'ರೆಡ್‌ಮಿ ಕೆ 20 ಪ್ರೊ' ಖರೀದಿಸಿದವರಿಗೆ ಭರ್ಜರಿ ಸಿಹಿಸುದ್ದಿ!

|

ಶಿಯೋಮಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ ರೆಡ್‌ಮಿ ಕೆ 20 ಪ್ರೊ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಕಡಿಮೆ ಬೆಲೆಯ ಫ್ಲಾಶ್‌ಶಿಪ್ ಪೋನ್ ಆದರೂ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡುವುದರಲ್ಲಿ ರೆಡ್‌ಮಿ ಕೆ 20 ಪ್ರೊ ಯಶಸ್ವಿಯಾಗಿದ್ದು, ಗೂಗಲ್ ಪಿಕ್ಸೆಲ್‌ ಫೋನ್‌ಗಳಿಗೆ ಆಂಡ್ರಾಯ್ಡ್ 10 ನವೀಕರಣವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಕೂಡಲೇ ರೆಡ್‌ಮಿ ಕೆ 20 ಪ್ರೊ ಕೂಡ ಈ ಅಪ್‌ಡೇಟ್ ಪಡೆಯುತ್ತಿದೆ. ಈಗಾಗಲೇ ಆಯ್ದ ರೆಡ್‌ಮಿ ಕೆ 20 ಪ್ರೊ ಬಳಕೆದಾರರು ತಮ್ಮ ರೆಡ್‌ಮಿ ಕೆ 20 ಪ್ರೊನಲ್ಲಿ ಆಂಡ್ರಾಯ್ಡ್ 10 ಬೀಟಾ ಪ್ರವೇಶವನ್ನು ಪಡೆಯುತ್ತಾರೆ ಎಂದು ಶಿಯೋಮಿ ಘೋಷಿಸಿದೆ.!

ಆಂಡ್ರಾಯ್ಡ್ 10

ಹೌದು, ದೀರ್ಘ ಕಾಯುವಿಕೆಯ ನಂತರ ಗೂಗಲ್ ಅಂತಿಮವಾಗಿ ಆಂಡ್ರಾಯ್ಡ್ 10 ನವೀಕರಣವನ್ನು ಬಿಡುಗಡೆ ಮಾಡಿದ್ದು, ಕೆಲವು ಮಾಧ್ಯಮ ವರದಿಗಳು ಆಂಡ್ರಾಯ್ಡ್ 10 ಅಪ್‌ಡೇಟ್ ಭಾರತ ಮತ್ತು ಚೀನಾಸ ರೆಡ್‌ಮಿ ಕೆ 20 ಪ್ರೊ ಬಳಕೆದಾರರಿಗೆ ಅಪ್‌ಡೇಟ್ ಬರುತ್ತಿರುವುದನ್ನು ಸೂಚಿಸಿವೆ. ಶಿಯೋಮಿಯು ಈ ಬಗ್ಗೆ ಆಸಕ್ತ ಬಳಕೆದಾರರನ್ನು ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ಮಿ ಸಮುದಾಯ ಪ್ರೊಫೈಲ್ ಲಿಂಕ್, ಮಿ ಕಮ್ಯುನಿಟಿ ಐಡಿ, ಟೆಲಿಗ್ರಾಮ್ ಅಪ್ಲಿಕೇಶನ್ ಬಳಕೆದಾರಹೆಸರು ಮತ್ತು ಹೆಚ್ಚಿನವುಗಳನ್ನು ನಮೂದಿಸಲು ಕೇಳುತ್ತಿದೆ. ಇದಾದ ನಂತರ ಇತ್ತೀಚಿನ ರೆಡ್‌ಮಿ ಫೋನ್ ಸಾಫ್ಟ್‌ವೇರ್ ರೋಲ್‌ಔಟ್‌ನಲ್ಲಿ ಆಂಡ್ರಾಯ್ಡ್ 10 ನವೀಕರಣ ಸಿಗಲಿದೆ.

