Amazonನಲ್ಲಿ ಮೌತ್‌ವಾಶ್‌ ಆರ್ಡರ್‌ ಮಾಡಿದವನಿಗೆ ಸಿಕ್ಕಿದದ್ದೇನು ಗೊತ್ತಾ?

|

ಇತ್ತೀಚಿನ ದದಿನಗಳಲ್ಲಿ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಬಹುತೇಕ ಜನರು ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಪ್ರಾಡಕ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ಪಡೆದುಕೊಳ್ಳುತ್ತಾರೆ. ಗ್ರಾಹಕರು ಆನ್‌ಲೈನ್‌ ಮಾಡಿದ ಪ್ರಾಡಕ್ಟ್‌ಗಳನ್ನು ತಲುಪಿಸುವ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಕೆಲವೊಮ್ಮೆ ಎಡವಟ್ಟುಗಳಿಗೂ ಕಾರಣವಾಗಿವೆ. ಕೆಲವು ಬಾರಿ ಗ್ರಾಹಕರು ಮಾಡಿದ ಆರ್ಡರ್‌ಗೆ ಬದಲಾಗಿ ಬೇರೆ ಪ್ರಾಡಕ್ಟ್‌ಗಳನ್ನು ತಲುಪಿಸಿ ಪೇಚಿಗೆ ಸಿಲುಕಿದ ಘಟನೆಗಳು ಸಾಕಷ್ಟಿವೆ.

ಕಾಮರ್ಸ್‌

ಹೌದು, ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಕೆಲವೊಮ್ಮೆ ಗ್ರಾಹಕರು ಆರ್ಡರ್‌ ಮಾಡಿದ ವಸ್ತುಗಳಿಗೆ ಬದಲಿ ವಸ್ತು ಕಳುಹಿಸಿ ಪೇಚಿಗೆ ಸಿಲುಕಿವೆ. ಅದರಲ್ಲೂ ಕೆಲವೊಮ್ಮೆ ಗ್ರಾಹಕರು ದುಆರಿ ವಸ್ತು ಖರೀದಿಸಲು ಹೋಗಿ ಮೋಸ ಹೋಗಿರುವ ಘಟನೆಗಳು ಕೂಡ ನಡೆದಿದೆ. ಆದರೆ ಇದೀಗ ಅಮೆಜಾನ್‌ನಲ್ಲಿ ನಡೆದಿರುವ ಘಟನೆ ಸೊಶೀಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಗ್ರಾಹಕನೊಬ್ಬ ಮೌತ್‌ವಾಶ್‌ ಬಾಟಲ್‌ನ್ನು ಆರ್ಡರ್‌ ಮಾಡಿದ್ರೆ, ಅಮೆಜಾನ್‌ ಸ್ಮಾರ್ಟ್‌ಫೋನ್‌ ಅನ್ನು ಕಳುಹಿಸಿ ನಗೆಪಾಟಲಿಗೀಡಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಎಲ್ಲಿ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೌತ್‌ವಾಶ್‌

ಮುಂಬೈನಲ್ಲಿ ವಾಸ ಮಾಡುವ ಗ್ರಾಹಕನೊಬ್ಬ ಈ ವಾರದ ಆರಂಭದಲ್ಲಿ ಅಮೆಜಾನ್‌ನಿಂದ ಮೌತ್‌ವಾಶ್‌ ಅನ್ನು ಆರ್ಡರ್‌ ಮಾಡಿದ್ದಾರೆ. ಆದರೆ ಅವರು ಆರ್ಡರ್‌ ಮಾಡಿದ್ದ ಮೌತ್‌ವಾಶ್‌ ಬಾಟಲಿಗಳಿಗೆ ಬದಲಾಗಿ ರೆಡ್‌ಮಿ ನೋಟ್‌ 10 ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ ಕಳುಹಿಸಿದ್ದಾರೆ. ಇದನ್ನು ಟ್ವಿಟರ್ ಬಳಕೆದಾರ ಲೋಕೇಶ್ ದಾಗಾ ಅವರು ತಮ್ಮ ಪೋಸ್ಟ್‌ನಲ್ಲಿ ಅಮೆಜಾನ್ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಅವರು ಆರ್ಡರ್‌ ಮಾಡಿದ್ದ ಮಾಹಿತಿಯ ಸ್ಕ್ರೀನ್‌ಶಾಟ್ ಜೊತೆಗೆ ರೆಡ್‌ಮಿ ನೋಟ್ 10 ರ ಚಿತ್ರವನ್ನು ಹಂಚಿಕೊಂಡಿದ್ದಾರೆ.

