ಇಂದು Redmi K80 ಸರಣಿ ಬಿಡುಗಡೆ; ಒಂದಲ್ಲ.. ಮೂರು ಫೋನ್; ವಿಶೇಷತೆಗಳೇನು?
ರೆಡ್ಮಿ ಪ್ರಿಯರ ಕಾಯುವಿಕೆ ಮುಗಿಯಿತು! ಮೂರು ಹೊಸ ಮೊಬೈಲ್ ಇಂದು ಗ್ರಾಹಕರ ಕೈ ಸೇರಲಿವೆ. ಹೌದು, ರೆಡ್ಮಿ (Redmi) ಇಂದು (ನ.27) ತನ್ನ ರೆಡ್ಮಿ K80 ಸರಣಿಯನ್ನು (Redmi K80) ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ Redmi K80, Redmi K80 Pro ಮತ್ತು Redmi K80 Pro Plus ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಬಿಡುಗಡೆಗೂ ಮೊದಲೇ, ರೆಡ್ಮಿ K80 ಪ್ರೊ ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಂಪನಿಯು ರೆಡ್ಮಿ K80 ಪ್ರೊ ಮೊಬೈಲ್ ಅನ್ನು ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವುದು ಖಚಿತವಾಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಲಭ್ಯವಿದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಇರಲಿದೆ. ಜೊತೆಗೆ, IP69 ರೇಟಿಂಗ್, 6500mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಹೊಸ ಮೊಬೈಲ್ ಬಿಡುಗಡೆಯಾಗಲಿದೆ.

ರೆಡ್ಮಿ K80 ಸರಣಿ ಬಿಡುಗಡೆ ವಿವರ
ರೆಡ್ಮಿ K80 ಸರಣಿಯು ಇಂದು (ನ.27) ಚೀನಾದಲ್ಲಿ ಲೋಕಾರ್ಪಣೆಯಾಗಲಿದೆ. ರೆಡ್ಮಿ ವಾಚ್ 5 ಮತ್ತು ಬಡ್ಸ್ 6 ಸಹ ರೆಡ್ಮಿ K80 ಸರಣಿಯ ಜೊತೆಗೆ ಬಿಡುಗಡೆಯಾಗಲಿದೆ. ಬಳಿಕ, ಈ ಫೋನ್‌ಗಳು ಭಾರತ ಸೇರಿದಂತೆ ಇನ್ನಿತರ ದೇಶಗಳ ಮಾರುಕಟ್ಟೆಗೆ ಬರಲಿವೆ. ಈಗಾಗಲೇ, ರೆಡ್ಮಿ K80 ಪ್ರೊ ಫೋನಿನ ವಿನ್ಯಾಸ ಬಹಿರಂಗವಾಗಿದೆ. ಇದು ಸ್ನೋ ವೈಟ್ ಬಣ್ಣದ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಲೋಹದ ಚೌಕಟ್ಟನ್ನು ಕಾಣಬಹುದು. ಈ ಫೋನ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ.
ರೆಡ್ಮಿ K80 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ K80 ಪ್ರೊ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 2K ಓಎಲ್‌ಇಡಿ ಹೋಲ್ ಪಂಚ್ ಡಿಸ್ಪ್ಲೇಆಗಿದೆ. ಡಿಸ್ಪ್ಲೇಯು 3200 × 1440 ಪಿಕ್ಸೆಲ್ ರೆಸಲ್ಯೂಶ್‌ನೊಂದಿಗೆ ಬರಲಿದೆ. ಇದು 120Hz ರಿಫ್ರೆಶ್ ದರ, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಜೊತೆಗೆ, ಶಿಯೋಮಿ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 2.0 ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರೆಡ್ಮಿ K80 ಪ್ರೊ ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು ಡ್ಯುಯಲ್ ಲೂಪ್ 3D ಐಸ್ ಸೀಲ್ಡ್ ಸಿಸ್ಟಮ್ ಹೊಂದಿದೆ. ಈ ಫೋನ್ D1 ಗೇಮಿಂಗ್‌ಗಾಗಿ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ AnTuTu ಬೆಂಚ್‌ಮಾರ್ಕ್ ಸ್ಕೋರ್ 31,94,766 ಹೊಂದಿದೆ.

ಕ್ಯಾಮೆರಾ ಸೆಟಪ್
ನೂತನ ರೆಡ್ಮಿ K80 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ (ಟೆಲಿಫೋಟೋ ಲೆನ್ಸ್) ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ರೆಡ್ಮಿ ಹೇಳಿದೆ.
ಇತರೆ ವೈಶಿಷ್ಟ್ಯಗಳು
ರೆಡ್ಮಿ K80 ಪ್ರೊ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್ ಪಡೆದಿದೆ. ಜೊತೆಗೆ, ಶಿಯೋಮಿ ಸ್ಟಾರ್ ಕಮ್ಯುನಿಕೇಷನ್ (ಸಂವಹನ) ತಂತ್ರಜ್ಞಾನ ಮತ್ತು ಶಿಯೋಮಿ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 2.0 ರಕ್ಷಣೆಯನ್ನು ಹೊಂದಿದೆ.


Click it and Unblock the Notifications








