ಷೆ ಹೆಚ್ಚಿಸಿದ 'ಪೊಕೊ ಎಫ್ 1' ಫೋನಿನ ಭಾರೀ ಬೆಲೆ ಇಳಿಕೆ!!
ಭಾರತದಲ್ಲಿ ಶಿಯೋಮಿ 'ಪೊಕೊ ಎಫ್ 2' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೆಚ್ಚಿಸುವಂತಹ ಭರ್ಜರಿ ಸುದ್ದಿ ಇದೀಗ ಸಿಕ್ಕಿದೆ. ಶಿಯೋಮಿ ಕಂಪೆನಿಯ ಮಧ್ಯಮ ವರ್ಗದ ಜನಪ್ರಿಯ ಗೇಮಿಂಗ್ ಸ್ಮಾರ್ಟ್‌ಪೋನ್ 'ಪೊಕೊ ಎಫ್ 1 'ಸ್ಮಾರ್ಟ್‌ಪೋನಿನ ಬೆಲೆ ಇದೇ ಮೊದಲ ಬಾರಿಗೆ ಊಹಿಸಲಾಗದಷ್ಟು ಇಳಿಕೆಯಾಗಿದ್ದು, ಫ್ಲಿಪ್‌ಕಾರ್ಟ್ ಮೊಬೈಲ್ ಮೇಳ ಮಾರಾಟದ ಸಮಯದಲ್ಲಿ ಶಿಯೋಮಿ 'ಪೊಕೊ ಎಫ್ 1' ಸ್ಮಾರ್ಟ್‌ಪೋನಿನ ಬೆಲೆ ಕೇವಲ 16,999 ರೂಪಾಯಿಗಳಿಂದ ಆರಂಭವಾಗಿದೆ.
ಹೌದು, ಜಿಬಿ RAM + 64 ಜಿಬಿ ಶೇಖರಣಾ ಮಾದರಿಯ ಶಿಯೋಮಿ 'ಪೊಕೊ ಎಫ್ 1 'ಸ್ಮಾರ್ಟ್‌ಪೋನಿನ ಬೆಲೆ 16,999 ರೂ.ಗಳಿಂದ ಆರಂಭವಾಗಿದ್ದರೆ, 6 ಜಿಬಿ RAM + 128 ಜಿಬಿ ಶೇಖರಣಾ ಮಾದರಿ ಸ್ಮಾರ್ಟ್‌ಪೋನಿನ ಬೆಲೆ ಕೇವಲ 17,999 ರೂ.ಗಳಿಗೆ ಇಳಿಕೆಯಾಗಿದೆ. ಇನ್ನು ಈ ಬಾರಿಯ ವಿಶೇಷವೆಂದರೆ, 8 ಜಿಬಿ RAM + 256 ಜಿಬಿ ಶೇಖರಣಾ ಹೊಂದಿರುವ ಪೊಕೊ ಎಫ್ 1 ಆರ್ಮರ್ಡ್ ಆವೃತ್ತಿ ಸ್ಮಾರ್ಟ್‌ಫೋನಿನ ಬೆಲೆ ಗಮನಾರ್ಹವಾಗಿ ಕೇವಲ 23,999 ರೂ.ಗಳಿಗೆ ಇಳಿಕೆಯಾಗಿ ಆಶ್ಚರ್ಯ ಮೂಡಿಸಿದೆ.
ಈ ವಾರದ ಆರಂಭದಲ್ಲಿ ಚೀನಾದಲ್ಲಿ ರೆಡ್ಮಿ ಕೆ20 ಬಿಡುಗಡೆಯಾಗಿದ್ದು, ಇದು ಭಾರತದಲ್ಲಿ 'ಪೊಕೊ ಎಫ್ 2' ಹೆಸರಿನಲ್ಲಿ ಕಾಲಿಡಲಿದೆ ಎಂಬುದು ಈಗಾಗಲೇ ಬಹುತೇಕ ಖಚಿತವಾಗಿದೆ. ಹಾಗಾಗಿ, ಪೊಕೊ ಎಫ್1 ಸ್ಮಾರ್ಟ್‌ಫೋನಿನ ಎಲ್ಲಾ ನಾಲ್ಕು ರೂಪಾಂತರಗಳಿಗೂ 5,000 ರೂ.ಗಳ ವಿನಿಮಯ ಪ್ರಸ್ತಾಪವನ್ನು ಸಹ ಫ್ಲಿಪ್‌ಕಾರ್ಟ್ ಆಯೋಜಿಸಿರುವುದನ್ನು ನೋಡಬಹುದು. ಹಾಗಾದರೆ, ಇತ್ತೀಚಿಗಷ್ಟೇ ಚೀನಾದಲ್ಲಿ ಭರ್ಜರಿ ಸದ್ದು ಮಾಡಿದ ರೆಡ್ಮಿ ಕೆ20 ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್
ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್
ರೆಡ್‌ಮಿ ಕೆ20 ಪ್ರೊ ರೂಪಾಂತದ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

4,000mAh ಬ್ಯಾಟರಿ
ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!
ರೆಡ್ಮಿ ಕೆ20 ಪ್ರೊನಲ್ಲಿ (ಪೊಕೊ ಫೋನ್ 2 ) 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರುವ ವದಂತಿಗಳು ಖಚಿತವಾಗಿದೆ. ಫೋನಿನಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಕ್ಯಾಮೆರಾ ಅಳವಡಿಸಲಾಗಿದೆ. ಸುಧಾರಿತ ಕ್ಯಾಮೆರಾ ತಂತ್ರಜ್ಞಾನಗಳು ಇರಲಿವೆ.

ಇತರೆ ಎಲ್ಲಾ ಫೀಚರ್ಸ್
ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೊಡಬಹುದು.

ಬೆಲೆಗಳು ಎಷ್ಟು?
ರೆಡ್‌ಮಿ ಕೆ ಪ್ರೊ ಮೂರು ಮಾದರಿಗಳಲ್ಲಿ ಪ್ರೀ ಬುಕ್ಕಿಂಗ್‌ಗೆ ಬಂದಿದ್ದು, ಬೆಲೆಗಳು ಇಂತಿವೆ. 6 ಜಿಬಿ RAM + 128 ಜಿಬಿ ಮೆಮೊರಿ- 2,599 ಯುವಾನ್ (ಅಂದಾಜು ರೂ. 26,000), 8 ಜಿಬಿ RAM + 128 ಜಿಬಿ ಮೆಮೊರಿ- 2,799 ಯುವಾನ್ (ಅಂದಾಜು ರೂ. ರೂ. 28,000), ಹಾಗೂ 8 ಜಿಬಿ RAM + 256 ಜಿಬಿ ಮೆಮೊರಿ- 2,999 ಯುವಾನ್ (ಸುಮಾರು ರೂ 30,000) ರೂ.ಗಳಾಗಿವೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090