ಇಂದು ನಡೆಯಲಿದೆ ರೆಡ್ಮಿ ನೋಟ್ 12 4G ಮತ್ತು ರೆಡ್ಮಿ 12C ಫಸ್ಟ್ ಸೇಲ್! ಏನೆಲ್ಲಾ ಆಫರ್!
ರೆಡ್ಮಿ ಕಂಪೆನಿ ಕಳೆದ ವಾರ ಭಾರತದಲ್ಲಿ ರೆಡ್ಮಿ ನೋಟ್ 12 4G ಮತ್ತು ರೆಡ್ಮಿ 12C ಸ್ಮಾರ್ಟ್‌ಫೋನ್‌ಗಳನ್ನು ಪರಿಯಿಸಿತ್ತು. ಈ ಎರಡು ಸ್ಮಾರ್ಟ್‌ಫೋನ್‌ಗಳು ತಮ್ಮ ವೈವಿಧ್ಯಮಯವಾದ ಫೀಚರ್ಸ್‌ಗಳಿಂದ ಗಮನಸೆಳೆದಿವೆ. ಇದೀಗ ಈ ಎರಡು ಸ್ಮಾರ್ಟ್‌ಫೋನ್‌ಗಳು ಇಂದು (ಏ.6) ಮಧ್ಯಾಹ್ನ 12 ರಿಂದ ಭಾರತದಲ್ಲಿತಮ್ಮ ಮೊದಲ ಸೇಲ್ ಅನ್ನು ಆರಂಭಿಸಲಿವೆ.
ಹೌದು, ರೆಡ್ಮಿ ನೋಟ್ 12 4G ಮತ್ತು ರೆಡ್ಮಿ 12C ಸ್ಮಾರ್ಟ್‌ಫೋನ್‌ಗಳ ಫಸ್ಟ್ ಸೇಲ್ ಇಂದಿನಿಂದ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್, ಅಮೆಜಾನ್, ಮಿ ವೆಬ್‌ಸೈಟ್, ಮಿ ಹೋಮ್ ಸ್ಟೋರ್‌ಗಳು ಮತ್ತು ರಿಟೇಲ್ ಔಟ್‌ಲೆಟ್‌ಗಳ ಮೂಲಕ ಫಸ್ಟ್ ಸೇಲ್ ನಡೆಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ಗಳ ಮೇಲಿನ ಲಾಂಚ್ ಆಫರ್ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ನೋಟ್ 12 4G ಫಸ್ಟ್ ಸೇಲ್ ಆಫರ್ ಏನಿದೆ?
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ 6GB + 64GB ರೂಪಾಂತರದ ಆಯ್ಕೆಗೆ 14,999ರೂ. ಹಾಗೂ 6GB + 128GB ಸ್ಟೋರೇಜ್ ಆಯ್ಕೆಗೆ 16,999ರೂ. ಬೆಲೆ ಹೊಂದಿದೆ. ಆದರೆ ಫಸ್ಟ್ ಸೇಲ್ ಪ್ರಯುಕ್ತ ರೆಡ್ಮಿ ನೋಟ್ 12 4G ಅನ್ನು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕೇವಲ 13,999ರೂ.ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೇ 128GB ರೂಪಾಂತರದ ಆಯ್ಕೆಯನ್ನು ಕೇವಲ 15,999ರೂ. ಬೆಲೆಯಲ್ಲಿ ಪಡೆದುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್ ಸನ್‌ರೈಸ್ ಗೋಲ್ಡ್, ಲೂನಾರ್ ಬ್ಲ್ಯಾಕ್ ಮತ್ತು ಫ್ರಾಸ್ಟೆಡ್ ಐಸ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಬರಲಿದೆ.
ರೆಡ್ಮಿ 12C ಫಸ್ಟ್ ಸೇಲ್ ಆಫರ್ ಹೇಗಿದೆ?
ರೆಡ್ಮಿ 12C ಸ್ಮಾರ್ಟ್‌ಫೋನ್ ಬಜೆಟ್ ಸ್ನೇಹಿ ಆಗಿದ್ದು ಬೇಸ್ ಮಾಡೆಲ್ 4GB RAM ಮತ್ತು 64GB ಆಯ್ಕೆಯು ಕೇವಲ 8,499 ರೂ. ಬೆಲೆಯಲ್ಲಿ ಬರಲಿದೆ. ಇದರ 6GB + 128GB ರೂಪಾಂತರದ ಆಯ್ಕೆಯು 9,499ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲೂ, ಬ್ಲ್ಯಾಕ್, ನೇರಳೆ ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.

ರೆಡ್ಮಿ ನೋಟ್ 12 4G ಫೀಚರ್ಸ್ ಹೇಗಿದೆ?
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ವೇಗದ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರೆಡ್ಮಿ12C ಫೀಚರ್ಸ್ ಹೇಗಿದೆ?
ರೆಡ್ಮಿ12C ಸ್ಮಾರ್ಟ್‌ಫೋನ್ 6.71 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 20.6:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದು ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೆಜ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications








