Redmi: 2 ಹೊಸ ಮೊಬೈಲ್ ಬಿಡುಗಡೆಗೆ ಸಿದ್ಧ; ಫೀಚರ್ಸ್ ಬಹಿರಂಗ.. ಲಾಂಚ್ ಯಾವಾಗ?
ಶಿಯೋಮಿಯ (Xiaomi) ಉಪ ಬ್ರಾಂಡ್ ರೆಡ್ಮಿ (Redmi) ಶೀಘ್ರದಲ್ಲೇ ತನ್ನ 'K' ಸರಣಿಯಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಸರಣಿಯ ಅಡಿಯಲ್ಲಿ ರೆಡ್ಮಿ K80 (Redmi K80) ಮತ್ತು ರೆಡ್ಮಿ K80 ಪ್ರೊ (Redmi K80 Pro) ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಯಿದೆ. ಮುಂಬರುವ ಕೆಲವೇ ದಿನಗಳಲ್ಲಿ ಈ ಬಗ್ಗೆ ಕಂಪನಿಯು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ. ಈ ಮಧ್ಯೆ, ರೆಡ್ಮಿ K80 ಪ್ರೊ (Redmi K80 Pro) ಫೋನಿನ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಬನ್ನಿ, ಈ ಹೊಸ ಫೋನ್ ಹೇಗಿರಲಿದೆ? ವಿಶೇಷತೆಗಳೇನು? ತಿಳಿಯೋಣ.
ಕಂಪನಿಯು ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಅನ್ನು ಫ್ಲಾಟ್ OLED ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಿದೆ. ಇದು ಪಂಚ್ ಹೋಲ್ ಕಟೌಟ್, ತೆಳುವಾದ ಬೆಜೆಲ್‌ಗಳು, 2K ರೆಸಲ್ಯೂಶನ್ ಮತ್ತು ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿರಲಿದೆ. ಪ್ರೊಸೆಸರ್ ಬಗ್ಗೆ ಹೇಳುವುದಾದರೆ, ರೆಡ್ಮಿ K80 ಪ್ರೊ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 ಚಿಪ್‌ಸೆಟ್‌ನಲ್ಲಿ ಕೆಲಸ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಚಿಪ್‌ಸೆಟ್ ಈ (ಅಕ್ಟೋಬರ್) ತಿಂಗಳಲ್ಲಿ ಬಿಡುಗಡೆಯಾಗಲಿದೆ.

ರೆಡ್ಮಿ K80 ಪ್ರೊ ಫೋನಿನ ವಿನ್ಯಾಸ (ಸೋರಿಕೆ)
ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ರೌಂಡ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ. ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಅಲಂಕಾರಿಕ ಸ್ಟಡ್‌ಗಳು ಇರುವುದಿಲ್ಲ. ಆದರೆ, ಗಾಜಿನ ಹಿಂಭಾಗ ಮತ್ತು ಲೋಹದ ಮಧ್ಯದ ಚೌಕಟ್ಟು ಇರಲಿದೆ.
ರೆಡ್ಮಿ K70 ಪ್ರೊ ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ ವಿವರ
ರೆಡ್ಮಿ K70 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ TCL C8 OLED ಡಿಸ್ಲ್ಪೇಯನ್ನು ಹೊಂದಿರಲಿದೆ. ಇದು 2K ರೆಸಲ್ಯೂಶನ್, 4000 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು120 Hz ರಿಫ್ರೆಶ್ ದರದೊಂದಿಗೆ ಬರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಈ ರೆಡ್ಮಿ K70 ಪ್ರೊ ಸ್ಮಾರ್ಟ್‌ಫೋನ್ ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಬಹುದು. ಈ ಫೋನ್ 24GB LPDDR5 RAM ಮತ್ತು 1TB UFS 4.0 ಸ್ಟೋರೇಜ್ ಅನ್ನು ಹೊಂದಿರಲಿದೆ.
ಕ್ಯಾಮೆರಾ ಸೆಟಪ್
ರೆಡ್ಮಿ K70 ಪ್ರೊ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ. ಇದು 50 ಮೆಗಾಪಿಕ್ಸೆಲ್ OIS ಪ್ರಾಥಮಿಕ ಕ್ಯಾಮೆರಾ ಒಳಗೊಂಡಿರಲಿದೆ ಜೊತೆಗೆ, 50 ಮೆಗಾಪಿಕ್ಸೆಲ್ ಟೆಲಿಫೋಟೋ 2x ಜೂಮ್ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿರಲಿದೆ. ಈ ಫೋನನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.
ಬ್ಯಾಟರಿ ಬ್ಯಾಕಪ್
ಕಂಪನಿಯು ರೆಡ್ಮಿ K70 ಪ್ರೊ ಮೊಬೈಲ್ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.
ಇತರೆ ವೈಶಿಷ್ಟ್ಯಗಳು
ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರಲಿದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವಿಡಿಯೋಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








