ಶಿಯೋಮಿಯಿಂದ ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್!

|

ಭಿನ್ನ ಪ್ರೈಸ್‌ಟ್ಯಾಗ್ ಸರಣಿಯಲ್ಲಿ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿರುವ ಶಿಯೋಮಿ ಸಂಸ್ಥೆಯು ದೈತ್ಯ ಸ್ಮಾರ್ಟ್‌ಫೋನ್‌ಗಳಿಂದಲೂ ಗುರುತಿಸಿಕೊಂಡಿದೆ. ಶಿಯೋಮಿಯು ಇದೀಗ ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ವೃತ್ತಾಕಾರದ ರಚನೆಯಲ್ಲಿದೆ. ಡಿಸ್‌ಪ್ಲೇಯ ಪ್ರಖರತೆಯು ಕೂಡಾ ಹೈ ಎಂಡ್‌ನಲ್ಲಿದೆ.

ರೆಡ್ಮಿ ಕೆ30 ಅಲ್ಟ್ರಾ

ಹೌದು, ಶಿಯೋಮಿ ಇದೀಗ ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಮೀಡಿಯಾ ಟೆಕ್‌ ಡೈಮನಸಿಟಿ 1000+ SoC ಪ್ರೊಸೆಸರ್ ಒಳಗೊಂಡಿರುವ ಜೊತೆಗೆ 8GB RAM ಪಡೆದಿದೆ. ಮುಖ್ಯ ಕ್ಯಾಮೆರಾವು 64 ಎಂಪಿ ಸೆನ್ಸಾರ್‌ನಲ್ಲಿದ್ದು, 4,500mAh ಬ್ಯಾಟರಿ ಬಾಳಿಕೆ ಪಡೆದುಕೊಂಡಿದೆ. ಹಾಗಾದರೆ ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.67 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಈ ಫೋನ್ ಟಚ್ ರೀಫ್ರೇಶ್ ರೇಟ್ 120Hz ಆಗಿದ್ದು, ಡಿಸ್‌ಪ್ಲೇಯ ಪ್ರಖರತೆಯು 1200nits ಸಾಮರ್ಥ್ಯದಲ್ಲಿದೆ. ಇನ್ನು ಬ್ರೈಟ್ನೆಸ್‌ ಹಾಗೂ ಕಾಂಟ್ರಾಸ್ಟ್‌ 5,000,000:1 ರೇಶಿಯೋ ಆಗಿದೆ.

ಪ್ರೊಸೆಸರ್ ಬಲವೇನು

ಪ್ರೊಸೆಸರ್ ಬಲವೇನು

ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಡೈಮನಸಿಟಿ 1000+ SoC ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಪಡೆದಿದೆ. ಈ ಫೋನ್ ನಾಲ್ಕು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 6GB RAM + 128GB, 8GB RAM + 128GB, 8GB RAM + 256GB ಮತ್ತು 8GB RAM + 512GB ಸ್ಟೋರೇಜ್ ಹೊಂದಿವೆ.

ಕ್ವಾಡ್‌ ಕ್ಯಾಮೆರಾ

ಕ್ವಾಡ್‌ ಕ್ಯಾಮೆರಾ

ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಹೊಂದಿದ್ದು, ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ನಾಲ್ಕನೇಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನಲ್ಲಿದೆ ಹಾಗೂ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಒದಗಿಸಲಾಗಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, 33W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ. ಡ್ಯುಯಲ್-ಮೋಡ್ 5 ಜಿ, ವೈ-ಫೈ 6, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇತ್ತೀಚಿನ ಅಪ್‌ಡೇಟ್ ಫೀಚರ್ಸ್‌ಗಳು ಸಹ ಇವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ ಕೆ30 ಅಲ್ಟ್ರಾ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆ ಆಗಿದೆ. ರೆಡ್ಮಿ ಕೆ30 ಅಲ್ಟ್ರಾ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ರೆಡ್ಮಿ ಕೆ30 ಅಲ್ಟ್ರಾ 6GB RAM + 128GB ವೇರಿಯಂಟ್ ಬೆಲೆಯು CNY 1,999 (ಅಂದಾಜು 21,500ರೂ) ಆಗಿದೆ. 8GB RAM + 256GB CNY 2,499 (ಅಂದಾಜು 26,800ರೂ) ಹಾಗೂ 8GB RAM + 512GB CNY 2,699 (ಅಂದಾಜು 29,000ರೂ) ಆಗಿದೆ.

Most Read Articles
Best Mobiles in India

English summary
The device comes with a 64-megapixel primary camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X