ಭಾರತದಲ್ಲಿ ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆ
ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಇದೀಗ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಈ ಮೂಲಕ ರೆಡ್ಮಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಸಿಹಿಸುದ್ದಿ ದೊರೆತಿದೆ. ಬಿಡುಗಡೆ ಆದ ದಿನದಿಂದಲೂ ಸಾಕಷ್ಟು ಟ್ರೆಂಡ್ ಕ್ರಿಯೆಟ್ ಮಾಡಿರುವ ರೆಡ್ಮಿ ನೋಟ್ 12 4G ಫೋನ್ ಇದೀಗ ಕಡಿಮೆ ಬೆಲೆಗೆ ದೊರೆಯಲಿದೆ.
ಹೌದು, Redmi Note 12 4G ಸ್ಮಾರ್ಟ್‌ಫೋನ್ ಶಾಶ್ವತ ಬೆಲೆ ಇಳಿಕೆಯನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಹಾಗಾದ್ರೆ ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಕಡಿಮೆ ಆಗಿದೆ. ಇದರ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ರೆಡ್ಮಿ ನೋಟ್ 12 4G ಬೆಲೆ ಎಷ್ಟು ಕಡಿತವಾಗಿದೆ?
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಬೆಲೆ ಇದೀಗ 13,999ರೂ ಗಳಿಗೆ ಬದಲಾಗಿ 12,999ರೂ ಬೆಲೆಗೆ ಕುಸಿದಿದೆ. ಇದಲ್ಲದೆ ವಿವಿಧ ಬ್ಯಾಂಕ್ ಕಾರ್ಡ್ ಆಫರ್‌ಗಳನ್ನು ಸೇರ್ಪಡೆ ಮಾಡಿದರೆ ಇದರ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ. ಈ ಸ್ಮಾರ್ಟ್‌ಫೋನ್ ಐಸ್ ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ರೆಡ್ಮಿ ನೋಟ್ 12 4G ಫೀಚರ್ಸ್
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲೇಯರ್ ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ರೆಡ್ಮಿ ನೋಟ್ 12 4G ಪ್ರೊಸೆಸರ್ ಯಾವುದು?
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಇನ್ನು ಸ್ಮಾರ್ಟ್‌ಫೋನ್ 6GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಿದೆ. ಸದ್ಯ 6GB RAM + 64GB ಆಯ್ಕೆಯ ಮೇಲೆ ನಿಮಗೆ ಆಫರ್ ದೊರೆಯುತ್ತಿದೆ.
ರೆಡ್ಮಿ ನೋಟ್ 12 ಕ್ಯಾಮೆರಾ ಸೆಟಪ್ ಏನಿದೆ?
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ರೆಡ್ಮಿ ನೋಟ್ 12 4G ಬ್ಯಾಟರಿ ಮತ್ತು ಇತರೆ
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಕಂಪಾಸ್ ಅನ್ನು ಹೊಂದಿರಲಿದೆ.


Click it and Unblock the Notifications