ದಾಗಾ

ಲೋಕೇಶ್ ದಾಗಾ ಇದೇ ಮೇ 10 ರಂದು ಅಮೆಜಾನ್‌ನಲ್ಲಿ 396 ರೂ.ಗಳ ಬೆಲೆಯ ನಾಲ್ಕು ಕೋಲ್ಗೇಟ್ ಮೌತ್‌ವಾಶ್ ಬಾಟಲಿಗಳಿಗೆ ಆರ್ಡರ್‌ ಮಾಡಿರುತ್ತಾರೆ. ಆದರೆ ಅದಕ್ಕೆ ಬದಲಿಗೆ ಅವರಿಗೆ ಸಿಕ್ಕಿರೋದು 13,000 ರೂ.ಬೆಲೆಯ ರೆಡ್‌ಮಿ ನೋಟ್ 10 ಸ್ಮಾರ್ಟ್‌ಫೋನ್‌. ತಾವು ಪಡೆದ ಪಾರ್ಸಲ್‌ ತೆಗೆದು ನೋಡಿದಾಗ ಇದು ಬೆಳಕಿಗೆ ಬಂದಿದೆ. ಅಲ್ಲದೆ ತಮಗೆ ಸಿಕ್ಕಿದ ಪಾರ್ಸಲ್‌ ಒಳಗಡೆ ಇದ್ದ ಮಾಹಿತಿಯನ್ನು ಪರಿಶೀಲಿಸಿದ ಗ್ರಾಹಕರ ಇದು ಬೇರೆಯವರಿಗೆ ಸೇರಬೇಕಾದ ಪಾರ್ಸಲ್‌ ನನಗೆ ಮೌತ್‌ವಾಶ್‌ ಬಾಟಲಿ ಕಳುಹಿಸಿಕೊಡಿ ಎಂದಯ ಟ್ವೀಟ್‌ ಮಾಡಿದ್ದಾರೆ.

ಲೋಕೇಶ್‌

ಆದರೆ ಲೋಕೇಶ್‌ ದಾಗಾ ಅವರ ಪೋಸ್ಟ್‌ ನೋಡಿದ ಹಲವಾರು ಟ್ವೀಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಾಕಷ್ಟು ರಿಟ್ವೀಟ್‌ ಮಾಡಿದ್ದ್ಉ, ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅದರಲ್ಲೂ ಕೆಲವರಂತೂ ನಿಮಗೆ ಬೇಕಾದ ಮೌತ್‌ವಾಶ್‌ ಬಾಟಲಿಯನ್ನು ನಾನು ಆರ್ಡರ್‌ ಮಾಡುತ್ತೇನೆ. ನಿಮಗೆ ದೊರೆತಿರುವ ಸ್ಮಾರ್ಟ್‌ಫೋನ್‌ ಅನ್ನು ನನಗೆ ಕಳುಹಿಸಿ ಎಂಬ ಚಿತ್ರ ವಿಚಿತ್ರ ಬೇಡಿಕೆಗಳನ್ನು ಇಟ್ಟಿದ್ದಾರೆ. ಅಮೆಜಾನ್‌ ನಂತಹ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಕೆಲವೊಮ್ಮೆ ಗ್ರಾಹಕರು ಮೋಸ ಹೋಗಿರುವ ಘಟನೆಗಳು ನಡೆಯುತ್ತವೆ. ಇನ್ನು ಕೆಲವೊಮ್ಮೆ ಈ ರೀತಿಯ ಘಟನೆಗಳು ಕೂಡ ವರದಿಯಾಗುತ್ತಿವೆ.

Best Mobiles in India

Read more about:
English summary
Twitter user Lokesh Daga ordered mouthwash from Amazon and received a Redmi Note 10 instead. His story has gone viral on social media.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X