Just In
- 6 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 7 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 8 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 8 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು ರೆಡ್ಮಿ'ಕೆ 20' ಮತ್ತು 'ಕೆ 20 ಪ್ರೊ' ಫೋನ್‌ಗಳ ಎರಡನೇ ಫ್ಲಾಶ್‌ಸೇಲ್!
ಇದೇ ಜುಲೈ 21 ರಂದು ಮೊಟ್ಟ ಮೊದಲ ಮಾರಾಟಕ್ಕೆ ಬಂದಿದ್ದ ಶಿಯೋಮಿ ರೆಡ್ಮಿ ಕೆ 20 ಪ್ರೊ ಮತ್ತು ರೆಡ್ಮಿ ಕೆ 20 ಸ್ಮಾರ್ಟ್‌ಫೋನ್‌ಗಳ ಖರೀದಿಯನ್ನು ನೀವು ತಪ್ಪಿಸಿಕೊಂಡಿದ್ದರೆ ಇಂದು ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ. ಏಕೆಂದರೆ, ಶಿಯೋಮಿ ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಪೋನ್‌ಗಳು ಇಂದು (ಜುಲೈ 29) ಮತ್ತೆ ಖರೀದಿಗೆ ಲಭ್ಯವಿರುತ್ತವೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಫ್ಲಿಪ್‌ಕಾರ್ಟ್ ಮತ್ತು ಮೈ.ಕಾಂನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮತ್ತೊಮ್ಮೆ ಫ್ಲಾಶ್‌ಸೇಲ್ ಮಾರಾಟಕ್ಕೆ ಇಡಲಾಗಿದೆ.

ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಎರಡು ಸ್ಟೋರೇಜ್ ಮತ್ತು RAM ರೂಪಾಂತರಗಳಲ್ಲಿ ಲಭ್ಯವಿವೆ. 6ಜಿಬಿ RAM ಮತ್ತು 64 ಜಿಬಿ ಶೇಖರಣಾ ಮಾದರಿಯ ರೆಡ್‌ಮಿ ಕೆ 20 ಪೋನ್ ಬೆಲೆ 21,999 ರೂ. ಮತ್ತು 6 ಜಿಬಿ RAM ಮತ್ತು 128 ಜಿಬಿ ಶೇಖರಣಾ ಮಾದರಿಯ ಫೋನ್ ಬೆಲೆ 23,999 ರೂ.ಗಳಾಗಿವೆ. ಮತ್ತೊಂದೆಡೆ, ರೆಡ್ಮಿ ಕೆ 20 ಪ್ರೊ 6 ಜಿಬಿ RAM ಮತ್ತು 128 ಜಿಬಿ ಶೇಖರಣಾ ಮಾದರಿಗೆ 27,999 ರೂ.ಗಳಿಂದ ಪ್ರಾರಂಭವಾಗಿದೆ, 8 ಜಿಬಿ RAM ಮತ್ತು 256 ಜಿಬಿ ರೂಪಾಂತರದ ಬೆಲೆ 30,999 ರೂ.ಗಳಾಗಿವೆ.
ಒನ್‌ಪ್ಲಸ್ 7ಗೆ ಸೆಡ್ಡು ಹೊಡೆಯುವ ಸಲುವಾಗಿ ಫ್ಲಾಗ್‌ಶಿಪ್ ಮಾದರಿಯಲ್ಲಿ ಬಿಡುಗಡೆಯಾಗಿರುವ ಈ ಎರಡೂ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಬಂದಿವೆ ಎಂದು ಹೇಳಬಹುದು. ಹಾಗಾದರೆ, ಶಿಯೋಮಿ ರೆಡ್ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಪೋನ್‌ಗಳು ಹೇಗಿವೆ?, ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಪೋನ್‌ಗಳ ನಡುವ ಇರುವ ವ್ಯತ್ಯಾಸಗಳು ಯಾವುವು? ನಾವು ನೀಡುವ ಹಣಕ್ಕೆ ಯಾವ ಸ್ಮಾರ್ಟ್‌ಫೋನ್ ಬೆಸ್ಟ್ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡಿಸ್ಪ್ಲೇ
ರೆಡ್‌ಮಿ ಕೆ20 ಪ್ರೊ ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.
ರೆಡ್‌ಮಿ ಕೆ20 ಫೋನ್ ಕೂಡ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಪ್ರೊಸೆಸರ್
ರೆಡ್‌ಮಿ ಕೆ20 ಪ್ರೊ ರೂ ಸ್ಮಾರ್ಟ್‌ಫೋನ್ 8GB RAM ನೊಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.
ರೆಡ್‌ಮಿ ಕೆ20 ಫೋನ್ 6GB RAM ನೊಂದಿಗೆ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿ. ಪ್ರೊಸೆಸರ್ 6 ಕೋರ್ ಕ್ಲಾಕ್ಡ್1.8 ಗಿಗಾಹರ್ಡ್ಜ ವೇಗವನ್ನು ಪಡೆದಿದೆ. ಪ್ರೊಸೆಸರ್‌ನಲ್ಲಿ 8nm ತಂತ್ರಾಜ್ಞಾನವಿದ್ದು, ಇದು ಬ್ಯಾಟರಿ ಉಳಿಕೆ ಮತ್ತು ಮಲ್ಟಿಟಾಸ್ಕ್‌ಗೆ ನೆರವಾಗಲಿದೆ. ಇನ್ನು 64GB ಮತ್ತು 128GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ರಿಯರ್ ಕ್ಯಾಮೆರಾ
ರೆಡ್ಮಿ ಕೆ 20 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಪ್ರಾಥಮಿಕ ಸಂವೇದಕದೊಂದಿಗೆ ಎಫ್ / 1.75 ಲೆನ್ಸ್, 13 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ವೈಡ್-ಆಂಗಲ್ ಲೆನ್ಸ್ ಮತ್ತು ಎಫ್ / 2.4 ನೊಂದಿಗೆ 8 ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಹೊಂದಿದೆ.
ರೆಡ್‌ಮಿ ಕೆ20 ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಪ್ರಾಥಮಿಕ ಸಂವೇದಕದೊಂದಿಗೆ ಎಫ್ / 1.75 ಲೆನ್ಸ್, 13 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ವೈಡ್-ಆಂಗಲ್ ಲೆನ್ಸ್ ಮತ್ತು ಎಫ್ / 2.4 ನೊಂದಿಗೆ 8 ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಹೊಂದಿದೆ.

