ರೆಡ್ಮಿ ನೋಟ್‌ 11 ಫೋನ್‌ ಸರಣಿ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಟೆಕ್‌ ವಲಯದಲ್ಲಿ ಶಿಯೋಮಿ ಕಂಪೆನಿ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಎನಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಬಹು ನಿರೀಕ್ಷಿತ ರೆಡ್ಮಿ ನೋಟ್‌ 11 ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಸರಣಿಯಲ್ಲಿ ರೆಡ್ಮಿ ನೋಟ್‌ 11, ರೆಡ್ಮಿ ನೋಟ್‌ 11 ಪ್ರೊ ಮತ್ತು ರೆಡ್ಮಿ ನೋಟ್‌ 11 ಪ್ರೊ+ ಸ್ಮಾರ್ಟ್‌ಫೋನ್‌ ಸೇರಿವೆ. ಇದರಲ್ಲಿ ರೆಡ್ಮಿ ನೋಟ್‌ 11 ಪ್ರೊ ಮತ್ತು ರೆಡ್ಮಿ ನೋಟ್‌ 11 ಪ್ರೊ+ ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ನಿಂದ ಗಮನ ಸೆಳೆದಿವೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಹೊಸ ರೆಡ್ಮಿ ನೋಟ್‌ 11 ಸರಣಿ ಲಾಂಚ್‌ ಮಾಡಿದೆ. ಇದರಲ್ಲಿ ರೆಡ್ಮಿ ನೋಟ್‌ 11 ಪ್ರೊ ಮತ್ತು ರೆಡ್ಮಿ ನೋಟ್‌ 11 ಪ್ರೊ + ಸ್ಮಾರ್ಟ್‌ಫೋನ್‌ಗಳು 120Hz ಅಮೋಲೆಡ್‌ ಡಿಸ್‌ಪ್ಲೇ ಹೊಂದಿವೆ. ಇನ್ನು ಈ ಎರಡೂ ಫೋನ್‌ಗಳು ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 108ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಈ ಎರಡೂ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್ಮಿ ನೋಟ್‌ 11 ಪ್ರೊ

ರೆಡ್ಮಿ ನೋಟ್‌ 11 ಪ್ರೊ

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 920 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,160mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ರೆಡ್ಮಿ ನೋಟ್‌ 11 ಪ್ರೊ+

ರೆಡ್ಮಿ ನೋಟ್‌ 11 ಪ್ರೊ+

ರೆಡ್ಮಿ ನೋಟ್‌ 11 ಪ್ರೊ+ ಸ್ಮಾರ್ಟ್‌ಫೋನ್‌ ಕೂಡ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ಬೆಂಬಲವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌ ಹೊಂದಿದೆ. ಜೊತೆಗೆ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 4,500mAh ಬ್ಯಾಟರಿ ಹೊಂದಿದ್ದು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರಲ್ಲಿ 15 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪೆನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ CNY 1599 (ಸುಮಾರು 18,700 ರೂ.)ಬೆಲೆ ಹೊಂದಿದೆ. ಇನ್ನು 8GB + 128GB ರೂಪಾಂತರವು CNY 1,899 (ಸುಮಾರು 22,300ರೂ) ಬೆಲೆ ಹೊಂದಿದೆ. ಹಾಗೆಯೇ 8GB + 256GB ಆಯ್ಕೆಯು CNY 2,099 (ಸುಮಾರು 24,500ರೂ)ಬೆಲೆ ಹೊಂದಿದೆ.
ಇನ್ನು ರೆಡ್ಮಿ ನೋಟ್‌ 11ಪ್ರೊ+ ಸ್ಮಾರ್ಟ್‌ಫೋನ್‌ 6GB + 128GB ಆಯ್ಕೆಗೆ CNY 1,899 (ಸುಮಾರು ರೂ. 22,200) ಬೆಲೆ ಹೊಂದಿದೆ. ಇದು 8GB RAM + 128GB ಸ್ಟೋರೇಜ್ ಆಯ್ಕೆಗೆ CNY 2,099 (ಸುಮಾರು ರೂ. 24,500) ಬೆಲೆ ಹೊಂದಿದೆ. ಈ ಎರಡು ಪ್ರೊ ಮಾದರಿಗಳು ಮಿಸ್ಟಿ ಫಾರೆಸ್ಟ್, ಮಿಸ್ಟೀರಿಯಸ್ ಬ್ಲ್ಯಾಕ್, ಶಾಲೋ ಡ್ರೀಮ್ ಗ್ಯಾಲಕ್ಸಿ ಮತ್ತು ಟೈಮ್ ಕ್ವಿಟ್ ಪರ್ಪಲ್ ವರ್ಣಗಳಲ್ಲಿ ಬರುತ್ತವೆ. ಈ ಸ್ಮಾರ್ಟ್‌ಫೋನ್‌ಗಳು ನವೆಂಬರ್ 1 ರಿಂದ ಮಾರಾಟವಾಗಲಿದೆ.

Most Read Articles
Best Mobiles in India

English summary
Redmi Note 11 Pro, Redmi Note 11 Pro+ With MediaTek SoCs Launched: Price, Specifications.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X