ಹೊಸ ವೈಶಿಷ್ಟ್ಯಗಳಿಗೆ ಅಪ್‌ಗ್ರೇಡ್

ರೆಡ್‌ಮಿ ಕೆ 20 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ 10 ಆನ್‌ಬೋರ್ಡ್‌ನಲ್ಲಿ ಬರುತ್ತಿರುವುದರಿಂದ ಡಾರ್ಕ್ ಮೋಡ್, ಸ್ಮಾರ್ಟ್ ರಿಪ್ಲೈ, ಲೈವ್ ಕ್ಯಾಪ್ಶನ್, ಸೌಂಡ್ ಆಂಪ್ಲಿಫಯರ್, ಹೊಸ ಗೆಸ್ಚರ್ ನ್ಯಾವಿಗೇಷನ್, ಕೆಲವು ಗೌಪ್ಯತೆ ನಿಯಂತ್ರಣಗಳು, ಸ್ಥಳ ನಿಯಂತ್ರಣಗಳು, ಭದ್ರತಾ ನವೀಕರಣಗಳು, ಫೋಕಸ್ ಮೋಡ್ ಮತ್ತು ಫ್ಯಾಮಿಲಿ ಲಿಂಕ್‌ನಂತಹ ಹಲವಾರು ಹೊಸ ವೈಶಿಷ್ಟ್ಯಗಳಿಗೆ ಅಪ್‌ಗ್ರೇಡ್ ಆಗುತ್ತದೆ. ಒಟ್ಟಿನಲ್ಲಿ ರೆಡ್‌ಮಿ ಕೆ 20 ಪ್ರೊ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಭರ್ಜರಿ ಸಿಹಿಸುದ್ದಿ ಎಂದು ಹೇಳಬಹುದಾಗಿದ್ದು, ನೀವು ರೆಡ್‌ಮಿ ಕೆ 20 ಪ್ರೊ ಬಳಕೆದಾರರಾಗಿಲ್ಲದೇ ಇದ್ದರೆ, ರೆಡ್‌ಮಿ ಕೆ 20 ಪ್ರೊ ಮತ್ತು ರೆಡ್‌ಮಿ ಕೆ 20 ಸ್ಮಾರ್ಟ್‌ಫೋನ್‌ಗಳು ಹೇಗಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ

ರೆಡ್‌ಮಿ ಕೆ20 ಪ್ರೊ ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ರೆಡ್‌ಮಿ ಕೆ20 ಫೋನ್ ಕೂಡ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಪ್ರೊಸೆಸರ್

ರೆಡ್‌ಮಿ ಕೆ20 ಪ್ರೊ ರೂ ಸ್ಮಾರ್ಟ್‌ಫೋನ್ 8GB RAM ನೊಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

ರೆಡ್‌ಮಿ ಕೆ20 ಫೋನ್ 6GB RAM ನೊಂದಿಗೆ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿ. ಪ್ರೊಸೆಸರ್ 6 ಕೋರ್‌ ಕ್ಲಾಕ್ಡ್1.8 ಗಿಗಾಹರ್ಡ್ಜ ವೇಗವನ್ನು ಪಡೆದಿದೆ. ಪ್ರೊಸೆಸರ್‌ನಲ್ಲಿ‌ 8nm ತಂತ್ರಾಜ್ಞಾನವಿದ್ದು, ಇದು ಬ್ಯಾಟರಿ ಉಳಿಕೆ ಮತ್ತು ಮಲ್ಟಿಟಾಸ್ಕ್‌ಗೆ ನೆರವಾಗಲಿದೆ. ಇನ್ನು 64GB ಮತ್ತು 128GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ರಿಯರ್ ಕ್ಯಾಮೆರಾ

ರೆಡ್ಮಿ ಕೆ 20 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಪ್ರಾಥಮಿಕ ಸಂವೇದಕದೊಂದಿಗೆ ಎಫ್ / 1.75 ಲೆನ್ಸ್, 13 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ವೈಡ್-ಆಂಗಲ್ ಲೆನ್ಸ್ ಮತ್ತು ಎಫ್ / 2.4 ನೊಂದಿಗೆ 8 ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಹೊಂದಿದೆ.

ರೆಡ್‌ಮಿ ಕೆ20 ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಪ್ರಾಥಮಿಕ ಸಂವೇದಕದೊಂದಿಗೆ ಎಫ್ / 1.75 ಲೆನ್ಸ್, 13 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ವೈಡ್-ಆಂಗಲ್ ಲೆನ್ಸ್ ಮತ್ತು ಎಫ್ / 2.4 ನೊಂದಿಗೆ 8 ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಹೊಂದಿದೆ.

ಸೆಲ್ಫಿ ಕ್ಯಾಮೆರಾ!

ರೆಡ್ಮಿ ಕೆ 20 ಪ್ರೊ ಫೋನ್‌ನಲ್ಲಿ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, ಈ ಕ್ಯಾಮೆರಾವು ಪಾಪ್‌ಅಪ್‌ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್‌ ಕ್ಯಾಮೆರಾಗೆ ದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಪೋಟೊ ಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ.

ರೆಡ್‌ಮಿ ಕೆ20 ಫೋನ್‌ನಲ್ಲೂ ಕೂಡ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾವು ಪಾಪ್‌ಅಪ್‌ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್‌ ಕ್ಯಾಮೆರಾಗೆದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಪೋಟೊ ಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ.

4,000mAh ಬ್ಯಾಟರಿ ಶಕ್ತಿ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ರೆಡ್‌ಮಿ ಕೆ20 ಸ್ಮಾರ್ಟ್‌ಫೋನ್ ಕೂಡ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆದರೆ ಈ ಡಿವೈಸ್ 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ಸಹ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಇತರೆ ಎಲ್ಲಾ ಫೀಚರ್ಸ್

ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

ರೆಡ್ಮಿ ಕೆ20 ಪ್ರೊ ಫೋನಿನಲ್ಲೂ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

Best Mobiles in India

English summary
Android 10 is here. The latest Android version already comes to Pixel phones and some of the compatible devices like the Redmi K20 Pro.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X