ಸೆಲ್ಫಿ ಕ್ಯಾಮೆರಾ!
ರೆಡ್ಮಿ ಕೆ 20 ಪ್ರೊ ಫೋನ್‌ನಲ್ಲಿ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, ಈ ಕ್ಯಾಮೆರಾವು ಪಾಪ್‌ಅಪ್ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್ ಕ್ಯಾಮೆರಾಗೆ ದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಪೋಟೊ ಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ.
ರೆಡ್‌ಮಿ ಕೆ20 ಫೋನ್‌ನಲ್ಲೂ ಕೂಡ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾವು ಪಾಪ್‌ಅಪ್ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್ ಕ್ಯಾಮೆರಾಗೆದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಪೋಟೊ ಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ.

4,000mAh ಬ್ಯಾಟರಿ ಶಕ್ತಿ
ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.
ರೆಡ್‌ಮಿ ಕೆ20 ಸ್ಮಾರ್ಟ್‌ಫೋನ್ ಕೂಡ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆದರೆ ಈ ಡಿವೈಸ್ 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ಸಹ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಇತರೆ ಎಲ್ಲಾ ಫೀಚರ್ಸ್
ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.
ರೆಡ್ಮಿ ಕೆ20 ಪ್ರೊ ಫೋನಿನಲ್ಲೂ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

ಒಟ್ಟಾರೆ ವ್ಯತ್ಯಾಸಗಳು!
ರೆಡ್‌ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ ಎರಡು ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಯಾಂತ್ರಿಕೃತ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಫೋನ್‌ಗಳು AMOLED ಸ್ಕ್ರೀನ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 4,000mAh ದೊಡ್ಡ ಬ್ಯಾಟರಿಯಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಆದಾಗ್ಯೂ, ಎರಡು ಫೋನ್‌ಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ವಿಶೇಷವೆಂದರೆ, ಕೆ 20 ಪ್ರೊ ಪ್ರೀಮಿಯಂ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ನಿಂದ ಚಾಲಿತವಾಗಿದ್ದರೆ, ಕೆ 20 ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ರೆಡ್ಮಿ ಕೆ 20 ಪ್ರೊ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಿದರೆ, ರೆಡ್‌ಮಿ ಕೆ20 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಈ ಮೂರು ವ್ಯತ್ಯಾಸಗಳು ನಿರ್ಧರಿಸಿವೆ. ಒಟ್ಟಿನಲ್ಲಿ ನಾವು ನೀಡುವ ಹಣಕ್ಕೆ ಎರಡೂ ಫೋನ್‌ಗಳು ಕೂಡ ಬೆಸ್ಟ್ ಆಯ್ಕೆ ಎಂದು ಹೇಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470